ಸರ್ಕಾರದ ಆಹಾರ ಸ್ವಂತಕ್ಕೆ ಬಳಕೆ:ಸಿದ್ದರಾಮಯ್ಯ

ಬೆಂಗಳೂರುಅನೇಕಲ್​ನಲ್ಲಿ ಅಂಗನವಾಡಿ ಮಕ್ಕಳ ಆಹಾರ ದುರ್ಬಳಕೆ ಪ್ರಕರಣ ಸಂಬಂಧ ಸಚಿವರ ರಾಜೀನಾಮೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆನೇಕಲ್​ನಲ್ಲಿ ಕೇವಲ ಸ್ಯಾಂಪಲ್ ಅಷ್ಟೇ. ಇಡೀ ರಾಜ್ಯದಲ್ಲೇ ಇದು ನಡೆಯುತ್ತಿದೆ. ನಮ್ಮ ಶಾಸಕರು, ಸಂಸದರಿರುವ ಕಡೆಯೇ ಹೀಗೆ. ಇನ್ನು ಬಿಜೆಪಿ ಶಾಸಕರಿರುವ ಕಡೆ ಹೇಗೆ ನಡೆಯುತ್ತಿರಬಹುದು. ಯಡಿಯೂರಪ್ಪನವರು ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರದಿಂದ ಅಂಗನವಾಡಿಗೆ ಕೊಟ್ಟ ಆಹಾರ ಪದಾರ್ಥವನ್ನು ಬಿಜೆಪಿಯ ಸ್ಥಳೀಯ ನಾಯಕರು ತಮ್ಮ ಸ್ವಂತ ಕೊಡುಗೆಯ ರೀತಿ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸಕ್ಕರೆ ಸೇರಿ ಬೇರೆ ಆಹಾರ ಪದಾರ್ಥದ ಕವರ್ ಚೇಂಜ್ ಮಾಡಿ ಅವರ ಕವರ್​ಗೆ ಹಾಕಿದ್ದಾರೆ. ಅದನ್ನ ಜನರಿಗೆ ನಾವು ಕೊಟ್ಟಿದ್ದು ಅಂತ ಹಂಚಿದ್ದಾರೆ. ಆನೇಕಲ್ ತಾಲೂಕಿನಾದ್ಯಂತ ಹಂಚಿದ್ದಾರೆ. ಹಿಂದೆಯೂ ಹೀಗೆ ಮಾಡಿದ್ದರು. ಆಗಲೂ ನಾವು ಬಯಲಿಗೆಳೆದಿದ್ದೆವು. ಮಕ್ಕಳು, ಬಾಣಂತಿಯರ ಆಹಾರ ಈ ರೀತಿ ಮಾಡಿದ್ರೆ ಹೇಗೆ? ಬಿಜೆಪಿಯವರಿಗೆ ಮಾನಮರ್ಯಾದೆ ಇದ್ಯಾ? ಇವರು ಇನ್ನೆಂತ ಬಂಡರಿರಬೇಕು. ಇದು ನಿರ್ಲಜ್ಜತನದ ಪರಮಾವಧಿ. ಇದರ ಬಗ್ಗೆ ನಮ್ಮವರು ಕೇಸ್ ಕೂಡ ಕೊಟ್ಟಿದ್ದಾರೆ. ಇದಕ್ಕೆ ಏಳು ವರ್ಷ ಜೈಲು ಶಿಕ್ಷೆಯಾಗಲಿದೆ. ಹೀಗಾಗಿ ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇದಕ್ಕೆ ನೇರ ಹೊಣೆ ಸಿಎಂ ಯಡಿಯೂರಪ್ಪ ಆಗುತ್ತಾರೆ. ಸಿಎಂ ಅವರೇ ಇನ್ ಚಾರ್ಜ್ ಇದ್ರೂ ಹೀಗಾಗಿದೆ. ಮಹಿಳಾ ಮಕ್ಕಳ ಕಲ್ಯಾಣ ಸಚಿವೆ ಏನ್ಮಾಡ್ತಿದ್ದಾರೆ? ಇದರ ಬಗ್ಗೆ ಡಿ.ಕೆ.ಶಿವಕುಮಾರ್ ಬಹಿರಂಗ ಪಡಿಸಿದ್ದಾರೆ. ಆ ಬಗ್ಗೆ ಕೂಡಲೇ ಸಿಎಂ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ಸ್ಯಾನಿಟೈಸರ್ ಬಳಸಿ ಮದ್ಯ ತಯಾರಿಸಿದ್ದವ ಕಂಬಿ ಹಿಂದೆ

Sun May 3 , 2020
ಮಧ್ಯಪ್ರದೇಶ: ಕೊರೊನಾ ಲಾಕ್ ಡೌನ್ ದೇಶದಾದ್ಯಂತ ಘೋಷಣೆ ಮಾಡಿದ ಮೇಲೆ ಮದ್ಯ ಮಾರಾಟ ಸಂಪೂರ್ಣ ನಿಂತುಹೋಗಿದೆ. ಒಂದಕ್ಕೆ ಎರಡು ಪಟ್ಟು, ಹತ್ತು ಪಟ್ಟು ಹಣ ಕೊಟ್ಟು ಖರೀದಿ ಮಾಡುತ್ತಿರುವ ಪ್ರಕರಣಗಳು ಅಲ್ಲಿಲ್ಲಿ ಕಂಡುಬರುತ್ತಿವೆ. ಆದರೆ ಮಧ್ಯಪ್ರದೇಶದಲ್ಲಿ ತೀರ ಅಪರೂಪದ ಪ್ರಕರಣವೊಂದು ಕಂಡುಬಂದಿದೆ. ಸ್ಯಾನಿಟೈಜರ್ ದ್ರವವನ್ನೇ ಬಳಸಿಕೊಂಡು ಮದ್ಯ ತಯಾರಿಸಿದ್ದ ವ್ಯಕ್ತಿಯನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಅಂದಹಾಗೆ, ಹ್ಯಾಂಡ್ ಸ್ಯಾನಿಟೈಜರ್ ನಲ್ಲಿ ಇರುವ ಅತಿ ಮುಖ್ಯ ವಸ್ತುವೇ ಆಲ್ಕೋಹಾಲ್. ಆರೋಪಿಯ ಹೆಸರು […]

Advertisement

Wordpress Social Share Plugin powered by Ultimatelysocial