ಸ್ಯಾನಿಟೈಸ್ ಬಳಸದಿದ್ರೆ, ಎಟಿಎಂ ಸೀಲ್‌ಡೌನ್

ಚೆನ್ನ್ಯೆ:ಕೊರೊನಾ ಲಾಕ್‌ಡೌನ್ ಬೆನ್ನಲ್ಲೇ ಇಂದಿನಿಂದ ಬ್ಯಾಂಕಿಂಗ್ ಹಾಗೂ ಎಟಿಎಂ ಸಂಬಂಧಿಸಿದಂತೆ ಕೆಲವು ಹೊಸ ಬದಲಾವಣೆ ಆಗಲಿವೆ. ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಇಂದಿನಿಂದ ಎಟಿಎಂ ಮಷಿನ್‌ಗಳನ್ನು ಪ್ರತಿ ಬಾರಿ ಬಳಕೆ ಮಾಡಿದ ನಂತರ ಅದನ್ನು ಸ್ವಚ್ಛಗೊಳಿಸಲಾಗುತ್ತದೆ. ಈಗಾಗಲೇ ಈ ಕ್ರಮವನ್ನು ಉತ್ತರ ಪ್ರದೇಶದ ಘಾಜಿಯಾಬಾದ್, ತಮಿಳುನಾಡಿನ ಚೆನ್ನ್ಯೆನಲ್ಲಿ ಜಾರಿಗೆ ತರಲಾಗಿದೆ. ಈ ನಿಯಮವನ್ನು ಪಾಲಿಸದೇ ಇದ್ದಲ್ಲಿ ಎಟಿಎಂ ಕೇಂದ್ರವನ್ನೇ ಸೀಲ್‌ಡೌನ್ ಮಾಡಲಾಗುತ್ತದೆ. ಇಂದಿನಿಂದ ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಉಳಿತಾಯ ಖಾತೆಯಲ್ಲಿರುವ ಉಳಿತಾಯ ಖಾತೆ ಮೇಲೆ ನೀಡುತ್ತಿದ್ದ ಬಡ್ಡಿ ದರದಲ್ಲಿ ಬದಲಾವಣೆಗಳಾಗಿವೆ. ೧ಲಕ್ಷದ ವರೆಗಿನ ಮೊತ್ತಕ್ಕೆ ೩.೫೦% ರಷ್ಟು ಬಡ್ಡಿ ಹಾಗೂ ೧ಲಕ್ಷಕ್ಕಿಂತಲೂ ಹೆಚ್ಚಿನ ಮೊತ್ತವಿದ್ದಲ್ಲಿ ೩.೨೫% ರಷ್ಟು ಬಡ್ಡಿ ನೀಡುತ್ತದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಡಿಜಿಟಲ್ ವಾಲೆಟ್ ಸೇವೆಯನ್ನು ಇಂದಿನಿಂದ ಸ್ಥಗಿತಗೊಳಿಸಿದೆ. ಪಿಎನ್‌ಬಿ ಕಿಟ್ಟಿ ವಾಲೆಟ್ ಬಳಸುತ್ತಿದ್ದ ಗ್ರಾಹಕರು, ಅದರಲ್ಲಿದ್ದ ಹಣವನ್ನ ಖರ್ಚು ಮಾಡಬಹುದು ಅಥವಾ ಐಎಂಪಿಎಸ್ ಮೂಲಕ ಮತ್ತೊಂದು ಖಾತೆಗೆ ವರ್ಗಾವಣೆ ಮಾಡಿಕೊಳ್ಳಬಹುದು.

Please follow and like us:

Leave a Reply

Your email address will not be published. Required fields are marked *

Next Post

ಸಿನಿಮಾ ತಾರೆಯರು ರಾಜಕೀಯಕ್ಕೆ ಪ್ರವೇಶ

Fri May 1 , 2020
ಬೆಂಗಳೂರು: ಸಿನಿಮಾ ನಟ,ನಟಿಯರು ಅಂದ್ರೆನೆ ಒಂಥರಾ ಕ್ರೇಜ್. ಅವರು ರಾಜಕೀಯ ರಂಗಕ್ಕೆ ಎಂಟ್ರಿ ಕೊಟ್ರೆ ಹೇಗಿರುತ್ತೆ. ೨೦೨೦ರ ಪರಿಷತ್ ಸದಸ್ಯರ ಸ್ಥಾನಕ್ಕೆ ನಾಮನಿರ್ದೇಶಿತ ಸದಸ್ಯರಾಗಲು ಚಲನಚಿತ್ರ ರಂಗದ ಕೋಟಾದಡಿಯಲ್ಲಿ ೪ ಜನರ ನಡುವೆ ಪೈಪೋಟಿ ಇದೆ ಎನ್ನಲಾಗುತ್ತದೆ. ಬಿಜೆಪಿಯಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡು, ತಮ್ಮದೇ ಶೈಲಿಯಲ್ಲಿ ಪಕ್ಷ ಸಂಘಟನೆ ಮಾಡುತ್ತಾ ಬರುತ್ತಿರುವ ಆ ನಾಲ್ವರು ಯಾರು ಎಂಬುದನ್ನು ನೋಡುವುದಾದರೆ ನಟ ಜಗ್ಗೇಶ್, ನಟಿಯರಾದ ತಾರಾ, ಅನುರಾಧ, ಶೃತಿ ಮತ್ತು ಮಾಳವಿಕ […]

Advertisement

Wordpress Social Share Plugin powered by Ultimatelysocial