ಜೀನ್ಸ್ ಧರಿಸಿದ್ದಕ್ಕಾಗಿ ವಕೀಲನನ್ನು ಹೈಕೋರ್ಟ್ ನಲ್ಲಿ ಮಾಡಿದ್ದೇನು ಗೊತ್ತಾ..?

ಗುವಾಹಟಿ: ಜೀನ್ಸ್ ಧರಿಸಿ ನ್ಯಾಯಾಲಯದ ಕಲಾಪಕ್ಕೆ ಆಗಮಿಸಿದ್ದ ಹಿರಿಯ ವಕೀಲರೊಬ್ಬರನ್ನು ‘ಡಿಕೋರ್ಟ್’ (ನ್ಯಾಯಾಲಯದಿಂದ ಹೊರಗೆ ಕಳುಹಿಸುವುದು) ಮಾಡಲಾಗಿದೆ.ಗುವಾಹಟಿಯ ಹೈಕೋರ್ಟ್ ನಲ್ಲಿ ಈ ಘಟನೆ ನಡೆದಿದ್ದು, ವಕೀಲ ಬಿ.ಕೆ. ಮಹಾಜನ್ ಎಂಬವರು ಪ್ರಕರಣವೊಂದರ ವಾದ ಮಂಡಿಸಲು ಬಂದ ವೇಳೆ ಜೀನ್ಸ್ ಪ್ಯಾಂಟ್ ಧರಿಸಿದ್ದರು.

ಇದನ್ನು ಗಮನಿಸಿದ ನ್ಯಾಯಮೂರ್ತಿ ಕಲ್ಯಾಣ್ ರೈ ಸುರಾನ ಅವರು ಪೊಲೀಸರನ್ನು ಕರೆಯಿಸಿ ಜೀನ್ಸ್ ಧರಿಸಿದ್ದ ವಕೀಲರನ್ನು ನ್ಯಾಯಾಲಯದಿಂದ ಹೊರಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು. ಅಲ್ಲದೆ ಈ ಆದೇಶವನ್ನು ಮುಖ್ಯ ನ್ಯಾಯಮೂರ್ತಿ, ರಿಜಿಸ್ಟ್ರಾರ್ ಜನರಲ್ ಹಾಗೂ ಅಸ್ಸಾಂ, ನಾಗಾಲ್ಯಾಂಡ್, ಮಿಜೋರಾ ಮತ್ತು ಅರುಣಾಚಲ ಪ್ರದೇಶದ ಬಾರ್ ಕೌನ್ಸಿಲ್ ಗಮನಕ್ಕೂ ತರಲಾಗುತ್ತದೆ ಎಂದು ನ್ಯಾಯಮೂರ್ತಿಗಳು ಈ ವೇಳೆ ತಿಳಿಸಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಂಡಮಾನ್‌ ಸಮುದ್ರದಲ್ಲಿ 4.9 ತೀರ್ವತೆಯ ಭೂಕಂಪ.

Tue Jan 31 , 2023
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಅಂಡಮಾನ್ ಸಮುದ್ರದ ಬಳಿ 4.9 ತೀವ್ರತೆಯ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಪ್ರಕಾರ, ಭೂಕಂಪವು ಮಂಗಳವಾರ ಮುಂಜಾನೆ 3:40 ರ ಸುಮಾರಿಗೆ ಸಂಭವಿಸಿದೆ. ಅದರ ಕೇಂದ್ರ ಬಿಂದುವನ್ನು 77 ಕಿಮೀ ಆಳದಲ್ಲಿ ಗುರುತಿಸಲಾಗಿದೆ. ಸದ್ಯ ಇಲ್ಲಿಯವರೆಗೆ ಯಾವುದೇ ಹಾನಿ ನಡೆದಿರುವ ಬಗ್ಗೆ ವರದಿಯಾಗಿಲ್ಲ. ಜನವರಿ 24 ರಂದು ನೇಪಾಳದಲ್ಲಿ ಭೂಕಂಪ ಸಂಭಿವಿಸಿದ್ದು, ನಂತರ ರಾಷ್ಟ್ರ ರಾಜಧಾನಿ ದೆಹಲಿ, ಉತ್ತರ ಪ್ರದೇಶ ಮತ್ತು […]

Advertisement

Wordpress Social Share Plugin powered by Ultimatelysocial