ಹಾವುಗಳ ಪ್ರಧಾನ ಆಹಾರ ಎನಿಸಿಕೊಂಡಿದ್ದು ಕಪ್ಪೆ. ಆದರೆ ಕಪ್ಪೆಯೊಂದು ಹಾವಿನ ಮೇಲೆ ಕುಳಿತು ಸವಾರಿ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದ್ದು ಸೋಜಿಗ ಎನಿಸಿದೆ. ಹಾವಿನ ವಿಡಿಯೋಗಳು ಮತ್ತು ಹಾವು – ಇತರ ಪ್ರಾಣಿಗಳ ನಡುವಿನ ಕಾಳಗದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ವಿಚಾರ. ಆದರೆ ಹಾವಿನ ಮೇಲೆ ಕಪ್ಪೆ ಕುಳಿತು ಸವಾರಿ ಮಾಡುವ ಅಪರೂಪದ ವಿಡಿಯೋ ನೆಟ್ಟಿಗರನ್ನು ರಂಜಿಸಿದೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಸಾಂತ ನಂದ ಅವರು ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಡ್ರಾಮಾ ಆಫ್ ನೇಚರ್, ದೇವರ ಸೃಷ್ಟಿಯ ಪ್ರೇಕ್ಷಕರು ನಾವು ಎಂದು ಶೀರ್ಷಿಕೆಯನ್ನೂ ನೀಡಿದ್ದಾರೆ.
ಹಾವಿನ ಮೇಲೆ ಸವಾರಿ ಮಾಡಿದ ಕಪ್ಪೆ

Please follow and like us: