ಅಶ್ವಿನ್ ಮಾರಕ ಬೌಲಿಂಗ್ ಅಸೀಸ್‌ಗೆ ಇನ್ನಿಂಗ್ಸ್ ಸೋಲು.

ಭಾರತದ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ಸ್ಪಿನ್ ಮಾಂತ್ರಿಕ ಆರ್. ಅಶ್ವಿನ್ ಬೌಲಿಂಗ್ ದಾಳಿಗೆ ತತ್ತರಿಸಿರುವ ಆಸ್ಟ್ರೇಲಿಯಾ ಇನ್ನಿಂಗ್ ಸೋಲಿನ ದವಡೆಗೆ ಸಿಲುಕಿದೆ.೨೨೩ ರನ್‌ಗಳ ಹಿನ್ನಡೆ ಅನುಭವಿಸಿರುವ ಆಸ್ಟ್ರೇಲಿಯಾ. ೨ನೇ ಇನ್ನಿಂಗ್ಸ್‌ನಲ್ಲೂ ಬ್ಯಾಟಿಂಗ್ ವೈಫಲ್ಯ ಕಂಡಿದೆ. ಅಶ್ವಿತ್ ಬೌಲಿಂಗ್ ದಾಳಿಗೆ ಆಸ್ಟ್ರೇಲಿಯಾ ಬ್ಯಾಟರ್‌ಗಳು ಲಗುಬಗೆಯಿಂದ ಪೆವಿಲಿಯನ್‌ತ್ತ ಹೆಜ್ಜೆ ಹಾಕಿದರು.
ಉಸ್ಮಾನ್ ಕ್ವಾಜಾ ೫, ಡೇವಿಡ್ ವಾರ್‍ನರ್ ೧೦, ಮಾರ್ನಸ್ ೧೭, ಮ್ಯಾಟ್ ರೆನ್‌ಶಾ ೨, ಪೀಟರ್ ೬, ಅಲೆಕ್ಸ್ ೧೦, ಪ್ಯಾಟ್‌ಕಮಿನ್ಸ್ ೧ ರನ್ ಗಳಿಸಿ ಔಟಾದರು.ಅಶ್ವಿನ್ ಬೌಲಿಂಗ್ ದಾಳಿಗೆ ದೂಳಿಪಟವಾಗಿರುವ ಆಸೀಸ್ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲವಾಗಿದೆ. ಅಶ್ವಿನ್ ೩೭ ರನ್ ನೀಡಿ ೫ ವಿಕೆಟ್ ಕಬಳಿಸಿದ್ದಾರೆ. ಅಶ್ವಿನ್ ೨ ವಿಕೆಟ್ ಪಡೆದಿದ್ದಾರೆ. ಇತ್ತೀಚಿನ ವರದಿ ಬಂದಾಗ ಆಸ್ಟ್ರೇಲಿಯಾ ೬೮ ರನ್‌ಗಳಿಗೆ ೭ ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಸೋಲಿನ ಭೀತಿಗೆ ಸಿಲುಕಿತ್ತು.ಇದಕ್ಕೂ ಮುನ್ನ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ೨೨೩ ರನ್‌ಗಳ ಮುನ್ನಡೆ ಗಳಿಸಿದೆ. ಇಂದು ೩ನೇ ದಿನದ ಆಟ ಮುಂದುವರೆಸಿದ ೪೦೦ ರನ್‌ಗಳಿಗೆ ಸರ್ವ ಪತನ ಕಂಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಆಸೀಸ್ ೧೭೭ ರನ್‌ಗಳಿಗೆ ಆಲೌಟ್ ಆಗಿತ್ತು.ನಿನ್ನೆ ೭ ವಿಕೆಟ್‌ಗೆ ೩೨೧ ರನ್ ಗಳಿಸಿದ ಭಾರತ, ೩ನೇ ದಿನದ ಆಟದಲ್ಲಿ ಅಕ್ಸರ್ ಪಟೇಲ್ ೮೪ ರನ್, ರವೀಂದ್ರ ಜಡೇಜಾ ೭೦ ರನ್ ಗಳಿಸುವ ಮೂಲಕ ಭಾರತ ೪೦೦ ರನ್ ಬೃಹತ್ ಮೊತ್ತ ಪೇರಿಸಲು ನೆರವಾದರು. ಮೊಹ್ಮದ್ ಶಮಿ ೩೭ ರನ್‌ಗಳ ಕಾಣಿಕೆ ನೀಡಿದರು. ಮೊಹ್ಮದ್ ಶಿರಾಜ್ ೧ ರನ್ ಗಳಿಸಿ ಅಜೇಯರಾಗುಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

೭೫ ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಮುಕೇಶ್ ನಿರ್ಧಾರ

Sat Feb 11 , 2023
  ಮುಂದಿನ ನಾಲ್ಕು ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ೭೫,೦೦೦ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಹೇಳಿದ್ದಾರೆತಮ್ಮ ಗುಂಪಿನ ಟೆಲಿಕಾಂ ಅಂಗ ಸಂಸ್ಥೆಯಾದ ಜಿಯೋ ಡಿಸೆಂಬರ್ ೨೦೨೩ ರ ವೇಳೆಗೆ ಉತ್ತರ ಪ್ರದೇಶಾದ್ಯಂತ್ಯ ೫ ಜಿ ಸೇವೆ ಒದಗಿಸಲಿದೆ ಎಂದು ಅವರು ಹೇಳಿದ್ದಾರೆ.ಉತ್ತರ ಪ್ರದೇಶದ ಬಂಡವಾಳ ಹೂಡಿಕೆದಾರರ ಶೃಂಗಸಭೆಯಲ್ಲಿ ಮಾತನಾಡಿದ ಅವರು ಉತ್ತರ ಪ್ರದೇಶದಲ್ಲಿ ಟೆಲಿಕಾಂ, ಚಿಲ್ಲರೆ ಮತ್ತು ಹೊಸ ಇಂಧನ ವ್ಯವಹಾರದಲ್ಲಿ […]

Advertisement

Wordpress Social Share Plugin powered by Ultimatelysocial