೭೫ ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಮುಕೇಶ್ ನಿರ್ಧಾರ

 

ಮುಂದಿನ ನಾಲ್ಕು ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ೭೫,೦೦೦ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಹೇಳಿದ್ದಾರೆತಮ್ಮ ಗುಂಪಿನ ಟೆಲಿಕಾಂ ಅಂಗ ಸಂಸ್ಥೆಯಾದ ಜಿಯೋ ಡಿಸೆಂಬರ್ ೨೦೨೩ ರ ವೇಳೆಗೆ ಉತ್ತರ ಪ್ರದೇಶಾದ್ಯಂತ್ಯ ೫ ಜಿ ಸೇವೆ ಒದಗಿಸಲಿದೆ ಎಂದು ಅವರು ಹೇಳಿದ್ದಾರೆ.ಉತ್ತರ ಪ್ರದೇಶದ ಬಂಡವಾಳ ಹೂಡಿಕೆದಾರರ ಶೃಂಗಸಭೆಯಲ್ಲಿ ಮಾತನಾಡಿದ ಅವರು ಉತ್ತರ ಪ್ರದೇಶದಲ್ಲಿ ಟೆಲಿಕಾಂ, ಚಿಲ್ಲರೆ ಮತ್ತು ಹೊಸ ಇಂಧನ ವ್ಯವಹಾರದಲ್ಲಿ ಮುಂದಿನ ನಾಲ್ಕು ವರ್ಷಗಳಲ್ಲಿ ೭೫,೦೦೦ ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.ತೈಲದಿಂದ ಟೆಲಿಕಾಂ ಸಮೂಹವ ೧೦ ಗಿಗಾ ವ್ಯಾಟ್ ನವೀಕರಿಸಬಹುದಾದ ಸಾಮರ್ಥ್ಯವನ್ನು ಸ್ಥಾಪಿಸುತ್ತದೆ ಮತ್ತು ರಾಜ್ಯದಲ್ಲಿ ಜೈವಿಕ ಇಂಧನ ವ್ಯವಹಾರವನ್ನು ಪ್ರಾರಂಭಿಸುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ಜಾಗತಿಕ ಹೂಡಿಕೆದಾರರ ಶೃಂಗಸಭೆ ೨೦೨೩ ಅನ್ನು ಉದ್ಘಾಟಿಸಿದ್ದರು. ಸಮಾವೇಶ ಇಂದು ನಾಳೆ, ನಾಡಿದ್ದು ನಡೆಯಲಿದೆ.ಉತ್ತರ ಪ್ರದೇಶ ಸರ್ಕಾರದ ಪ್ರಮುಖ ಹೂಡಿಕೆ ಶೃಂಗಸಭೆಯಾಗಿದೆ. ದೇಶದ ವಿವಿಧ ಭಾಗಗಳ ಜೊತೆಗೆ ದೇಶ ವಿದೇಶಗಳಿಂದ ಬಂಡವಾಳ ಹರಿದು ಬರುವ ನಿರೀಕ್ಷೆ ಇದೆ.ಜಾಗತಿಕ ಬಂಡವಾಳ ಹೂಡಿಕೆದಾರರ ಶೃಂಗ ಸಭೆಯನ್ನು ಯಶಸ್ಬಿಗೊಳಿಸುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಮುಂಬೈ ಸೇರಿದಂತೆ ಜಗತ್ತಿನ ವಿವಿಧ ಭಾಗಗಳಲ್ಲಿ ಬಂಡವಾಳ ಆಕರ್ಷಣೆಗೆ ರೋಡ್ ಶೋ ನಡೆಸಿದ್ದರು.ಜೊತೆಗೆ ಉತ್ತರ ಪ್ರದೇಶ ಸರ್ಕಾರದ ಕೈಗಾರಿಕಾ ಸಚಿವರು ಅಮೇರಿಕಾ ಸೇರಿದಂತೆ ಜಗತ್ತಿನ ವಿವಿದ ದೇಶಗಳಲ್ಲಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಹಲವು ಕಸರತ್ತು ಮಾಡಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

How to Know When a Girl Would like You Through Text

Sun Feb 12 , 2023
When a girl likes you, it’s easy to see that in her text messaging. She will frequently share information about her working day and will text you things that are thrilling playful. The girl may even tease you, and she’ll definitely make you guffaw. This is part and parcel of […]

Advertisement

Wordpress Social Share Plugin powered by Ultimatelysocial