ಒಂದು ಡೈಲಾಗ್​ನಲ್ಲಿ ನಮ್ಮ ಮೈ ಮೇಲೆ 16 ಮಚ್ಚೆಗಳಿವೆ ಅಂತಾ ಹಿರೋಯಿನ್​ ಹೇಳುತ್ತಾಳೆ ̤

ಹೈದರಾ ಬಾದ್​:ಸಿನಿಮಾಗಳು ಈಗ ಅರ್ಥ ಕಳೆದುಕೊಂಡು ಅವಾಂತರಗಳನ್ನ ಸೃಷ್ಟಿಸುತ್ತಿವೆ. ಸಿನಿಮಾ ಪ್ರಚಾರಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಹುದು ಅನ್ನೀ ಚೀಪ್ ಮೆಂಟಾಲಿಟಿ ಈಗ ಬೆಳೆದಿದೆ. ಸದ್ಯ ಇಂತಹದ್ದೆ ಒಂದು ಘಟನೆ ಹೈದರಾಬಾದ್​ನ ಸಿನಿಮಾ ಕಾರ್ಯಕ್ರಮದಲ್ಲಿ ನಡೆದಿದೆ.ತೆಲುಗಿನ ಡಿಜೆ ಟಿಲ್ಲು ಎಂಬ ಸಿನಿಮಾ ಕಾರ್ಯಕ್ರಮದಲ್ಲಿ ನಟಿಗೆ ಸಿನಿಮಾ ಪತ್ರಕರ್ತ ಅಸಭ್ಯ ಪ್ರಶ್ನೆಗಳನ್ನ ಕೇಳಿ ಇಕಟ್ಟಿಗೆ ಸಿಲುಕಿದ್ದಾನೆ. ಸಿನಿಮಾದಲ್ಲಿ ಒಂದು ಡೈಲಾಗ್​ನಲ್ಲಿ ನಮ್ಮ ಮೈ ಮೇಲೆ 16 ಮಚ್ಚೆಗಳಿಗೆ ಅಂತಾ ಹಿರೋಯಿನ್​ ಹೇಳುತ್ತಾಳೆ. ಅದೇ ಪ್ರಶ್ನೆಯನ್ನ ಕಾರ್ಯಕ್ರಮದಲ್ಲಿ ನಟಿಗೆ ಕೇಳಿದ ಪತ್ರಕರ್ತ ನಿಮ್ಮ ಮೈ ಮೇಲಿರುವ ಮಚ್ಚೆಗಳನ್ನ ಹಿರೋ ನೋಡಿದ್ರಾ ಎಂದು ಕೇಳಿದ್ದಾನೆ. ಇದು ಈಗ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ವಿವಾದ ಸೃಷ್ಟಿಸಿದ್ದು. ಅಭಿಮಾನಿಗಳು ಪತ್ರಕರ್ತ ಸುರೇಶ್​ ಕೊಂಡೇಟಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇತ್ತ ವಿವಾದ ದೊಡ್ಡದಾಗುತ್ತಲೇ ಸುರೇಶ್​ ಸಹ ಅಭಿಮಾನಿಗಳನ್ನ ಕ್ಷಮೆ ಯಾಚಿಸಿದ್ದಾರೆ, ನನ್ನ ಉದ್ದೇಶ ತಪ್ಪಾಗಿರಲಿಲ್ಲ. ನನ್ನಿಂದ ತಪ್ಪಾಗಿದ್ದಾರೆ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ. ಅಂದಹಾಗೆ ಈ ಸಿನಿಮಾ ನಟಿ ನೇಹಾ ಶೆಟ್ಟಿ ಇದರ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ, ಇದೊಂದು ಅಸಾಂದಾರ್ಭಿಕವಾಗಿ ನಡೆದು ಹೋಗಿದೆ ಅವರ ಉದ್ದೇಶಪೂರ್ವಕವಾಗಿ ಕೇಳಿಲ್ಲ ಅಂತಾ ಸಮರ್ಥಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಟಿಎಸ್: ಸೆಟ್ನಲ್ಲಿ ದೀಪಿಕಾ ಪಡುಕೋಣೆ ಏನು ಮಾಡುತ್ತಿದ್ದಾರೆಂದು ಊಹಿಸಲು ಅನನ್ಯ ಪಾಂಡೆ ಅಭಿಮಾನಿಗಳನ್ನು ಕೇಳುತ್ತಾರೆ;

Fri Feb 4 , 2022
ಅನನ್ಯಾ ಪಾಂಡೆ ಪ್ರಸ್ತುತ ತನ್ನ ಮುಂಬರುವ ಬಿಡುಗಡೆಯಾದ `ಗೆಹ್ರೈಯಾನ್` ಮೂಲಕ ಎತ್ತರದ ಕುದುರೆ ಸವಾರಿ ಮಾಡುತ್ತಿದ್ದಾರೆ. ನಿರ್ದೇಶಕ ಶಕುನ್ ಬಾತ್ರಾ ಅವರು ಪೋಸ್ಟ್ ಮಾಡಿದ ದೀಪಿಕಾ ಪಡುಕೋಣೆ ಮತ್ತು ಧೈರ್ಯ ಕರ್ವಾ ಒಳಗೊಂಡ ಚಿತ್ರೀಕರಣದ ಸೆಟ್‌ಗಳಿಂದ ಉಲ್ಲಾಸದ ಬಿಟಿಎಸ್ ಅನ್ನು ಮರುಪೋಸ್ಟ್ ಮಾಡುವ ಮೂಲಕ ಇಂದು ನಟಿ ತನ್ನ ಸಾಮಾಜಿಕ ಮಾಧ್ಯಮಕ್ಕೆ ಕರೆದೊಯ್ದರು. ಒಂದು ವೀಡಿಯೊದಲ್ಲಿ, ಅವಳು ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿರುವ ಗೆಹ್ರೈಯಾನ್‌ನ ಶೀರ್ಷಿಕೆ ಟ್ರ್ಯಾಕ್‌ನೊಂದಿಗೆ ಈಜುತ್ತಿರುವುದನ್ನು ಕಾಣಬಹುದು. ಇನ್ನೊಂದರಲ್ಲಿ, […]

Advertisement

Wordpress Social Share Plugin powered by Ultimatelysocial