ಮಚ್ಚಿವರ: ಕೊರೊನಾವ ವೈರಸ್ ಲಾಕ್ಡೌನ್ ನಿಯಮಗಳು ಜಾರಿಯಲ್ಲಿರುವುದರ ಹಿನ್ನೆಲೆಯಲ್ಲಿ ನವ ಜೀವನಕ್ಕೆ ಕಾಲಿಡುತ್ತಿರುವ ಹಿಂದೂ ಯುವತಿಯ ವಿವಾಹ ನೆರವೇರಿಸುವ ಮೂಲಕ ಮುಸ್ಲಿಂ ದಂಪತಿಗಳು ಎಲ್ಲೆಡೆಗಳಿಂದ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.ಲೂಧಿಯಾನಾ ಜಿಲ್ಲೆಯ ಭಾಟಿಯಾನ್ನಲ್ಲಿರುವ ಹಿಂದೂ ದಂಪತಿಗಳ ವಿವಾಹವನ್ನು ನೆರವೇರಿಸಲಾಗಿದೆ. ಸುದೇಶ್ ಕುಮಾರ್ ಅವರೊಂದಿಗೆ 22 ವರ್ಷದ ಪೂಜಾ ಎಂಬವರ ವಿವಾಹವು ನಿಗದಿಯಾಗಿತ್ತು. ಆದರೆ ಕೊರೊನಾ ವೈರಸ್ ಲಾಕ್ಡೌನ್ ಹಿನ್ನೆಲೆಯಲ್ಲಿ ಪೋಷಕರಿಗೆ ಆಗಮಿಸಲು ಸಾಧ್ಯವಾಗಲಿಲ್ಲ. ಪರಿಣಾಮ ಮುಸ್ಲಿಂ ದಂಪತಿಗಳಾದ ಅಬ್ದುಲ್ ಸಾಜೀದ್ ಹಾಗೂ ಸೋನಿ ಹಿಂದೂ ಯುವತಿಯ ಕನ್ಯಾದಾನವನ್ನು ಮಾಡಿದರು.
ಹಿಂದೂ ಯುವತಿಯ ಮದುವೆ ಮಾಡಿದ ಮುಸ್ಲಿಂ ದಂಪತಿ

Please follow and like us: