ಮಂಗಳೂರು : ಬೆಂಗಳೂರಿನ ಯಲಹಂಕ ಸೇತುವೆಗೆ ವೀರ್ ಸಾವರ್ಕರ್ ಹೆಸರಿಡುವ ವಿಚಾರ ವಿವಾದಕ್ಕೀಡಾಗಿತ್ತು. ಇದರ ಬೆನ್ನಲ್ಲೇ ಕೇಸರಿ ಪಡೆಯ ಭದ್ರಕೋಟೆ ಅಂತಲೇ ಹೆಸರಾಗಿರುವ ಮಂಗಳೂರಿನ ಸೇತುವೆಗಳಲ್ಲಿ ಸಾವರ್ಕರ್ ಬ್ಯಾನರ್ ಕಾಣಿಸಿಕೊಂಡಿದೆ. ನಿನ್ನೆ ರಾತ್ರಿ ಮಂಗಳೂರಿನ ಪಂಪ್ವೆಲ್ ಫ್ಲೈಓವರ್ ಮೇಲೆ ಸಾವರ್ಕರ್ ಬ್ಯಾನರ್ ಪ್ರತ್ಯಕ್ಷವಾಗಿ ಫೋಟೋ ವೈರಲ್ ಆಗಿದೆ. ಇದರ ಬೆನ್ನಲ್ಲೇ ಒಂದೇ ಗಂಟೆಯಲ್ಲೇ ಫ್ಲೆಕ್ಸ್ ಕಾಣೆಯಾಗಿತ್ತು. ಈ ವಿಚಾರದಲ್ಲಿ ಪ್ರತಿಕ್ರಿಯಿಸಿದ್ದ ಮಾಜಿ ಸಚಿವ ಯು.ಟಿ ಖಾದರ್, ಪಂಪ್ವೆಲ್ ವೃತ್ತಕ್ಕೆ ಈ ಹಿಂದೆಯೇ ಮಹಾವೀರ ವೃತ್ತವೆಂಬ ಹೆಸರನ್ನ ಇಡಲಾಗಿದೆ. ಈಗ ಮತ್ತೆ ಹೆಸರಿಡುವ ಪ್ರಯತ್ನ ಯಾಕೆ..? ಇಂಥ ಬ್ಯಾನರ್ ಹಾಕಿರುವ ಕಿಡಿಗೇಡಿಗಳನ್ನು ಕೂಡಲೇ ಪೊಲೀಸರು ಬಂಧಿಸಬೇಕು ಎಂದು ಒತ್ತಾಯಿಸಿದ್ದರು. ಮತ್ತೆ ಇಂದು ರಾತ್ರಿಯಾಗ್ತಿದ್ದಂತೆ ಪಂಪ್ವೆಲ್ ಫ್ಲೈ ಓವರ್ ನಲ್ಲಿ ಮತ್ತೆ ಸಾವರ್ಕರ್ ಹೆಸರುಳ್ಳ ಬ್ಯಾನರ್ ಪ್ರತ್ಯಕ್ಷವಾಗಿದೆ. ಜೊತೆಗೆ ಸೇತುವೆಯಲ್ಲಿ ಭಜರಂಗದಳ ಎಂದು ಬರೆಯಲಾಗಿದೆ. ಇದೇ ವೇಳೆ, ಉಳ್ಳಾಲದ ತೊಕ್ಕೊಟ್ಟು ಫ್ಲೈ ಓವರ್ ನಲ್ಲಿ ಕೂಡಾ ಅಬ್ಬಕ್ಕ ಮೇಲ್ಸೇತುವೆ ಎಂಬ ಬ್ಯಾನರನ್ನು ಹಾಕಲಾಗಿದೆ. ಅಲ್ಲಿ ಕಲರ್ ಪೈಂಟ್ ನಲ್ಲಿ ವೀರರಾಣಿ ಅಬ್ಬಕ್ಕ ಮೇಲ್ಸೇತುವೆಯೆಂದು ಬರೆಯಲಾಗಿದೆ. ಅಲ್ಲದೇ ಮಂಗಳೂರಿನ ನೆಹರೂ ಮೈದಾನದಲ್ಲಿ ಮತ್ತೊಂದು ಬ್ಯಾನರ್ ಕಾಣಿಸಿದ್ದು ಅದರಲ್ಲಿ ಕೋಟಿ ಚೆನ್ನಯ ಕೇಂದ್ರ ಮೈದಾನ ಎಂದು ಬರೆಯಲಾಗಿದೆ.
ಸೇತುವೆಗಳ ಮೇಲೆ ಮಹನಿಯರ ಹೆಸರಗಳ ಬರವಣಿಗೆ

Please follow and like us: