ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಸನದ ಉತ್ತರ ಬಡಾವಣೆ ಹಾಗೂ ಇಂದಿರಾನಗರವನ್ನು ಸೀಲ್’ಡೌನ್ ಮಾಡಲಾಗಿದೆ. ಪೊಲೀಸ್ ಪೇದೆ ಹಾಗೂ ಅರಳಿಕಟ್ಟೆ ಪಕ್ಕದ ರಸ್ತೆಯ ನಿವಾಸಿ ಸೇರಿದಂತೆ ಇಲ್ಲಿವರೆಗೂ ಹಾಸದಲ್ಲಿ ಒಟ್ಟು೧೪ ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಪೊಲೀಸ್ ಪೇದೆಯೊಬ್ಬರಲ್ಲಿ ಕೊರೋನಾ ವೈರಸ್ ಇದೆಯೆಂದು ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಹಾಸನದ ಎರಡು ಏರಿಯಾಗಳನ್ನು ಸೀಲ್ ಡೌನ್ ಮಾಡಲಾಗಿದೆ. ಕೊರೋನಾ ದೃಢಪಟ್ಟಿರುವ ಪೊಲೀಸ್ ಪೇದೆಯು ಬೆಂಗಳೂರಿನಲ್ಲಿ ರ್ತವ್ಯ ನರ್ವಹಿಸಿ ಹಾಸನಕ್ಕೆ ಹಿಂದಿರುಗಿದ್ದರು. ಅದೇ ರೀತಿ ಈ ಪೋಲಿಸ್ ಪೇದೆಯು ಜಿಲ್ಲೆಯ ಪೊಲೀಸ್ ತರಬೇತಿ ಶಾಲೆಗೂ ಭೇಟಿ ನೀಡಿದ್ದ ಕಾರಣ ಇದೀಗ ನೂರಕ್ಕೂ ಹೆಚ್ಚು ಪೊಲೀಸರನ್ನು ಕ್ವಾರಂಟೈನ್ ನಲ್ಲಿರಿಸಲಾಗಿದೆ. ಸದರಿ ವಿಚಾರವಾಗಿ ಮಾಹಿತಿ ನೀಡಿರುವ ಜಿಲ್ಲಾಧಿಕಾರಿಗಳು ಎರಡು ಏರಿಯಾಗಳನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಿದ್ದಾರೆ. ಇಂದಿನಿಂದ ೨೮ ದಿನಗಳ ಕಾಲ ಈ ರಸ್ತೆಗಳನ್ನು ಸೀಲ್’ಡೌನ್ ಮಾಡಲಾಗಿದ್ದು, ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತವೇ ಪೂರೈಕೆ ಮಾಡಲಿದ್ದು, ಜನರು ಬಹಳ ಎಚ್ಚರವಹಿಸಬೇಕೆಂದು ಹೇಳಿದ್ದಾರೆ.
೧೦೦ಕ್ಕೂ ಹೆಚ್ಚು ಪೊಲೀಸ್ ಕ್ವಾರಂಟೈನ್

Please follow and like us: