ಮಹಿಳೆಯರಿಗೆ ಪೂರಕ ವಾತಾವರಣ ಸೃಷ್ಟಿಸಲಿ

 

ನಾಗಮಂಗಲ: ‘ಸಮಾಜವು ಮಹಿಳೆಯರಿಗೆ ಗೌರವ ನೀಡಬೇಕು.

ಹೆಣ್ಣು ಸ್ವತಂತ್ರ ಹಾಗೂ ನೆಮ್ಮದಿ ಗಾಗಿ ಬದುಕಲು ಬೇಕಾದ ವಾತಾವರಣ ಕಲ್ಪಿಸಬೇಕು’ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ನಾಥ ಸ್ವಾಮೀಜಿ ಸಲಹೆ ನೀಡಿದರು.

ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಚುಂಚಾದ್ರಿ ಮಹಿಳಾ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಮಹಿಳೆಯರನ್ನು ಪೂಜಿಸುವ ಮನೆಗಳು ಅಭಿವೃದ್ಧಿಯೆಡೆಗೆ ಸಾಗುತ್ತವೆ. ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಜಗತ್ತಿನಲ್ಲಿ ಜನ್ಮದಾತೆಗಿಂತ ಬೇರೆ ದೇವರಿಲ್ಲ. ನಮ್ಮನ್ನು ಈ ಭೂಮಿಗೆ ತಂದು ಹೊತ್ತು ಸಾಕಿ ಸಲುಹಿದ ತಾಯಿಯನ್ನು ಪ್ರೀತಿ, ಗೌರವದಿಂದ ಕಾಣಬೇಕು’ ಎಂದರು.

‘ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣನ್ನು ಭೂಮಿಗೆ ಹೋಲಿಸುತ್ತಾರೆ. ಎಲ್ಲವನ್ನೂ ಸಹಿಸಿಕೊಳ್ಳುವ ಶಕ್ತಿ ತಾಯಿಗಿದೆ. ಅನೇಕ ಸಮಸ್ಯೆಗಳ ನಡುವೆಯೂ ಹೆಣ್ಣು ಉತ್ತಮ ಸಾಧನೆ ಮಾಡುತ್ತಿದ್ದಾಳೆ’ ಎಂದು ಶ್ಲಾಘಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ವೃಕ್ಷ ಮಾತೆ ತುಳಸೀಗೌಡ ಮಾತನಾಡಿ, ‘ಸುತ್ತಮುತ್ತಲಿನ ಪರಿಸರವನ್ನು ಉಳಿಸಬೇಕು. ಆಗ ಮಾತ್ರ ಇಡೀ ಮನುಕುಲ ನೆಮ್ಮದಿಯಿಂದ ಬದುಕಲು ಸಾಧ್ಯ. ಗಿಡಮರಗಳು ಯಾವುದೇ ಸ್ವಾರ್ಥವಿಲ್ಲದೆ ಗಾಳಿ, ನೆರಳು, ಹಣ್ಣು ನೀಡುತ್ತವೆ. ಆದ್ದರಿಂದ ಎಲ್ಲರೂ ಕಾಡನ್ನು ಬೆಳೆಸಬೇಕು’ ಎಂದು ಸಲಹೆ ನೀಡಿದರು.

ವಿಶ್ವ ಒಕ್ಕಲಿಗರ ಮಹಾವೇದಿಕೆ ಅಧ್ಯಕ್ಷೆ ಭಾರತಿ ಮಾತನಾಡಿ, ‘ಆದಿಚುಂಚನಗಿರಿ ನಮಗೆಲ್ಲ ತವರು ಮನೆಯಂತೆ. ಕ್ಷೇತ್ರಕ್ಕೆ ಬಂದರೆ ತವರಿಗೆ ಬಂದಷ್ಟು ಸಂತಸವಾಗುತ್ತದೆ’ ಎಂದರು.

ಮೈಸೂರಿನ ಯೋಗ ಪಟು ಖುಷಿ ಹೇಮಚಂದ್ರ ಯೋಗ ಪ್ರದರ್ಶನ ನೀಡಿದರು.

ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ವಿಧಾನ ಪರಿಷತ್‍ ಕಾರ್ಯದರ್ಶಿ ಮಹಾಲಕ್ಷ್ಮಿ, ಬೆಂಗಳೂರು ಶಾರದ ಒಕ್ಕಲಿಗರ ಸಂಘದ ಮಹಾದೇವಮ್ಮ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು ಇದ್ದರು.

ಸಾಧಕರಿಗೆ ಸನ್ಮಾನ

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೇಶಿ ಗೋವಿಂದೇಗೌಡ, ಖುಷಿ ದಿನೇಶ್, ಎಂ.ಕೆ.ಆಶಾ, ಡಾ.ಹಿಂದುಮತಿ, ಪದ್ಮಿನಿ, ಖುಷಿ ಹೇಮಚಂದ್ರ, ಶೋಭಾ, ಟಿ.ವಿ.ವೆಂಕಟಲಕ್ಷ್ಮಿ, ಜಿ. ಬಿಂದುರಾಣಿ, ರಿತನ್ಯಗೌಡ ಅವರನ್ನು ನಿರ್ಮಲಾನಂದನಾಥ ಸ್ವಾಮೀಜಿ ಸನ್ಮಾನಿಸಿದರು. ಮಹಿಳೆಯರಿಗೆ ಬಾಗಿನ ನೀಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇರಾಕ್‌ನಲ್ಲಿರುವ ಯುಎಸ್ ಕಾನ್ಸುಲೇಟ್ ಬಳಿ ಇಳಿಯುವ ಕ್ಷಿಪಣಿಗಳು ಇರಾನ್‌ನಿಂದ ಉಡಾವಣೆಗೊಂಡಿವೆ

Sun Mar 13 , 2022
ಹೊಸ ಪರಮಾಣು ಒಪ್ಪಂದಕ್ಕೆ ಬರಲು ವಿಯೆನ್ನಾದಲ್ಲಿ ನಡೆಯುತ್ತಿರುವ ಯುಎಸ್-ಇರಾನ್ ಮಾತುಕತೆಗಳ ನಡುವೆ, ಇರಾನ್‌ನಿಂದ ಉಡಾವಣೆಯಾದ ಹಲವಾರು ರಾಕೆಟ್‌ಗಳು ಶನಿವಾರ ತಡರಾತ್ರಿ ಇರಾಕ್‌ನ ಎರ್ಬಿಲ್ ನಗರದಲ್ಲಿನ ಯುಎಸ್ ಕಾನ್ಸುಲೇಟ್ ಬಳಿ ಇಳಿದವು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ನೆರೆಯ ಇರಾನ್‌ನಿಂದ ಉತ್ತರ ನಗರದಲ್ಲಿ 12 ಕ್ಷಿಪಣಿಗಳನ್ನು ಉಡಾಯಿಸಲಾಗಿದೆ ಎಂದು ಯುಎಸ್ ರಕ್ಷಣಾ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಇರ್ಬಿಲ್ ನಗರವು ಇರಾಕ್‌ನ ಕುರ್ದಿಸ್ತಾನ್ ಪ್ರದೇಶದ ರಾಜಧಾನಿಯಾಗಿದೆ. ಯಾವುದೇ […]

Advertisement

Wordpress Social Share Plugin powered by Ultimatelysocial