ವಿಜಯ್ ದಿವಸದ ಪ್ರಮುಖ ಸಂಗತಿಗಳು ಇಲ್ಲಿವೆ

Vijay Diwas 2021 : ವಿಜಯ್ ದಿವಸದ ಪ್ರಮುಖ ಸಂಗತಿಗಳು ಇಲ್ಲಿವೆ

1971ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯದ ನೆನಪಿಗಾಗಿ ವಿಜಯ್ ದಿವಸ್ ಆಚರಣೆ ಮಾಡಲಾಗುತ್ತದೆ. ಈ ಯುದ್ಧದ ಸಮುದಲ್ಲಿ ಪ್ರಾಣತ್ಯಾಗ ಮಾಡಿದ ಯೋಧರಿಗೆ ನಮನ ಸಲ್ಲಿಸಲು ವಿಜಯ್ ದಿವಸ್ ಅನ್ನು ಪ್ರತಿವರ್ಷದ ಡಿಸೆಂಬರ್ 16ರಂದು ಆಚರಿಸಲಾಗುತ್ತದೆ.

ಈ ದಿನವು ಪೂರ್ವ ಪಾಕಿಸ್ತಾನದ ವಿಮೋಚನೆಗೆ ಮತ್ತು ಬಾಂಗ್ಲಾದೇಶದ ಹೊಸ ರಾಜ್ಯ ರಚನೆಗೆ ಕಾರಣವಾಯಿತು.

ಡಿಸೆಂಬರ್ 16,1971 ರಂದು ಪಾಕಿಸ್ತಾನಿ ಸೇನಾ ಮುಖ್ಯಸ್ಥ ಜನರಲ್ ಎಎ ಖಾನ್ ನಿಯಾಜಿ ಮತ್ತು ಅವರ 93 ಸಾವಿರ ಸೈನಿಕರು ಭಾರತೀಯ ಪಡೆಗಳಿಗೆ ಶರಣಾದರು. ವಿಜಯ್ ದಿವಸ್ ಅನ್ನು ಬಾಂಗ್ಲಾದೇಶದಲ್ಲಿ ‘ಬಿಜೋಯ್ ಡಿಬೋಸ್’ ಅಥವಾ ಬಾಂಗ್ಲಾದೇಶ ವಿಮೋಚನಾ ದಿನ ಎಂದು ಆಚರಿಸಲಾಗುತ್ತದೆ. ಇದು ಪಾಕಿಸ್ತಾನದಿಂದ ಬಾಂಗ್ಲಾದೇಶದ ಅಧಿಕೃತ ಸ್ವಾತಂತ್ರ್ಯವನ್ನು ಸೂಚಿಸುತ್ತದೆ.

1971ರ ಭಾರತ-ಪಾಕಿಸ್ತಾನ ಯುದ್ಧದ ಬಗ್ಗೆ ಪ್ರಮುಖ ಸಂಗತಿಗಳು :

ಪಶ್ಚಿಮ ಪಾಕಿಸ್ತಾನವು ಜನರೊಂದಿಗೆ ಅನುಚಿತವಾಗಿ ವರ್ತಿಸಿದ ನಂತರ ಮತ್ತು ಪೂರ್ವ ಪಾಕಿಸ್ತಾನದ ಚುನಾವಣಾ ಫಲಿತಾಂಶಗಳನ್ನು ದುರ್ಬಲಗೊಳಿಸಿದ ನಂತರ ಬಾಂಗ್ಲಾದೇಶದ ವಿಮೋಚನಾ ಯುದ್ಧವು ಸಂಘರ್ಷಕ್ಕೆ ಕಾರಣವಾಯಿತು.

ಪೂರ್ವ ಪಾಕಿಸ್ತಾನವು ಮಾರ್ಚ್ 26,1971 ರಂದು ಅಧಿಕೃತವಾಗಿ ಪ್ರತ್ಯೇಕತೆಗೆ ಕರೆಯನ್ನು ನೀಡಿತು. ಭಾರತದ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಸ್ವಾತಂತ್ರ್ಯ ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ನೀಡಿದರು.

Please follow and like us:

Leave a Reply

Your email address will not be published. Required fields are marked *

Next Post

ಗ್ರಾಜುಯೇಟ್ ಮತ್ತು ಡಿಪ್ಲೋಮಾ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Fri Dec 17 , 2021
HAL Recruitment 2021 :   ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್‌ ನಲ್ಲಿ (ಹೆಚ್‌ಎಎಲ್) ಗ್ರಾಜುಯೇಟ್ ಮತ್ತು ಡಿಪ್ಲೋಮಾ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಡಿಸೆಂಬರ್ 4,2021 ರಿಂದ ಡಿಸೆಂಬರ್ 18,2021ರೊಳಗೆ ಅರ್ಜಿಯನ್ನು ಹಾಕಬಹುದು. ನೇಮಕಾತಿ ಬಗೆಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ಮುಂದೆ ಓದಿ. HAL ನೇಮಕಾತಿ […]

Advertisement

Wordpress Social Share Plugin powered by Ultimatelysocial