ಯುದ್ಧ ನಿಲ್ಲಿಸಲು ವಿಶ್ವಸಂಸ್ಥೆ ನಿರ್ಣಯ.

ನ್ಯೂಯಾರ್ಕ್: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧಾರಂಭವಾಗಿ ಒಂದು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ರಷ್ಯಾ ಯುದ್ಧ ನಿಲ್ಲಿಸಬೇಕು, ತಕ್ಷಣ ಸೇನೆಯನ್ನು ಉಕ್ರೇನ್ ನಿಂದ ಹಿಂದಕ್ಕೆ ಕರೆಸಬೇಕು ಎಂಬ ನಿರ್ಣಯವನ್ನು ಅಂಗೀಕರಿಸಿತು.193 ಸದಸ್ಯಬಲದ ಸಾಮಾನ್ಯ ಸಭೆಯಲ್ಲಿ 141 ಸದಸ್ಯರು ನಿರ್ಣಯದ ಪರವಾಗಿಯೂ, ಏಳು ಸದಸ್ಯರು ವಿರುದ್ಧವಾಗಿಯೂ ಮತ ಹಾಕಿದರು. ಭಾರತ ಮತ್ತು ಚೀನಾ ಸೇರಿದಂತೆ 32 ಸದಸ್ಯ ರಾಷ್ಟ್ರಗಳು ತಟಸ್ಥ ಧೋರಣೆ ತೋರಿದವು.ರಾಜತಾಂತ್ರಿಕ ಮಾರ್ಗಗಳ ಮೂಲಕ ಶಾಂತಿಗಾಗಿ ಪ್ರತಿಪಾದಿಸುವಾಗ, ಭಾರತವು ರಷ್ಯಾ ವಿರುದ್ಧದ ಮತದಾನದಿಂದ ದೂರ ಉಳಿಯಿತು.ಯುಎನ್ ಚಾರ್ಟರ್‌ ಗೆ ಅನುಗುಣವಾಗಿ ಉಕ್ರೇನ್‌ ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತವಾದ ಶಾಂತಿಯನ್ನು ಸಾಧಿಸಲು ರಾಜತಾಂತ್ರಿಕ ಪ್ರಯತ್ನಗಳಿಗೆ ಬೆಂಬಲವನ್ನು ದ್ವಿಗುಣಗೊಳಿಸಲು ಸದಸ್ಯ ರಾಷ್ಟ್ರಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ವಿಶ್ವಸಂಸ್ಥೆ ನಿರ್ಣಯವು ಕರೆ ನೀಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾಲ್ಕಂಕಿಗೆ ಇಳಿದ ಕೊಬ್ಬರಿ ಬೆಲೆ.

Fri Feb 24 , 2023
  ಹುಳಿಯಾರು: ಐದು ವರ್ಷದಿಂದ ಐದಂಕಿ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದ ಕೊಬ್ಬರಿ ಬೆಲೆ ಗುರುವಾರ ಪಟ್ಟಣದ ಎಪಿಎಂಸಿಯಲ್ಲಿ ಕ್ವಿಂಟಲ್‌ಗೆ ₹9,666ಕ್ಕೆ ಕುಸಿಯುವ ಮೂಲಕ ನಾಲ್ಕಂಕಿಗೆ ಇಳಿದಿದೆ.ಆರು ವರ್ಷದ ಹಿಂದೆ ಕೊಬ್ಬರಿ ಬೆಲೆ ಕ್ವಿಂಟಲ್‌ಗೆ ₹7 ಸಾವಿರಕ್ಕೆ ಕುಸಿದಿತ್ತು.ಅದಾದ ನಂತರ ₹18 ಸಾವಿರದವರೆಗೂ ಏರಿಕೆಯಾಗಿ ತೆಂಗು ಬೆಳೆಗಾರರಲ್ಲಿ ಮಂದಹಾಸ ಮೂಡಿಸಿತ್ತು. ಕಳೆದ ವರ್ಷದಿಂದ ಬೆಲೆ ಕುಸಿಯುತ್ತಾ ₹11 ಸಾವಿರದಿಂದ ₹12 ಸಾವಿರ ಅಸುಪಾಸಿನಲ್ಲಿ ಸ್ಥಿರವಾಗಿತ್ತು. ಸದ್ಯ ₹10 ಸಾವಿರಕ್ಕಿಂತ ಕಡಿಮೆಯಾಗಿರುವುದು ತೆಂಗು […]

Advertisement

Wordpress Social Share Plugin powered by Ultimatelysocial