ಸರ್ಕಾರದ ವಿರುದ್ಧ ಕಮಲ್ ಹಾಸನ್ ಗರಂ

ಕರ್ನಾಟಕ ಸರ್ಕಾರ ಬಾರ್ ಓಪನ್ ಮಾಡಿ ಮದ್ಯಪ್ರಿಯರಿಗೆ ಕೊರೋನಾ ಗಿಫ್ಟ್ ನೀಡಿದ್ದಾರೆ. ಜನ ಜೀವಭಯದ ಜೊತೆಯೇ ಭರ್ಜರಿಯಾಗಿ ಎಣ್ಣೆ ಹೊಡಿತ್ತಿದ್ದಾರೆ. ಕರ್ನಾಟಕದ ನಿರ್ಧಾರ ನೋಡಿ ಈಗ ತಮಿಳುನಾಡು ಸರ್ಕಾರ ಕೂಡಾ ಬಾರ್ ಓಪನ್ ಮಾಡೋದಕ್ಕೆ ತಯಾರಿ ನಡೆಸಿದೆ. ಈಗಾಗ್ಲೇ ಆರ್ಥಿಕ ಸ್ಥಿತಿ ನೆಲಕಚ್ಚಿರೋದ್ರಿಂದ ಸರ್ಕಾರಗಳು ಅಬಕಾರಿ ಇಲಾಖೆ ಮೇಲೆ ಕಣ್ಣು ಹಾಯಿಸಿವೆ. ಮೇ ಏಳರ ನಂತ್ರ ತಮಿಳುನಾಡಿನಲ್ಲಿ ಬಾರ್ ಓಪನ್ ಮಾಡೋದಕ್ಕೆ ಸರ್ಕಾರ ಯೋಚಿಸಿದೆ. ಇದರ ವಿರುದ್ಧ ನಟ ಕಮಲ್ ಹಾಸನ್ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರಗಳು ಬಡವರ ಪರವಾಗಿ ಯೋಚನೆ ಮಾಡಬೇಕು. ಕೊಯಂಬೆದು ಮಾರುಕಟ್ಟೆಯನ್ನ ಕಾಪಾಡಲು ಸೋತ ಸರ್ಕಾರ ಈಗ ಲಿಕ್ಕರ್ ಅಂಗಡಿ ತೆರೆಯಲು ಮುಂದಾಗಿದೆ. ಸರ್ಕಾರದ ತಪ್ಪು ಹೆಜ್ಜೆಯಿಂದ ಜೀವಹಾನಿಯಾಗುತ್ತೆ. ಇದರ ಅರಿವು ಸರ್ಕಾರಕ್ಕೆ ಇದೆಯಾ ಅಂತ ಪ್ರಶ್ನಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ನೀಟ್ ಪರೀಕ್ಷೆಗೆ ಡೆಟ್ ಫಿಕ್ಸ್...

Wed May 6 , 2020
ನವದೆಹಲಿ:ಕೊರೊನಾ ಹಿನ್ನಲೆ ಮುಂದೂಡಲಾಗಿದ್ದ ಪರೀಕ್ಷೆಗಳ ದಿನಾಂಕವನ್ನು ನಿಗದಿಪಡಿಸಲಾಗಿದೆ. ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕಾಗಿ ನಡೆಯುವ ಜಂಟಿ ಪ್ರವೇಶ ಪರೀಕ್ಷೆ ಜುಲೈ ೧೮ರಿಂದ ೨೩ರವೆಗೆ ಹಾಗೂ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಇರುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಜುಲೈ ೨೬ರಂದು ಜರುಗಲಿದೆ ಎಂದು ಕೇಂದ್ರದ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿವಾಲ್ ನಿಶಾಂಕ್ ತಿಳಿಸಿದ್ದಾರೆ. ಜೆಇಇ ಮೆನ್ಸ್ ಪರೀಕ್ಷೆ ಜುಲೈ ೧೮ರಿಂದ ೨೩ರವರೆಗೆ ಹಾಗೂ ಜೆಇಇ ಅಡ್ವಾನ್ಸ್ ಪರೀಕ್ಷೆ ಆಗಸ್ಟ್ನಲ್ಲಿ ನಡೆಸಲಾಗುವುದು ಎಂದು ನಿಶಾಂಕ್ […]

Advertisement

Wordpress Social Share Plugin powered by Ultimatelysocial