ಅದಾನಿ ಗ್ರೂಪ್‌ಗೆ ಸಾಲ ನೀಡಿಕೆ ಮುಂದುವರಿಸಲು ಸಿದ್ಧ: ಬ್ಯಾಂಕ್ ಆಫ್ ಬರೋಡಾ ಸಿಇಒ

 

 

ದಾನಿ ಗ್ರೂಪ್‌ ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆಯನ್ನು ಮಾಡಿದೆ ಎಂದು ಹಿಂಡನ್‌ಬರ್ಗ್ ವರದಿ ಮಾಡಿದೆ. ಇದಾದ ಬೆನ್ನಲ್ಲೇ ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟಯೆಲ್ಲಿ ಭಾರೀ ನಷ್ಟವನ್ನು ಕಂಡಿದೆ. ಅದಾನಿ ಗ್ರೂಪ್ ಮಾರುಕಟ್ಟೆ ಮೌಲ್ಯ ಅರ್ಧಕ್ಕೂ ಅಧಿಕ ಇಳಿಕೆಯಾಗಿದೆ.

ಈ ಎಲ್ಲ ಬೆಳವಣಿಗೆ ನಡುವೆ ಅದಾನಿ ಗ್ರೂಪ್‌ಗೆ ಸಾಲ ನೀಡುವುದನ್ನು ಮುಂದುವರಿಸಲು ನಾವು ಸಿದ್ಧವಾಗಿದ್ದೇವೆ ಎಂದು ಬ್ಯಾಂಕ್ ಆಫ್ ಬರೋಡಾ ಸಿಇಒ ಸಂಜೀವ್ ಚಡ್ಡಾ ತಿಳಿಸಿದ್ದಾರೆ.

ಹಲವಾರು ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಅದಾನಿ ಗ್ರೂಪ್‌ಗೆ ಸಾಲವನ್ನು ನೀಡುವುದನ್ನು ನಿಲ್ಲಿಸಿದೆ. ಹಲವಾರು ಅಂತಾರಾಷ್ಟ್ರೀಯ ಬ್ಯಾಂಕುಗಳು ಅದಾನಿ ಗ್ರೂಪ್‌ನ ಡಾಲರ್‌ ಬಾಂಡ್ ಮೇಲಾಧಾರವಾಗಿ ಇಟ್ಟುಕೊಂಡು ಸಾಲ ನೀಡಲಾಗದು ಎಂದು ತಿಳಿಸಿದೆ. ಈ ನಡುವೆ ದೇಶದ ಅತೀ ದೊಡ್ಡ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ, ಅದಾನಿ ಗ್ರೂಪ್‌ಗೆ ಸಾಲವನ್ನು ನೀಡುವುದನ್ನು ಮುಂದುವರಿಸಲು ಸಿದ್ಧವಾಗಿದ್ದೇವೆ ಎಂದು ಹೇಳಿದೆ.

“ಅದಾನಿ ಗ್ರೂಪ್‌ಗೆ ಸಾಲವನ್ನು ನೀಡುವುದನ್ನು ನಾವು ಮುಂದುವರಿಸುತ್ತೇವೆ. ಅಂಡರ್‌ರೈಟಿಂಗ್ ಮಾನದಂಡಗಳನ್ನು ಪೂರೈಸಿದರೆ ಸಂಸ್ಥೆಗೆ ಸಾಲವನ್ನು ನೀಡಲಾಗುತ್ತದೆ. ಅದಾನಿ ಸ್ಟಾಕ್‌ಗಳ ಸುತ್ತ ನಡೆಯುವ ಬಗ್ಗೆ ಬ್ಯಾಂಕ್ ಯಾವುದೇ ಚಿಂತೆಯನ್ನು ಮಾಡುವುದಿಲ್ಲ,” ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಚಡ್ಡಾ ಮಾಹಿತಿ ನೀಡಿದ್ದಾರೆ.

ಅದಾನಿ ಗ್ರೂಪ್‌ಗೆ ಮುಂದಿನ ತಿಂಗಳಿನವರೆಗೆ 500 ಮಿಲಿಯನ್‌ ಡಾಲರ್ ಸಾಲವನ್ನು ನೀಡುವುದನ್ನು ಹಲವಾರು ಬ್ಯಾಂಕುಗಳು ನಿರ್ಬಂಧಿಸಿದೆ. ಇದಾದ ಬೆನ್ನಲ್ಲೇ ಗೌತಮ್ ಅದಾನಿಗೆ ಬೆಂಬಲವಾದ ಹೇಳಿಕೆಯನ್ನು ಬ್ಯಾಂಕ್ ಆಫ್ ಇಂಡಿಯಾ ಸಿಇಒ ನೀಡಿದ್ದಾರೆ. ಜನವರಿಯಲ್ಲಿ ಅದಾನಿ ಗ್ರೂಪ್ ವಿರುದ್ಧ ಹಲವಾರು ಆರೋಪಗಳನ್ನು ಮಾಡಿ ಹಿಂಡನ್‌ಬರ್ಗ್ ವರದಿಯನ್ನು ಪ್ರಕಟಿಸಿದೆ.

ಅದಾನಿ ಗ್ರೂಪ್‌ಗೆ ನೀಡಿದ ಸಾಲ

ಬ್ಯಾಂಕ್ ಆಫ್ ಬರೋಡಾ ಈ ಹಿಂದೆಯೂ ಹಲವಾರು ಬಾರಿ ಅದಾನಿ ಗ್ರೂಪ್‌ಗೆ ಸಾಲವನ್ನು ನೀಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಕೂಡಾ (ಎಸ್‌ಬಿಐ) ಅದಾನಿ ಗ್ರೂಪ್‌ಗೆ ಸಾಲವನ್ನು ನೀಡಿದೆ. 270 ಬಿಲಿಯನ್ ರೂಪಾಯಿಗೂ ಅಧಿಕ (3.3 ಬಿಲಿಯನ್ ಡಾಲರ್) ಸಾಲವನ್ನು ಅದಾನಿ ಗ್ರೂಪ್‌ಗೆ ಎಸ್‌ಬಿಐ ನೀಡಿದೆ.

ಒಂದು ವರ್ಷದ ಹಿಂದೆ ಯೋಜನೆಯೊಂದಕ್ಕೆ ಅದಾನಿ ಗ್ರೂಪ್‌ಗೆ 50.7 ಬಿಲಿಯನ್ ರೂಪಾಯಿ ಸಾಲವನ್ನು ನೀಡಿದೆ. ಇದಾದ ಬಳಿಕ ಧಾರವಿ ಡೆಲವಪ್‌ಮೆಂಟ್ ಯೋಜನೆಗೆ ಸಾಲವನ್ನು ವಿಸ್ತರಣೆ ಮಾಡುವ ನಿರ್ಧಾರವನ್ನು ಕೂಡಾ ಬ್ಯಾಂಕ್ ಆಫ್ ಬರೋಡಾ ಮಾಡಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ಜಗದ್ಗುರು ಶ್ರೀ ಶಿವಾನಂದ ಸ್ವಾಮೀಜಿಗಳ ರಥೋತ್ಸವ ಅದ್ಧೂರಿಯಾಗಿ ನೆರವೇರಿದೆ.

Mon Feb 20 , 2023
ಗದಗ, ಫೆಬ್ರವರಿ 20: ಗದಗಿನ ಶಿವಾನಂದ ಬ್ರಹನ್ಮಠದ ಉತ್ತರಾಧಿಕಾರಿ ವಿವಾದದ ನಡುವೆಯೂ ಜಗದ್ಗುರು ಶ್ರೀ ಶಿವಾನಂದ ಸ್ವಾಮೀಜಿಗಳ ರಥೋತ್ಸವ ಅದ್ಧೂರಿಯಾಗಿ ನೆರವೇರಿದೆ. ಸುಮಾರು ಎರಡು ಮೂರು ತಿಂಗಳಿಂದ ವಿವಾದದ ಸುಳಿಯಲ್ಲಿ ಸಿಲುಕಿದ್ದ ಶಿವಾನಂದ ಮಠದ ಜಾತ್ರೆ ಹೇಗೆ ನಡೆಯುತ್ತೆ ಎಂಬುದೇ ಬಹಳ ಕುತೂಹಲ ಕೆರಳಿಸಿತ್ತು. ಕಿರಿಯ ಶ್ರೀ ಸದಾಶಿವಾನಂದ ಭಾರತಿ ಶ್ರೀಯನ್ನು ಉತ್ತರಾಧಿಕಾರಿ ಸ್ಥಾನದಿಂದ ತೆಗೆಯಲಾಗಿದೆ ಎಂಬ ವಿಚಾರದಿಂದ ಶುರುವಾಗಿದ್ದ ಪ್ರಕರಣ, ಕೋರ್ಟ್ ಮೆಟ್ಟಿಲೇರಿ ಮಧ್ಯಂತರ ತೀರ್ಪಿನಲ್ಲಿ ಕಿರಿಯ ಸ್ವಾಮಿಜಿ […]

Advertisement

Wordpress Social Share Plugin powered by Ultimatelysocial