ಉಕ್ರೇನ್​ನಲ್ಲಿರುವ ಅಮರಿಕನ್ನರಿಗೆ ಅಧ್ಯಕ್ಷ ಜೋ ಬೈಡೆನ್​ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

ವಾಷಿಂಗ್ಟನ್​: ಉಕ್ರೇನ್​ ವಿಚಾರವಾಗಿ ಅಮರಿಕ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಶೀತಲ ಸಮರ ಮತ್ತಷ್ಟು ಉಲ್ಬಣಗೊಂಡಿದ್ದು, ಉಕ್ರೇನ್​ನಲ್ಲಿರುವ ಅಮರಿಕನ್ನರಿಗೆ ಅಧ್ಯಕ್ಷ ಜೋ ಬೈಡೆನ್​ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬೈಡೆನ್​, ತಕ್ಷಣ ಅಮೆರಿಕನ್ನರು ಉಕ್ರೇನ್​ ಬಿಡುವಂತೆ ಕರೆ ನೀಡಿದ್ದಾರೆ.ರಷ್ಯಾ ಸೈನಿಕರ ಪಡೆ ಉಕ್ರೇನ್​ ಗಡಿಯಲ್ಲಿ ಬೀಡುಬಿಟ್ಟಿರುವುದರಿಂದ ಬೈಡೆನ್​ ಈ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.ನಾವು ವಿಶ್ವದ ಅತಿದೊಡ್ಡ ಸೈನ್ಯದೊಂದಿಗೆ ವ್ಯವಹರಿಸುತ್ತಿದ್ದೇವೆ. ಇದು ತುಂಬಾ ವಿಭಿನ್ನವಾದ ಪರಿಸ್ಥಿತಿ ಮತ್ತು ವಿಷಯಗಳು ತ್ವರಿತವಾಗಿ ಬೆಳೆಯಬಹುದು ಎಂದು ಬೈಡೆನ್​ ಹೇಳಿದ್ದಾರೆ.ಉಕ್ರೇನ್​ಗೆ ನಮ್ಮ ಸೇನಾ ಪಡೆಯನ್ನು ಕಳುಹಿಸುವ ಉದ್ದೇಶವಿಲ್ಲ. ಯಾವಾಗ ಅಮೆರಿಕನ್ನರ ಪಡೆ ಮತ್ತು ರಷ್ಯಾ ಪಡೆ ಗುಂಡಿನ ದಾಳಿ ಆರಂಭಿಸುತ್ತದೋ ಆವಾಗ ಅದು ವಿಶ್ವಯುದ್ಧವಾಗುತ್ತದೆ. ನಾವೀಗ ತುಂಬಾ ವಿಭಿನ್ನವಾದ ಪ್ರಪಂಚದಲ್ಲಿದ್ದೇವೆ ಎಂದು ಬೈಡೆನ್​ ಹೇಳಿದರು.ರಷ್ಯಾ ಬೆಲರಸ್​ನಾದ್ಯಂತ ಟ್ಯಾಂಕರ್​ಗಳನ್ನು ಕಳುಹಿಸಿದ್ದು, ಭಾರಿ ಕ್ಷಿಪ್ಪಣಿಗಳು ಮತ್ತು ಸಾಕಷ್ಟು ಸೈನಿಕರನ್ನು ರಷ್ಯಾ ಉಕ್ರೇನ್​ ಗಡಿಯಲ್ಲಿ ಜಮಾವಣೆ ಮಾಡುತ್ತಿರುವುದು ತುಂಬಾ ಅಪಾಯಕಾರಿ ಬೆಳವಣಿಗೆ ಎಂದು ಅಮೆರಿಕದ ನ್ಯಾಟೋ ಪಡೆ ಹೇಳಿಕೆ ನೀಡಿದ ಬೆನ್ನಲ್ಲೇ ಬೈಡೆನ್​​ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಉಕ್ರೇನ್​ಗಾಗಿ ಅಮೆರಿಕ ಮತ್ತು ರಷ್ಯಾ ಹಠಕ್ಕೆ ಬಿದ್ದಿವೆ. ಇತ್ತ ಒಂದು ಹೆಜ್ಜೆ ಮುಂದಿಟ್ಟಿರುವ ರಷ್ಯಾ ಗಡಿಯಲ್ಲಿ ಸರ್ವಸನ್ನದ್ಧ ಸ್ಥಿತಿಯಲ್ಲಿರುವುದು ಆತಂಕಕಾರಿ ಬೆಳವಣಿಗೆ ನಡೆಯುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶೃತಿ ಹಾಸನ್:ಪ್ರತಿದಿನ ನಾನು ನಿನ್ನನ್ನು ಪ್ರೀತಿಸಲು ಹೊಸ ಕಾರಣಗಳನ್ನು ಕಂಡುಕೊಳ್ಳುತ್ತೇನೆ !!

Fri Feb 11 , 2022
ತನ್ನ ಗೆಳೆಯ ಸಂತಾನು ಹಜಾರಿಕಾ ಮತ್ತು ಅವನ ಕಲಾಕೃತಿಯ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಶ್ರುತಿ ಹಾಸನ್ Instagram ನಲ್ಲಿ ಬಹಿರಂಗಪಡಿಸಿದ್ದಾರೆ. ನಟಿ ತನ್ನ ನೆಚ್ಚಿನ ಕೆಲವು ಹಾಡುಗಳನ್ನು ಕಲಾ ಪ್ರದರ್ಶನದಲ್ಲಿ ಪ್ರದರ್ಶಿಸಿದರು. ಕೆಲವು ಚಿತ್ರಗಳು ಮತ್ತು ವೀಡಿಯೊವನ್ನು ಹಂಚಿಕೊಂಡ ಶ್ರುತಿ, ಸಂತಾನು ಮತ್ತು ಈವೆಂಟ್‌ಗಾಗಿ ತನ್ನೊಂದಿಗೆ ಕೆಲಸ ಮಾಡಿದ ಎಲ್ಲಾ ಸಂಗೀತಗಾರರಿಗೆ ಧನ್ಯವಾದ ಹೇಳಿದರು. ಅವಳು ತನ್ನ ಸಹೋದರಿ ಅಕ್ಷರಾ ಹಾಸನ್‌ಗೆ ಧನ್ಯವಾದಗಳನ್ನು ಅರ್ಪಿಸಿದಳು ಮತ್ತು ಅವಳನ್ನು ಅತ್ಯುತ್ತಮ […]

Advertisement

Wordpress Social Share Plugin powered by Ultimatelysocial