ಹಿರಿಯ ಸಾಹಿತಿ, ನಿತ್ಯೋತ್ಸವ ಕವಿ ನಿಸಾರ್ ಅಹಮದ್ ವಿಧಿವಶ

ಬೆಂಗಳೂರು:ನಾಡೋಜ ನಿಸ್ಸಾರ್ ಅಹ್ಮದ್ ಇಂದು ಬೆಂಗಳೂರಿನ ಪದ್ಮನಾಭನಗರದ ಮನೆಯಲ್ಲಿ ನಿಧನರಾಗಿದ್ದಾರೆ. ೮೪ ರ‍್ಷದ ನಿಸ್ಸಾರ್ ಅಹ್ಮದ್ ಕೆಲವು ದಿನಗಳಿಂದ ಮಾನಸಿಕ ಆಘಾತಕ್ಕೆ ಒಳಗಾಗಿದ್ರು. ಅಮೇರಿಕಾದಲ್ಲಿ ತಮ್ಮ ಪುತ್ರ ಅಗಲಿಕೆಯಿಂದ ತೀವ್ರವಾಗಿ ನೊಂದಿದ್ರು. ಕೊವಿಡ್ ವೈರಸ್ ನಿಂದಾಗಿ ಮಗನ ಅಂತಿಮ ರ‍್ಶನ ಪಡೆಯೋದಕ್ಕೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಪುತ್ರ ಶೋಕ ಕಾಡಿತ್ತು. ಅಲ್ಲದೆ ವಯೋ ಸಹಜ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ರು. ನವ್ಯ ಸಾಹಿತ್ಯ ಪ್ರಕಾರದಲ್ಲಿ ಕೃಷಿ ಮಾಡಿದ್ದ ನಿಸ್ಸಾರ್ ಅಹ್ಮದ್ ನಿತ್ಯೋತ್ಸವ ಕವಿಯೆಂದೇ ಪ್ರಸಿದ್ಧರಾಗಿದ್ರು. ಜೋಗದ ಸಿರಿ ಬೆಳಕಿನಲ್ಲಿ ಅನ್ನೋ ಹಾಡು ನಾಡಿನಾದ್ಯಂತ ಪ್ರಸಿದ್ಧಿಯಾಗಿತ್ತು. ಅಲ್ಲದೆ ಶಿವಮೊಗ್ಗದಲ್ಲಿ ನಡೆದಿದ್ದ ಅಖಿಲ ರ‍್ನಾಟಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನ ಹೊಂದಿದ್ರು. ನಾಡೋಜ, ರಾಜ್ಯೋತ್ಸವ, ಪಂಪ ಪ್ರಶಸ್ತಿಗಳಿಗೆ ಕೂಡಾ ಭಾಜನಾರಾಗಿದ್ರು. ಅಲ್ಲದೆ ಪದ್ಮಶ್ರೀ ಪ್ರಶಸ್ತಿ ಅವರ ಸಾಹಿತ್ಯಕ್ಕೊಂದು ಗರಿಮೆಯಾಗಿತ್ತು.

Please follow and like us:

Leave a Reply

Your email address will not be published. Required fields are marked *

Next Post

ರಾಬರ್ಟ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್..?

Tue May 5 , 2020
ಸ್ಯಾಂಡಲ್ವುಡನಲ್ಲಿ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಸದ್ಯ ಲಾಕ್ ಡೌನ್ ಹಿನ್ನೆಲೆ ಶೂಟಿಂಗ್ ಸ್ಥಗಿತವಾಗಿದೆ. ಆದರೆ ಯುಟ್ಯೂಬ್ನಲ್ಲಿ ಹಾಡುಗಳು ರಿಲೀಸ್ ಆಗಿದ್ದು ಸಖತ್ ಸೌಂಡ್ ಮಾಡ್ತಿವೆ. ಈ ನಡುವೆ ರಾಬರ್ಟ್ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತ ಕಾಯ್ದು ಕುಳಿತಿರುವ ಅಭಿಮಾನಿಗಳಿಗೆ ಚಿತ್ರತಂಡ ಸುಳಿವು ಬಿಟ್ಟು ಕೊಟ್ಟಿದೆ ಎನ್ನಲಾಗಿದೆ. ಈ ಮೊದಲು ಎಪ್ರಿಲ್ 9, ಮೇ 1 ರಂದು ಸಿನಿಮಾ ಬಿಡುಗಡೆಯಾಗುತ್ತೆ ಎನ್ನಲಾಗಿತ್ತು. ಸದ್ಯ ರಾಬರ್ಟ್ […]

Advertisement

Wordpress Social Share Plugin powered by Ultimatelysocial