ಸಿಲಿಕಾನ್ ಸಿಟಿಗೆ ಬಿಹಾರಿ ಕೊರೊನಾ ಬಾಂಬ್

ಬೆಂಗಳೂರಿಗೆ ಹೊಂಗಸಂದ್ರದ ಸ್ಲಂ ನಿವಾಸಿ ಬಿಹಾರಿ ಕಾರ್ಮಿಕನಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಅವನ ಸಂಪರ್ಕಕ್ಕೆ ಬಂದ 165 ಮಂದಿಯನ್ನು ಕ್ವಾರಂಟೈನ್ ಇಡಲಾಗಿದೆ. ಹೊಂಗಸಂದ್ರವನ್ನು ಸೀಲ್ ಡೌನ್ ಮಾಡಲಾಗಿದೆ. ಬಿಹಾರಿ ಕಾರ್ಮಿಕನ ಟ್ರಾವೆಲ್ ಹಿಸ್ಟರಿ ಭಯಾನಕವಾಗಿದೆ. ಹೊಂಗಸಂದ್ರ ಪ್ರದೇಶಕ್ಕೆ ರಾಸಾಯನಿಕ ಸಿಂಪಡಿಸಲಾಗ್ತಿದೆ. ಎಲ್ಲರ ಪರೀಕ್ಷೆ ನಡೆಯುತ್ತಿದೆ. ಸುತ್ತಮುತ್ತಲ ಜನರು ಭಯಗೊಂಡಿದ್ದಾರೆ. ಬಿಹಾರಿ ಕಾರ್ಮಿಕ ಅನೇಕ ಕಡೆ ಓಡಾಡಿದ್ದಾನೆ. ಆತನ ಸಂಪರ್ಕದಲ್ಲಿದ್ದ 9 ಮಂದಿಗೆ ಸೋಂಕಿರುವುದು ದೃಢಪಟ್ಟಿದೆ. ಈತ ಹೋಗಿದ್ದ ಮೂರು ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ. ಆದ್ರೆ ಈತನಿಗೆ ಸೋಂಕು ಬಂದಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

Please follow and like us:

Leave a Reply

Your email address will not be published. Required fields are marked *

Next Post

ಮಕ್ಕಳಿಗಾಗಿ ಹೊಸ ಮೇಸೆಂಜರ್ ಕಿಡ್ಸ್

Thu Apr 23 , 2020
ದೆಹಲಿ: ಕೊರೊನಾ ಲಾಕ್‌ಡೌನ್‌ನಿಂದ ಎಲ್ಲರೂ ಮನೆಯಲ್ಲಿಯೇ ಇರುತ್ತಿದ್ದಾರೆ. ಈ ವೇಳೆ ಮಕ್ಕಳಿಗೆ ಹೊಸತನ್ನು ಕಲಿಯಲು ಸಹಕಾರವಾಗಲಿ ಎಂಬ ಉದ್ದೇಶದಿಂದ ಸೋಷಿಯಲ್ ಮೀಡಿಯಾದ ದಿಗ್ಗಜ ಎಂದೇ ಹೆಸರಾದ ಫೇಸ್‌ಬುಕ್, ಮಕ್ಕಳಿಗಾಗಿಯೇ ವಿಶೇಷವಾಗಿ ಮೆಸೆಂಜರ್ ಕಿಡ್ಸ್ ಆ್ಯಪ್ ಲಾಂಚ್ ಮಾಡಿದೆ. ಭಾರತ ಸೇರಿದಂತೆ ೭೦ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಈ ಸೌಲಭ್ಯ ದೊರೆಯಲಿದೆ ಎಂದು ಸಂಸ್ಥೆ ತಿಳಿಸಿದೆ. ಮೊದಲು ಮಕ್ಕಳಿಗೆ ಬರುವ ಫ್ರೆಂಡ್ ರಿಕ್ವೆಸ್ಟ್ ಸೇರಿದಂತೆ ಇತರೆ ಯಾವುದೇ ವಿಷಯಗಳಿದ್ದರೂ ಪೋಷಕರೇ ನಿಭಾಯಿಸುತ್ತಿದ್ದರು. ಆದ್ರೀಗ, […]

Advertisement

Wordpress Social Share Plugin powered by Ultimatelysocial