ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಯಿಂದ ಪ್ರತಿಭಟನೆ !

ಅಖಿಲ ಕರ್ನಾಟಕ ಡಾ. ಬಿ ಆರ್ ಅಂಬೇಡ್ಕರ್ ಬೇಡ ಜಂಗಮ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ತಾಲೂಕ ಘಟಕ ರಾಮದುರ್ಗ ವತಿಯಿಂದ ಸತ್ಯ ಪ್ರತಿಪಾದನಾ ಸತ್ಯಾಗ್ರಹ ಮೂಲಕ ಪ್ರತಿಭಟಿಸಿ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ನಡೆದ ಪ್ರತಿಭಟನೆ ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಡಿ. ಹಿರೇಮಠ ಹಾಗೂ ಸಮಾಜದ ಮುಖಂಡರನ್ನು ಬಂಧಿಸಿರುವದನ್ನು ಖಂಡಿಸಿ ಮತ್ತು ಬೇಡ ಜಂಗಮರ ಜಾತಿ ದಾಖಲಾತಿಗಳನ್ನು ಸರಿಯಾಗಿ ವಿತರಣೆ ಮಾಡದಿರುವದನ್ನು ಖಂಡಿಸಿ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆ ಹತ್ತಿರದ ವೃತದಿಂದ ಮಿನಿ ವಿಧಾನ ಸೌಧದವರೆಗೂ ಪ್ರತಿಭಟನೆ ಮಾಡುತ್ತಾ ಬಿ.ಡಿ. ಹಿರೇಮಠರನ್ನು ಮತ್ತು ಸಮಾಜದ ಮುಖಂಡರನ್ನು ಬಂಧಿಸಿದ್ದಕ್ಕೆ ಹಾಗೂ ಜಾತಿ ಪ್ರಮಾಣ ಪತ್ರ ಪಡೆದಿರುವಂತ ಎಲ್ಲಾ ದಾಖಲಾತಿಗಳು ದೃಡೀಕರಣದ ನಕಲನ್ನು ಪಡೆದುಕೊಳ್ಳಲು ಒಂದು ವರ್ಷ ಆರು ತಿಂಗಳು ಗತಿಸಿದರು ದಾಖಲಾತಿಗಳನ್ನು ಕೊಟ್ಟಿರುವುದಿಲ್ಲ ಇದಕ್ಕೆ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ತಹಶೀಲ್ದಾರ್ ಕಚೇರಿಯಲ್ಲಿ ಬೇಡ ಜಂಗಮರ ದಾಖಲಾತಿಗಳನ್ನು ಸರಿಯಾಗಿ ವಿತರಣೆ ಮಾಡದೇ ಇರುವದರಿಂದ ಇಂದು ಮಿನಿವಿಧಾನಸೌಧದ ತಹಸಿಲ್ದಾರ್ ಕಾರ್ಯಾಲಯದ ಮುಂದೆ ಸತ್ಯ ಪ್ರತಿಪಾದನಾ ಸತ್ಯಾಗ್ರಹದ ಪ್ರತಿಭಟನೆ ನಡೆಸಿದರು..

ನಂತರ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು

ಈ ಸಂದರ್ಭದಲ್ಲಿ ಕಟಕೋಳ ಎಂ. ಚಂದರಗಿಯ ಶ್ರೀ ವೀರಭದ್ರೇಶ್ವರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ಬಾಗೋಜಿಕೊಪ್ಪದ ಶ್ರೀ ಷ ಬ್ರ ಮುರುಗರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ರಾಮದುರ್ಗದ ಶ್ರೀ ಶಾಂತವೀರ ಮಹಾಸ್ವಾಮಿಗಳು ಶ್ರೀ ರೇಣುಕ ಶಿವಯೋಗೀಶ್ವರ ಮಹಾಸ್ವಾಮಿಗಳು, ಸೋಮು ಹಲಗಿಮಠ ಸಾಲಹಳ್ಳಿ ಅಧ್ಯಕ್ಷರು ಸೇರಿದಂತೆ ಸಮಾಜದ ಹಲವು ಮುಖಂಡರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸಮರ್ಪಕ ಬಸ್ ವ್ಯವಸ್ಥೆಗೆ ಬೇಸತ್ತ ವಿದ್ಯಾರ್ಥಿಗಳು !

Tue Jul 12 , 2022
ಸವದತ್ತಿ : ತಾಲೂಕಿನ ಚಿಕ್ಕ ಉಳ್ಳಿಗೇರಿ ಗ್ರಾಮದಿಂದ ಸವದತ್ತಿ, ಧಾರವಾಡದ ಶಾಲಾ,ಕಾಲೇಜು ಹಾಗೂ ಮಹಾವಿದ್ಯಾಲಯಕ್ಕೆ ತೆರಳಲು ಸೂಕ್ತ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ನಿತ್ಯ ಪರದಾಡುತ್ತಿದ್ದಾರೆ. ಸವದತ್ತಿಯಿಂದ 15 ಕಿಮೀ ದೂರವಿರುವ ಚಿಕ್ಕಉಳ್ಳಿಗೇರಿ ಗ್ರಾಮದಲ್ಲಿ ಪ್ರತಿದಿನ 50 ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಧಾರವಾಡ ಹಾಗೂ ಸವದತ್ತಿಗೆ ತೆರಳುತ್ತಾರೆ. ಸವದತ್ತಿಗೆ ತೆರಳಲು ಮು.8:30 ಸಾ.5:30 ರಾ.8:30 ಸೇರಿ ಮೂರು ಬಸ್ ಇದ್ದರೆ ಧಾರವಾಡಕ್ಕೆ ತೆರಳಲು ಮು.6:30, 9:30 ಮ.3.30 ಸಾ.5:30ಕ್ಕೆ ಸೇರಿ […]

Advertisement

Wordpress Social Share Plugin powered by Ultimatelysocial