ಅನುಷ್ಕಾ ಶರ್ಮಾ ಅಭಿನಂದನೆ ಕೊಟ್ಟ ಪ್ರಿಯಾಂಕ ಚೋಪ್ರಾ, ನಿಕ್‌ ಜೋನ್‌ ದಂಪತಿಗೆ

 

 

ಮುಂಬೈ: ಕೆಲವು ದಿನಗಳ ಹಿಂದೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ದಂಪತಿ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ.

ಇನ್‌ಸ್ಟಾಗ್ರಾಮ್ ನಲ್ಲಿ ಈ ಖುಷಿ ಹಂಚಿಕೊಂಡ ಪ್ರಿಯಾಂಕಾ, ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿರುವ ವಿಚಾರವನ್ನು ಹಂಚಿಕೊಳ್ಳಲು ಖುಷಿಯಾಗುತ್ತಿದೆ.

ಈ ಸಂದರ್ಭದಲ್ಲಿ ನಾನು ನನ್ನ ಕುಟುಂಬದ ಮೇಲೆ ಹೆಚ್ಚು ಗಮನವನ್ನು ಕೇಂದ್ರಕರಿಸಬೇಕಾಗಿದೆ. ಹಾಗಾಗಿ ನಮ್ಮ ವೈಯಕ್ತಿಕ ಸಮಯವನ್ನು ಗೌರವಿಸಬೇಕು ಎಂದು ಕೇಳಿಕೊಂಡಿದ್ದರು.

ಅಭಿನಂದನೆ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್. ನಿದ್ದೆಯಿಲ್ಲದ ರಾತ್ರಿಗಳು ಮತ್ತು ಸಾಟಿಯಿಲ್ಲದ ಸಂತೋಷ ಮತ್ತು ಪ್ರೀತಿಗಾಗಿ ಸಿದ್ಧರಾಗಿ. ಪುಟ್ಟ ಕಂದಮ್ಮಳಿಗೆ ಪ್ರೀತಿಯ ಶುಭ ಹಾರೈಕೆ ಎಂದು ಇನ್‌ಸ್ಟಾಗ್ರಾಮ್ ನಲ್ಲಿ ಹೇಳಿದ್ದಾರೆ.

ಇದನ್ನು ಓದಿ:

ಹೆಣ್ಣು ಮಗುವಿನ ತಾಯಿಯಾದ ನಟಿ ಪ್ರಿಯಾಂಕಾ ಚೋಪ್ರಾ

ಇದೀಗ ಸಂತೋಷ, ಸಂಭ್ರಮದಲ್ಲಿರುವ ಪ್ರಿಯಾಂಕಾ ಮತ್ತು ನಿಕ್ ಜೋನಸ್ ದಂಪತಿಗೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇನ್‌ಸ್ಟಾಗ್ರಾಮ್ ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಿಯಾಂಕಾ ಅವರ ಸೋದರಸಂಬಂಧಿ ಮೀರಾ ಕೂಡ ಸಂತೋಷವನ್ನು ವ್ಯಕ್ತಪಡಿಸಿದ್ದು, ಪ್ರಿಯಾಂಕಾ ಯಾವಾಗಲೂ ಬಹಳಷ್ಟು ಮಕ್ಕಳೊಂದಿಗೆ ಇರಲು ಬಯಸುತ್ತಾಳೆ. ಹಾಗಾಗಿ, ಅವರ ಜೀವನದಲ್ಲಿ ಆರಂಭವಾದ ಈ ಹೊಸ ಅಧ್ಯಾಯ ಕಂಡು ತುಂಬಾ ಸಂತಸವಾಗಿದೆ. ಅವಳು ತನ್ನ ಹೆಣ್ಣು ಮಗುವಿಗೆ ಸೂಪರ್ ತಾಯಿಯಾಗಲಿದ್ದಾಳೆ. ಪ್ರಿಯಾಂಕಾ ತಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ. ಆದ್ದರಿಂದ, ತಾಯಿಯಾಗಿರುವುದು ಅವರ ಶಕ್ತಿಯುತ ಆತ್ಮದ ವಿಸ್ತರಣೆಯಾಗಿದೆ. ನಾವೆಲ್ಲರೂ ಅವಳ ಬಗ್ಗೆ ತುಂಬಾ ಹೆಮ್ಮೆಪಡುತ್ತೇವೆ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

GST:2022ರ ಮದ್ಯದ ಮೇಲಿನ ಜಿಎಸ್ಟಿ;

Thu Jan 27 , 2022
.2022GST ದರ ಬದಲಾಗುತ್ತದೆ; (1) 2022 ರಿಂದ ಹೊಸ HSN ಕೋಡ್‌ಗಳು 1ನೇ ಜನವರಿ 2022 ರಿಂದ ಜಾರಿಗೆ ಬರುವಂತೆ HSN ಕೋಡ್‌ಗಳನ್ನು HS-2022 ನೊಂದಿಗೆ ಜೋಡಿಸಲು CBIC ಯಿಂದ 28ನೇ ಡಿಸೆಂಬರ್ 2021 ರಂದು ಮೂರು ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ಕೇಂದ್ರ ತೆರಿಗೆ (ದರ) ಅಧಿಸೂಚನೆ ಸಂಖ್ಯೆ. 18/2021, ಕೇಂದ್ರ ತೆರಿಗೆ (ದರ) ಅಧಿಸೂಚನೆ ಸಂಖ್ಯೆ. 19/2021 ಮತ್ತು ಕೇಂದ್ರ ತೆರಿಗೆ (ದರ) ಅಧಿಸೂಚನೆ ಸಂಖ್ಯೆ. 20/2021 (2) ತಲೆಕೆಳಗಾದ […]

Advertisement

Wordpress Social Share Plugin powered by Ultimatelysocial