ಅಪ್ರಾಪ್ತ ಮಗುವನ್ನು ಹಿಂಸಿಸಿ ಕೊಲೆ ಮಾಡಿದ ಅಪರಾಧಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ 

ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಸೋಮವಾರ 13/12/2021 ರಂದು ಕುಡಚಿ ಪಟ್ಟಣದ ನಿವಾಸಿ ಶಬ್ಬೀರ್ ದೇಸಾಯಿ ಎಂಬುವರ 5ವರ್ಷದ ಮಹಮ್ಮದಸಾದ ಶಬ್ಬೀರ ದೇಸಾಯಿ ಎಂಬ ಮಗು ನಾಪತ್ತೆಯಾಗಿದ್ದು ಈ ಬಗ್ಗೆ ಪಟ್ಟಣದ ಜನರು‌ ಮಗುವಿನ ಸಂಬಂಧಿಕರು ಹಗಲು ರಾತ್ರಿ ಹುಡುಕಾಡಿದರು ಮಗು ಸಿಕ್ಕಿಲ್ಲ ನಂತರ ಪೇಸ್ ಬುಕ್‌,ವಾಟ್ಸಪ್ ನಂತಹ ಸಾಮಾಜಿಕ ಜಾಲತಾನದಲ್ಲಿ ಮಗು ನಾಪತ್ತೆಯಾಗಿದ್ದಾನೆ ಎಂದು‌ ಹರದಾಡತೋಗಿದವು ಆದರು ಕೂಡ ಮಗುವಿನ ಸುಳಿವು ಸಿಗಲಿಲ್ಲ ಮರುದಿನ ಕುಡಚಿ ರೈಲ್ವೆ ಸ್ಟೇಷನ್ ಟ್ರ್ಯಾಕ ಹತ್ತಿರ ಗಾಯದ ಸ್ಥಿತಿಯಲ್ಲಿ ಮಗುವಿನ ಶವ ಪತ್ತೆಯಾಗಿದೆ.

ಅಪ್ರಾಪ್ತ ಮೊಹಮ್ಮದಸಾದನನ್ನು ಯಾಸೀರ ಅಮಿರದ್ದಿನ ದೇಸಾಯಿ 25 ವರ್ಷದ ಯುವಕ ಮಗುವನ್ನು ಅಪಹರಿಸಿ ಮಗುವಿನ ಗುಪ್ತಾಂಗಕ್ಕೆ ಹೊಡೆದು ಕುತ್ತಿಗೆಗೆ ಉಸಿರು ಗಟ್ಟಿಸಿ ಮತ್ತು ಮನಬಂದಂತೆ ದೇಹವನ್ನ ಹಿಂಸಿಸಿ ಹಿನಾಯವಾಗಿ ಕೊಲೆ ಮಾಡಿದ್ದ ಘಟನೆಯನ್ನು ಖಂಡಿಸಿ ಕುಡಚಿ ಪಟ್ಟಣದ ಸಾರ್ವಜನಿಕರು ಪಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಂಡು ಕುಡಚಿ ಉಪ ತಹಶಿಲ್ದಾರ ಕಚೇರಿಗೆ ತೆರಳಿ ಏನು ಅರಿಯದ 5 ವರ್ಷದ ಮಗುವನ್ನ ಕೋಲೆಮಾಡಿದ 25 ವರ್ಷದ ಪಾಪಿ ಯಾಸಿರ ಅಮಿರದ್ದಿನ್ ದೇಸಾಯಿಗೆ ತ್ವರೀತ ನ್ಯಾಯಾಲಯದ ಮುಖಾಂತರ ಅದೆಷ್ಟುಬೇಗ ಗಲ್ಲು ಶಿಕ್ಷೆದೊರುಕುವ ಸಂಬಂಧಪಟ್ಟ ಕ್ರಮ ಕೈಗೊಳ್ಳಬೇಕು ಮತ್ತು‌ ಈ ಹಿನಾಯ ಕೃತ್ಯೆದಲ್ಲಿ ಭಾಗಿಯಾದವರು ಹಾಗೂ ಸಹಾಯ ಮಾಡಿದವರಿಗೂ ಶಿಕ್ಷೆ ಯಾಗಬೇಕು ಇನ್ನೂ ಮುಂದೆ ನಮ್ಮ ಕುಡಚಿ ಪಟ್ಟಣದಲ್ಲಿ ಇಂತಹ ಘಟನೆ ಮರುಕಳಿಸಬಾರದು ಮಗುವನ್ನು ಕೊಲೆ ಮಾಡಿದ ವ್ಯಕ್ತಿಗೆ ಕೂಡಲೆ ಗಲ್ಲು ಶಿಕ್ಷೆ ಕೊಡಬೇಕು ಎಂದು ಕುಡಚಿ ಪಟ್ಟಣದ ಸಾರ್ವಜನಿಕರಿಂದ ಉಪ ತಹಶಿಲ್ದಾರ ದಾನಿಹಾಳ ಮೂಲಕ ಮನವಿ ನೀಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಭಿನಂದನ್ ಸಂಸ್ಥೆಯಿಂದ ಸಂಡೆ ಫಾರ್ ಸೋಶಿಯಲ್ ವರ್ಕ್ ಅಭಿಯಾನ

Mon Dec 20 , 2021
ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಸ್ಥಳೀಯ ಅಭಿನಂದನ್ ಸಂಸ್ಥೆಯು ಆರಂಬಿಸಿದ ಸಂಡೆ ಫಾರ್ ಸೋಶಿಯಲ್ ವರ್ಕ್ ಅಭಿಯಾನದ 24 ನೇ ವಾರದ ಸೇವಾ ಕಾರ್ಯವನ್ನು ಮಸ್ಕಿಯ ವಿಶ್ವ ಪ್ರಸಿದ್ಧ ಐತಿಹಾಸಿಕ ಖ್ಯಾತಿಯನ್ನು ಹೊಂದಿದ ಅಶೋಕ ಶಿಲಾಶಾಸನದ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.ಶಾಸನದ ಆವರಣದಲ್ಲಿ ತಮ್ಮ ಸಿಬ್ಬಂದಿಯೊಂದಿಗೆಸ್ವಚ್ಛತಾ ಕಾರ್ಯವನ್ನು ಯಶಸ್ವಿಯಾಗಿ ಮಾಡಲಾಯಿತು.ಇದೇ ಸಂದರ್ಭದಲ್ಲಿ ಮಾತನಾಡಿದ ಸಂಡೇ ಫಾರ್ ಸೋಶಿಯಲ್ ವರ್ಕ್ ನ ರುವಾರಿಗಳಾದ ರಾಮಣ್ಣ ಹಂಪರಗುಂದಿ ಅವರು ಮಸ್ಕಿಯನ್ನು ಸುಂದರ ನಗರವನ್ನಾಗಿ ಹಾಗೂ ಭಾರತವನ್ನು […]

Advertisement

Wordpress Social Share Plugin powered by Ultimatelysocial