ನ್ಯೂಯಾರ್ಕ್: 46 ವರ್ಷದ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಸಾವು ಅಮೆರಿಕಾದಲ್ಲಿ ದೊಡ್ಡ ಪ್ರಮಾಣದ ಹೋರಾಟಕ್ಕೆ ಕಾರಣವಾಗಿದೆ. ಈ ನಡುವೆ ಮೃತ ಫ್ಲಾಯ್ಡ್ ರ ಪುಟ್ಟ ಮಗಳ ವಿಡಿಯೋವೊಂದು ವೈರಲ್ ಆಗಿದ್ದು, ಅದನ್ನು ನೋಡಿ ಹಲವು ಕಣ್ಣೀರು ಹಾಕಿದ್ದಾರೆ. ಫ್ಲಾಯ್ಡ್ ರ ಆತ್ಮೀಯ ಗೆಳೆಯ, ರಾಷ್ಡ್ರೀಯ ಬಾಸ್ಕೆಟ್ ಬಾಲ್ ಆಟಗಾರ ಸ್ಟೀಪನ್ ಜಾಕ್ ಸನ್ ಇನ್ಸ್ಟಾಗ್ರಾಂ ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋವನ್ನು 1.6 ಮಿಲಿಯನ್ ಜನ ವೀಕ್ಷಿಸಿದ್ದಾರೆ. ಬಾಲಕಿ ಜಾಕ್ ಸನ್ ಹೆಗಲ ಮೇಲೆ ಕುಳಿತು ಡ್ಯಾಡಿ ಚೇಂಜ್ ದ ವರ್ಲ್ಡ್ (ಅಪ್ಪ ಜಗತ್ತನ್ನು ಬದಲಿಸುತ್ತಾರೆ) ಎಂದು ಹೇಳುತ್ತಾಳೆ. ಫ್ಲಾಯ್ಡ್ ಅವರನ್ನು ಬಂಧಿಸಿದ್ದ ಅಮೆರಿಕಾ ಪೊಲೀಸರು ಕುತ್ತಿಗೆ ಒತ್ತಿ ಗಾಯ ಮಾಡಿದ್ದರು. ಅದರಿಂದ ಅವರು ಒಂದು ದಿನದ ನಂತರ ಮೃತಪಟ್ಟಿದ್ದಾರೆ. ಶ್ವೇತ ವರ್ಣೀಯ ಪೊಲೀಸ್ ಅಧಿಕಾರಿಯ ಕ್ರೌರ್ಯಕ್ಕೆ ಕಪ್ಪು ವರ್ಣೀಯ ಮೃತಪಟ್ಟ ವಿಷಯ ಅಮೆರಿಕಾದಲ್ಲಿ ದೊಡ್ಡ ಹೋರಾಟಕ್ಕೆ ಕಾರಣವಾಗಿದೆ.
ಹತ್ಯೆ ಗಿಡಾದವನ ಪುತ್ರಿ ಮಾತು ಕೇಳಿ ಕಣ್ಣಿರಾಕಿದ ನೆಟ್ಟಿಗರು

Please follow and like us: