ಸಮೋಸ, ಮಾವಿನ ಕಾಯಿ ಚಟ್ನಿ ಮಾಡಿದ ಆಸ್ಟ್ರೇಲಿಯಾ ಪ್ರಧಾನಿ

ಸಿಡ್ನಿ : ಜೂನ್‌ 4ರಂದು ಪ್ರಧಾನಿ ನರೇಂದ್ರ ಮೋದಿ ಜೊತೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ.  ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌. ಪ್ರಧಾನಿ ಮೋದಿಗಾಗಿ ಸಮೋಸ ಮತ್ತು ಮಾವಿನ ಕಾಯಿ ಚಟ್ನಿಯನ್ನು ತಯಾರಿಸಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಸಮೋಸ ಚಿತ್ರಗಳನ್ನು ಟ್ವೀಟ್‌ ಮಾಡಿರುವ ಪ್ರಧಾನಿ ಮಾರಿಸನ್‌. ಮಾವಿನ ಕಾಯಿ ಚಟ್ನಿ ಜೊತೆ ಭಾನುವಾರದ ಸಮೋಸ ತಯಾರಿಸಿದ್ದು, ಈ ವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ವಿಡಿಯೋ ಕಾನ್ಫರೆನ್ಸ್‌ ಇದೆ. ಅವರು ಸಸ್ಯಾಹಾರಿಯಾಗಿದ್ದು, ನಾನು ಅವರ ಜೊತೆ ಇದನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ ಎಂದಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಿ ಮಾರಿಷನ್‌ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಎರಡು ರಾಷ್ಟ್ರಗಳು ಹಿಂದೂ ಮಹಾಸಾಗರದ ಜೊತೆ ಸಂಪರ್ಕ ಸಾಧಿಸಿದ್ದು, ಭಾರತದ ಸಮೋಸ ಜೊತೆ ಒಂದಾಗಿದ್ದೇವೆ ಎಂದು ಹೇಳಿದ್ದಾರೆ. ಸಮೋಸ ರುಚಿಕರವಾಗಿರುವಂತೆ ಕಾಣುತ್ತಿದೆ ಎಂದಿದ್ದಾರೆ. ಇನ್ನು, ಕೊರೊನಾ ಯುದ್ಧದಲ್ಲಿ ಜಯ ಸಾಧಿಸಿದ ಮೇಲೆ ಜೊತೆಗೂಡಿ ಸಮೋಸ ಸವಿಯೋಣ. ನಾನು ಕೂಡ ಜೂನ್‌ 4ನೇ ತಾರೀಕಿನ ವಿಡಿಯೋ ಕಾನ್ಫರೆನ್ಸ್‌ಗಾಗಿ ಕಾಯುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ಮೈ ನಡುಗಿಸುತ್ತೇ ಈ ಪುಟ್ಟ ಬಾಲಕಿಯ ಕೆಲಸ

Mon Jun 1 , 2020
ಬೀಜಿಂಗ್‌: ಎಲಿವೇಟರ್ನಲ್ಲಿ ಮಗುವೊಂದು ಅಪಾಯಕ್ಕೆ ಸಿಲುಕಿದ ಘಟನೆ ಹುಬೇ ಪ್ರಾಂತ್ಯದ ದಯೆ ಎಂಬಲ್ಲಿ ನಡೆದಿದೆ.‌ ಈ ಹೃದಯವಿದ್ರಾವಕ ಘಟನೆಯು ಸಿಸಿ ಟಿವಿ ವಿಡಿಯೋವನ್ನು ಅಲ್ಲಿನ ಸುದ್ದಿ ಸಂಸ್ಥೆ ಪೀಪಲ್ಸ್ ಡೇಲಿ ಟ್ವಿಟರ್ ನಲ್ಲಿ ಅಪ್ ಲೋಡ್ ಮಾಡಿದೆ. 2 ವರ್ಷದ ಹೆಣ್ಣು ಮಗು ಏಕಾಂಗಿಯಾಗಿ ಎಲಿವೇಟರ್(ಲಿಫ್ಟ್) ನೊಳಗೆ ನಡೆದು ಬರುತ್ತದೆ. ಎಲಿವೇಟರ್ ನ ಬಾಗಿಲ ಮೇಲೆ ಇರುವ ಸುರಕ್ಷಾ‌ ಹಗ್ಗವು ಇದ್ದಕ್ಕಿದ್ದಂತೆ ಬಾಲಕಿಯ ಕೈಯ್ಯನ್ನು ಎಳೆದುಕೊಳ್ಳುತ್ತದೆ. ಒಂದು ಹಂತದಲ್ಲಿ ಬಾಲಕಿಯನ್ನು […]

Advertisement

Wordpress Social Share Plugin powered by Ultimatelysocial