ಅರ್ಧಕ್ಕೆ ಕೆಟ್ಟು ನಿಂತ ಅಂಬುಲೆನ್ಸ್

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯನ್ನು ಕರೆದೊಯ್ಯಲು ಬಂದ ಅಂಬುಲೆನ್ಸ್ ಅರ್ಧದಲ್ಲೇ ಕೆಟ್ಟು ನಿಂತಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ದುಮ್ಮಿಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ದುಮ್ಮಿಕೊಪ್ಪಲು ಗ್ರಾಮಕ್ಕೆ ಬೆಳಗ್ಗೆ ೮ ಗಂಟೆಗೆ ಅಂಬುಲೆನ್ಸ್ ಬಂದಿದೆ. ಈ ವೇಳೆ ಅಂಬುಲೆನ್ಸ್ ಕೆಟ್ಟು ನಿಂತಿದ್ದು ಬದಲಿ ಅಂಬು¯ನ್ಸ್ಗೆ ಕರೆ ಮಾಡಿದ್ದಾರೆ. ಗಂಟೆಗಟ್ಟಲೆ ಕಾದರೂ ಕೂಡ ಬೇರೆ ಅಂಬುಲೆನ್ಸ್ ಬಂದಿಲ್ಲ. ಇದರಿಂದಾಗಿ ರೋಗಿ ಅಂಬು¯ನ್ಸ್ಗಾಗಿ ರಸ್ತೆ ಬದಿಯಲ್ಲೇ ಮಲಗಿಕೊಂಡು ಕಾದು ಕುಳಿತಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರು ಕೊರೊನಾ ಸಮಯದಲ್ಲಿ ಸರಿಯಾದ ಸೇವೆ ಒದಗಿಸದ ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಇತ್ತ ಬೆಂಗಳೂರಿನಲ್ಲಿ ಕೂಡ ಇಂತದ್ದೇ ಘಟನೆಯೊಂದು ನಡೆದಿದೆ. ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ತುಮಕೂರು ರಸ್ತೆಯ ಫ್ಲೈಓವರ್ ಬಳಿ ನಡೆದಿದೆ.. ಜ್ವರ ಇದ್ದಿದ್ದರಿಂದ ಯಾರೂ ರಕ್ಷಣೆ ಮಾಡಲು ಮುಂದಾಗಲಿಲ್ಲ. ಇತ್ತ ಮಾಹಿತಿ ಅರಿತು ಸ್ಥಳಕ್ಕಾಗಮಿಸಿದ ಪೀಣ್ಯ ಪೊಲೀಸರು ರೋಗಿಯನ್ನು ರಕ್ಷಿಸಲು ಹರಸಾಹಸಪಟ್ಟರು. ಸ್ವತಃ ಪೊಲೀಸರೇ ಕರೆ ಮಾಡಿದರೂ ಅಂಬುಲೆನ್ಸ್ ಬರಲಿಲ್ಲ. ಹೀಗಾಗಿ ಪೊಲೀಸರೇ ರೋಗಿಯನ್ನು ಕಾದ ಪ್ರಸಂಗ ನಡೆದಿದೆ.

Please follow and like us:

Leave a Reply

Your email address will not be published. Required fields are marked *

Next Post

 ರಾಜ್ಯದಲ್ಲಿ ಕರ್ಫ್ಯೂ ಜಾರಿ-ಸಚಿವ ಬಸವರಾಜ್ ಬೊಮ್ಮಾಯಿ

Mon Jun 29 , 2020
ಕೊರೊನಾ ಸೋಂಕು ಹರಡುವಿಕೆ ಹೆಚ್ಚಾಗುತ್ತಿರುವ ಹಿನ್ನಲೆ, ಇಂದಿನಿಂದ ರಾಜ್ಯದಲ್ಲಿ ರಾತ್ರಿ ೮ ರಿಂದ ಬೆಳಗ್ಗೆ ೫ ರವರೆಗೆ ರ‍್ಫ್ಯೂ ಜಾರಿಗೊಳಿಸಲಾಗುತ್ತಿದೆ. ಈ ಹಿಂದೆ ರಾತ್ರಿ ೯ರಿಂದ ಬೆಳಗ್ಗೆ ೭ರವರೆಗೆ ರ‍್ಫ್ಯೂ ವಿಧಿಸಲಾಗಿತ್ತು. ಆದರೆ ರ‍್ಫ್ಯೂ ನಡುವೆಯೂ ವಾಹನ ಸಂಚಾರ,ಅಂಗಡಿ ಮುಗಟ್ಟುಗಳು ತೆರೆದಿರುವುದು,ಜನರ ಓಡಾಟದ ಕಾರಣ ಅದು ಅಷ್ಟಾಗಿ ಪರಿಣಾಮಕಾರಿ ಆಗಲಿಲ್ಲ. ಕಳೆದ ಎರಡು ವಾರಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕೊರೊನಾ ಸೋಂಕು ವ್ಯಾಪಕವಾಗಿ ಹೆಚ್ಚಾಗುತ್ತಿರುವುದರಿಂದ ಇಂದಿನಿಂದ ಕಟ್ಟುನಿಟ್ಟಾಗಿ ರ‍್ಫ್ಯೂ […]

Advertisement

Wordpress Social Share Plugin powered by Ultimatelysocial