ಸೆಕ್ಸಿ ಕ್ವೀನ್ ಬರ್ತಡ ಸೆಲೆಬ್ರೆಷನ್

ಸೆಕ್ಸಿಲುಕ್, ಮಾದಕ ಮೈಮಾಟ ಅಂದ್ರೆ ನೆನಪಾಗೋದೆ ಬಬ್ಲಿ ಬ್ಯೂಟಿ ನಮಿತಾ. ಇಂದು ಕಾಲಿವುಡ್, ಸ್ಯಾಂಡಲ್‍ವುಡ್ ನಟಿ ನಮಿತಾ ಹುಟ್ಟಿದ ದಿನ. ಗುಜರಾತ್ ರಾಜ್ಯದ ಸುರತ್ ನಲ್ಲಿ ಜನಿಸಿದ ನಮಿತಾ ೨೦೦೨ರಲ್ಲಿ ತೆಲುಗಿನ ‘ಸ್ವತಂ’ ಚಿತ್ರದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟರು. ರವಿಚಂದ್ರನ್ ಅಭಿನಯದ ನೀಲಕಂಠದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ಬಳಿಕ ರ‍್ಶನ್ ಜೊತೆಗೆ ಇಂದ್ರ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಹೂ, ನಮಿತಾ ಐ ಲವ್ ಯೂ, ಬೆಂಕಿ ಬಿರುಗಾಳಿಯಲ್ಲೂ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಸೇರಿದಂತೆ ಒಟ್ಟು ೪೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ೧೫ನೇ ವಯಸ್ಸಿನಲ್ಲಿಯೇ ಮಿಸ್ ಸೂರತ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದ ನಮಿತಾ ೨೦೦೧ರಲ್ಲಿ ಮಿಸ್ ಇಂಡಿಯಾ ಸ್ರ‍್ಧೆಯಲ್ಲಿ ಪಾಲ್ಗೊಂಡಿದ್ದಾರೆ. ಮಾಡೆಲ್ ಆಗಿದ್ದ ನಮಿತಾ ಹಿಮಾನಿ ಕೆನೆ ಮತ್ತು ಕೈ ಸೋಪ್, ಅರುಣ್ ಐಸ್ ಕ್ರೀಮ್ಸ್, ಮಣಿಕ್ಚಂದ್ ಗುಟ್ಕಾ ಮತ್ತು ನೈಲ್ ರ‍್ಬಲ್ ಶಾಂಪೂ ಮೊದಲಾದ ಹಲವಾರು ಟಿವಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳು ಚಿತ್ರರಂಗದ ಖ್ಯಾತ ನಟಿಯಾಗಿರೋ ನಮಿತಾ, ತಮಿಳಿನ ಹಿರಿಯ ನಟರೊಂದಿಗೆ ಹೆಚ್ಚಾಗಿ ನಟಿಸಿದ್ದಾರೆ. ಯಶಸ್ಸಿನ ಉತ್ತುಂಗದಲ್ಲಿ, ನಮಿತಾ ಅವರ ಅಭಿಮಾನಿಗಳು ತಮಿಳುನಾಡಿನ ಕೊಯಮತ್ತೂರ್ ಸಮೀಪದಲ್ಲಿ ಅವರ ದೇವಸ್ಥಾನವನ್ನು ನರ‍್ಮಿಸಿದ್ದಾರೆ. ತನ್ನ ಮೋಹಕ ಮೈಮಾಟದಿಂದಲೇ ಪ್ರಸಿದ್ದಿ ಪಡೆದಿರೋ ನಮಿತಾ ಅಪಾರ ಅಭಿಮಾನಿಗಳನ್ನೂ ಹೊಂದಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಅಮ್ಮನ ನೆನಪಿನ ಕಣಜ ಬಿಚ್ಚಿಟ್ಟ ಬಾಲಿವುಡ್ ತಾರೆಯರು

Sun May 10 , 2020
ಅಮ್ಮ ಎಂದರೆ ಪದಗಳಲ್ಲಿ ವರ್ಣಿಸಲಾಗದ ಪ್ರೀತಿಯ ಗಣಿ, ಅಮ್ಮ ಅಂದ್ರೆ ಆಕಾಶ, ಆಕೆಯ ಪ್ರೀತಿಯ ಮುಂದೆ ಮತ್ತೆಲ್ಲವೂ ನಗಣ್ಯ. ಪ್ರೀತಿ ವ್ಯಕ್ತಿಯ ಹಿಂದೆ ಅಮ್ಮ ಅನ್ನೋ ಪ್ರೇರಕ ಶಕ್ತಿ ಇದ್ದೇ ಇರುತ್ತೆ. ಇದೀಗ ಬಾಲಿವುಡ್ ತಾರೆಯರು ತಮ್ಮ ಅಮ್ಮನ ಪ್ರೀತಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊAಡು ಶುಭಾಶಯ ಹೇಳಿದ್ದಾರೆ. ಅಮ್ಮಂದಿರ ದಿನಾಚರಣೆ ಪ್ರಯುಕ್ತ ಸೋನಮ್ ಕಪೂರ್, ಅನನ್ಯಾ ಪಾಂಡೆ, ಕಂಗನಾ ರಾವತ್, ಇಶಾನ್ ಖಟ್ಟರ್, ಸಾರಾ ಅಲಿ ಖಾನ್, ಆಯುಷ್ಮಾನ್ […]

Advertisement

Wordpress Social Share Plugin powered by Ultimatelysocial