ಸಿಲಿಕಾನ್ ಸಿಟಿಯಲ್ಲಿ ಅನುಮಾನಾಸ್ಪದ ವಸ್ತು ಪತ್ತೆ

ಬೆಂಗಳೂರು: ಕೊರೊನಾ ಸೋಂಕು ಭಯದ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲಿ ಅನುಮಾನಾಸ್ಪದ ವಸ್ತು ಕಂಡು ಬಂದಿದೆ, ಕೆಲ ಸಮಯ ಭಯ ಪಡುವ ವಾತಾವಾರಣ ನಿರ್ಮಾಣವಾಗಿತ್ತು. ಪಟಾಕಿ ಮಾದರಿಯ ವಸ್ತು ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕತ್ರಿಗುಪ್ಪೆ-ಅಶೋಕನಗರ ಜಂಕ್ಷನ್ ಬಳಿ ಪತ್ತೆಯಾಗಿದೆ. ಅದನ್ನು ಕಂಡು ಭಯಭೀತರಾದ ಜನ ಸ್ಫೋಟಕ ವಸ್ತು ಎಂದು ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಹನುಮಂತನಗರ ಠಾಣಾ ಪೊಲೀಸರು ಹಾಗೂ ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಪಟಾಕಿ ‌ಮಾದರಿ ವಸ್ತು ಇರುವುದು ಕಂಡು ಬಂದಿದೆ, ತಕ್ಷಣ ಎಫ್ಎಸ್ಎಲ್ ಕಚೇರಿಗೆ ರವಾನೆ ಮಾಡಿದ್ದಾರೆ.  ಇದು ಮೇಲ್ನೋಟಕ್ಕೆ ಪಟಾಕಿ ಎಂದು ಕಂಡು ಬಂದಿದೆ.

Please follow and like us:

Leave a Reply

Your email address will not be published. Required fields are marked *

Next Post

ಬಾಲಿವುಡ್ ಗೋಲ್ಡನ್ ಕಪಲ್ಸ್

Thu Apr 30 , 2020
ರಿಷಿ ಕಪೂರ್ ಎಂತಹ ಅದ್ಬುತ ನಟ. ಅವರಿಗೆ ಜೋಡಿಯಾಗಿ ನೀತು ಕಪೂರ್ ನಟಿಸಿದರೆ ಅಂದಿನ ಕಾಲಕ್ಕೆ ಆ ಸಿನಿಮಾ ಭರ್ಜರಿ ಯಶಸ್ಸು ಕಾಣುತ್ತಿತ್ತು. ಇವರಿಬ್ಬರ ಕಾಂಬಿನೇಷನ್ ಸಿನಿಮಾಗಳನ್ನು ನೋಡಿದ ಪ್ರೇಕ್ಷಕರು ಇವರು ಗೋಲ್ಡನ್ ಕಪಲ್ಸ್ ಎನ್ನುತ್ತಿದ್ದರು. ಅಷ್ಟೊಂದು ಜನಪ್ರಿಯತೆ ಹೊಂದಿದ್ದರು ಈ ಇಬ್ಬರು ತಾರೆಯರು. ರಿಷಿ ಕಪೂರ -ನೀತು ಕಪೂರ್ ಅವರ ಲವ್‌ಸ್ಟೋರಿಯು ಸಹಿತ ಸಿನಿಮಾ ತರಾನೆ ಇದೆ. ನೀತು ರೀಷಿ ಕಪೂರ್ ಜೊತೆ ೧೯೭೫ರ ವೇಳೆಗೆ ಸುಮಾರು ೧೫ […]

Advertisement

Wordpress Social Share Plugin powered by Ultimatelysocial