ಭೋಪಾಲ್: ಪಬ್ ಜಿ ಗೇಮ್ ಆಡಲು ಮೊಬೈಲ್ ಇಂಟರ್ನೆಟ್ ಗೆ ದುಡ್ಡು ಕೊಡಲಿಲ್ಲ ಎಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಮಧ್ಯಪ್ರದೇಶದಲ್ಲಿ ನಡೆದಿದೆ. ರಾಜೇಶ್ ಎನ್ನುವ ಇಪ್ಪತ್ತು ವರ್ಷದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭೋಪಾಲ್ ನ ಭಗೇಶವಾನಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪಬ್ ಜಿ ಮೊಬೈಲ್ ಗೇಮ್ ಗೆ ಅಂಟಿಕೊಂಡಿದ್ದ ಯುವಕ ಇತ್ತೀಚೆಗೆ ಮನೆಯವರ ಬುದ್ದಿ ಮಾತಿಗೆ ಕಿವಿಗೊಡದೇ ಸದಾ ಮೊಬೈಲ್ ಲಿ ಮುಳುಗಿರುತ್ತಿದ್ದ. ಪಾಲಕರು ಇಂಟರ್ನೆಟ್ ಗೆ ಹಣ ನೀಡಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಎಸ್ ಶರ್ಮಾ ಎಎನ್ ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಹಣ ನೀಡಲಿಲ್ಲವೆಂದು ಆತ್ಮ ಹತ್ಯೆ ಮಾಡಿಕೊಂಡ ಯುವಕ

Please follow and like us: