ಆಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗೆ ತಮ್ಮ ಸಮಯ ಮೀಸಲಿಡುತ್ತಾರೆ.

ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗೆ ತಮ್ಮ ಸಮಯ ಮೀಸಲಿಡುತ್ತಾರೆ. ಇದೀಗ ನೆಚ್ಚಿನ ನಟ ಧ್ರುವ ಸರ್ಜಾರನ್ನ ಮನೆ ಮುಂದೆ ಜಾತ್ರೆಯಂತೆ ಜನ ಸೇರಿದ್ದಾರೆ. ಈ ವೇಳೆ ಅಭಿಮಾನಿಯ ಮಗುವಿಗೆ ಮುದ್ದಾದ ಹೆಸರನ್ನ ಕೂಡ ಧ್ರುವ ಸರ್ಜಾ ಇಟ್ಟಿದ್ದಾರೆ.

ಕಲಾವಿದರಿಗೂ ಮತ್ತು ಅಭಿಮಾನಿಗಳಿಗೂ ಅಭಿನಾಭಾವ ಸಂಬಂಧವಿದೆ. ಕಲಾವಿದರನ್ನ ದೇವರು ಎಂದು ಪೂಜಿಸುವ ಅಭಿಮಾನಿಗಳಿದ್ದಾರೆ. ಅಪಘಾತವೊಂದರಲ್ಲಿ ಧ್ರುವ ಸರ್ಜಾ ಅವರ ಅಪ್ಪಟ ಅಭಿಮಾನಿ ಫೃಥ್ವಿರಾಜ್ ಶನಿವಾರ (ಫೆ.18)ರಂದು ಕೊನೆಯುಸಿರೆಳೆದರು. ಸಾಯುವ ಮುನ್ನ ತನ್ನ ಆರಾಧ್ಯ ದೈವ ಧ್ರುವನನ್ನ ಕಣ್ಣಾರೆ ನೋಡಿ ಪ್ರಾಣ ಬಿಟ್ಟರು. ಅಣ್ಣ ಚಿರು ಸಾವಿನ ನಂತರ ನೆಚ್ಚಿನ ಅಭಿಮಾನಿಯ ಸಾವಿಗೆ ಧ್ರುವ ಭಾವುಕರಾದರು.

ನಟ ಧ್ರುವ ಸರ್ಜಾ ಮನೆಯಲ್ಲಿ ಭಾನುವಾರ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಧ್ರುವ ಮನೆ ಮುಂದೆ ಜನ ಜಾತ್ರೆಯೇ ಸೇರಿದೆ. ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ದೂರದ ಊರಿಂದ ಬಂದು ಭೇಟಿಯಾಗಿದ್ದಾರೆ. ಆಂಜನೇಯ ಮೂರ್ತಿ ಧ್ರುವಾಗೆ ನೀಡಿ ಕ್ಯಾಮೆರಾ ಕಣ್ಣಿಗೆ ಅಭಿಮಾನಿಗಳು ಪೋಸ್ ನೀಡಿದ್ದಾರೆ.

ಚಿರು ನಿಧನ ನೋವಿನಿಂದ ಇದೀಗ ಹೊರಬಂದಿರುದ ಧ್ರುವ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. `ಮಾರ್ಟಿನ್’ ಸಿನಿಮಾ ಮೂಲಕ ತೆರೆಯ ಮೇಲೆ ಅಬ್ಬರಿಸಲಿದ್ದಾರೆ. ಇನ್ನೂ ಪ್ರತಿ ಭಾನುವಾರ ನೂರಾರು ಅಭಿಮಾನಿಗಳಿಗಾಗಿ ಧ್ರುವ ಸಮಯ ಮೀಸಲಿಟ್ಟಿದ್ದಾರೆ. ಧ್ರುವ ಮನೆ ಮುಂದೆ ಜಾತ್ರೆಯಂತೆ ಜನ ಸೇರಿದ್ದು, ನಟನ ಮುಂದೆ ನಿಂತು ಧ್ರುವ ನಟಿಸಿರುವ ಸಿನಿಮಾ ಡೈಲಾಗ್ ಹೇಳಿ, ಧ್ರುವ ಜೊತೆ ಫೋಟೋ ಕ್ಲಿಕ್ಕಿಸಿ ಹೋಗುತ್ತಿದ್ದಾರೆ.

ಇನ್ನೂ ಮನೆಯ ಬಳಿ ಬಂದ ಅಭಿಮಾನಿಯ ಮಗುವಿಗೆ ಧ್ರುವ ಹೆಸರಿಟ್ಟಿದ್ದಾರೆ. ಒಂದು ವರ್ಷದ ಮಗುವಿಗೆ ಮೈನಾ ಎಂದು ಧ್ರುವ ಹೆಸರಿಟ್ಟಿದ್ದಾರೆ. ಅಭಿಮಾನಿಯ ಆಸೆಯಂತೆ ಮಗುವಿನ ಕಿವಿಗೆ ಹೆಸರು ಧ್ರುವ ಸರ್ಜಾ ಹೆಸರು ಹೇಳಿದ್ದಾರೆ. ಇನ್ನೂ `ಮಾರ್ಟಿನ್’ ಚಿತ್ರದ ಟೀಸರ್ ಇದೇ ಫೆ.23ಕ್ಕೆ ರಿಲೀಸ್ ಆಗಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಳಗಾವಿಯಲ್ಲಿ ಬೇಸಿಗೆ ಆರಂಭದಲ್ಲೇ ನೀರಿಗೆ ಪರದಾಟ.

Mon Feb 20 , 2023
   ಬೇಸಿಗೆ ಆರಂಭದಲ್ಲಿಯೇ ಬೆಳಗಾವಿ ನಗರದ ವಿವಿಧ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಶುರುವಾಗಿದೆ. ನಗರಕ್ಕೆ ನೀರು ಪೂರೈಸುವ ಜಲಾಶಯಗಳು ಸಮೃದ್ಧವಾಗಿದ್ದರೂ ಅಸಮರ್ಪಕ ನಿರ್ವಹಣೆಯೇ ನೀರಿನ ಸಮಸ್ಯೆ ಹೆಚ್ಚಾಗಲು ಕಾರಣವಾಗುತ್ತಿದೆ.ಕಳೆದ 3-4 ವರ್ಷಗಳಿಂದ ಹೆಚ್ಚು ಮಳೆಯಾಗುತ್ತಿದ್ದು, ಬೆಳಗಾವಿ ನಗರಕ್ಕೆ ನೀರು ಪೂರೈಸುವ ಹಿಡಕಲ್‌ ಮತ್ತು ರಾಕಸಕೊಪ್ಪ ಜಲಾಶಯಗಳು ಭರ್ತಿಯಾಗಿವೆ. ಹಿತ ಮಿತವಾಗಿ ಬಳಸಿದರೆ ಸದ್ಯ ಬೇಸಿಗೆಯ ಅಂತ್ಯದವರೆಗೂ ನಗರಕ್ಕೆ ನೀರು ಸಾಕು ಎಂದು ಅಧಿಕಾರಿಗಳೇ ಹೇಳುತ್ತಾರೆ. ಆದರೂ ನಗರದಲ್ಲಿ ಪ್ರತಿ ದಿನ […]

Advertisement

Wordpress Social Share Plugin powered by Ultimatelysocial