ಸಿಲಿಂಡರ್ ಸ್ಪೋಟ ಓರ್ವ ಸಾವು

ಕಲಬುರ್ಗಿಯ ಸೇಡಂನ ಮೋಮಿನಪುರ ಬಡಾವಣೆಯ ರಾಜು ತಾಯಿತ್ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಸ್ಫೋಟದ ರಭಸಕ್ಕೆ ಮನೆಯಲ್ಲಿದ್ದ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿವೆ ಹಾಗೂ ನಾಲ್ವರಿಗೆ ಗಾಯಗಳಾಗಿದ್ದವು, ತಕ್ಷಣವೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯಾಳುಗಳ ಪೈಕಿ ಮತ್ತೋರ್ವರ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮನೆ ಮಾಲೀಕ ರಾಜು ತಾಯಿತ್(50) ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಹಾಗೂ ಗಾಯಗೊಂಡವರು ಮೃತನ ತಾಯಿ ಗಂಗಮ್ಮ ತಾಯಿತ್ (70),ಹೆಂಡತಿ ಸುಮಾ ತಾಯಿತ್ (40) ಮತ್ತು ಆತನ ಮಗ ಬಸಪ್ಪ ತಾಯಿತ್ (22)ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೇಡಂ ಪೊಲೀಸ್ ಠಾಣೆಯಲ್ಲಿ ಈ ಸಂಭಂದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 

Please follow and like us:

Leave a Reply

Your email address will not be published. Required fields are marked *

Next Post

ಪುಟ್ಬಾಲ್ ನೋಡಲು ಬಂದಿದ್ದ ಸೆಕ್ಸ್ ಡಾಲ್

Fri May 22 , 2020
ದಕ್ಷಿಣ ಕೊರಿಯಾದ ಖಾಲಿ ಮೈದಾನದಲ್ಲಿ ಫುಟ್ಬಾಲ್ ಪಂದ್ಯ ನಡೆದಿದೆ. ಈ ವೇಳೆ ಖಾಲಿಯಿದ್ದ ಪ್ರೇಕ್ಷಕರ ಖುರ್ಚಿ ಮೇಲೆ ಕುಳಿತ ಗೊಂಬೆಗಳು ಸುದ್ದಿ ಮಾಡಿವೆ. ಖಾಲಿ ಖುರ್ಚಿ ಮೇಲೆ ಸೆಕ್ಸ್ ಡಾಲ್ ಗಳನ್ನು ಕೂರಿಸಲಾಗಿತ್ತು. ಕೊರೊನಾ ವೈರಸ್‌ನಿಂದಾಗಿ ಕ್ರೀಡಾಂಗಣಕ್ಕೆ ಭೇಟಿ ನೀಡುವವರಿಗೆ ನಿಷೇಧ ಹೇರಲಾಗಿದೆ. ಕಳೆದ ಭಾನುವಾರದ ನಡೆದ ಪಂದ್ಯದ ವೇಳೆ ಸೆಕ್ಸ್ ಡಾಲ್ಸ್ ಗಳನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿ ಇರಿಸಲಾಗಿತ್ತು. ಗೊಂಬೆಗಳಿಗೆ ಟೀ ಶರ್ಟ್ ಹಾಕಿದ್ದರು. ಗೊಂಬೆ ಕೈನಲ್ಲಿದ್ದ ಫಲಕಗಳಲ್ಲಿ ಸೆಕ್ಸ್ […]

Advertisement

Wordpress Social Share Plugin powered by Ultimatelysocial