ಅಳಿಯನನ್ನೇ ಅಪಹರಣ ಮಾಡಿಸಿ ಆಸ್ಪತ್ರೆಗೆ ದಾಖಲಿಸಿ ಮಾನಸಿಕ ಅಸ್ವಸ್ಥ ಎಂಬುದಾಗಿ ಬಿಂಬಿಸಿದ ಅತ್ತೆ| ಕಾಂಗ್ರೆಸ್ ನಾಯಕಿ ದಿವ್ಯಪ್ರಭಾ ಹಾಗೂ ಅವರ ಕುಟುಂಬದ ಕೇಸ್

 

 

ಬೆಂಗಳೂರು: ಅಳಿಯನನ್ನೇ ಅಪಹರಣ ಮಾಡಿಸಿ ಆಸ್ಪತ್ರೆಗೆ ದಾಖಲಿಸಿ ಮಾನಸಿಕ ಅಸ್ವಸ್ಥ ಎಂಬುದಾಗಿ ಬಿಂಬಿಸಿದ ಆರೋಪದ ಮೇಲೆ ದಕ್ಷಿಣ ಕನ್ನಡದ ಕಾಂಗ್ರೆಸ್ ನಾಯಕಿ ದಿವ್ಯಪ್ರಭಾ ಹಾಗೂ ಅವರ ಕುಟುಂಬದ ಐವರ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿವ್ಯಪ್ರಭಾ ಅಳಿಯನಾಗಿರುವ ದಕ್ಷಿಣ ಕನ್ನಡ ಸುಳ್ಯದ ಬೆಳ್ಳಾರೆ ನಿವಾಸಿ ನವೀನ್‌ಎಂ.ಗೌಡ (32) ಕೊಟ್ಟ ದೂರಿನನ್ವಯ ಆರೋಪಿಗಳಾದ ದಿವ್ಯಪ್ರಭಾ, ಇವರ ಮಗಳು ಸ್ಪಂದನಾ, ಪರಶುರಾಮ್, ಸ್ಪರ್ಶಿತ, ಮಹದೇವ ಗೌಡ ಮತ್ತು ಖಾಸಗಿ ಆಸ್ಪತ್ರೆಯ ವೈದ್ಯರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರುದಾರ ನವೀನ್ ಎಂ.ಗೌಡ ಅವರ ಊರಿನ ಪಕ್ಕದ ಊರಾದ ದಿವ್ಯಪ್ರಭಾ ಪುತ್ರಿ ಸ್ಪಂದನಾ ಅವರನ್ನು 2019ರ ಫೆ.8ರಂದು ವಿವಾಹವಾಗಿದ್ದರು. 2022ರ ಅಕ್ಟೋಬರ್‌ನಿಂದ ನವೀನ್ ಮತ್ತು ಸ್ಪಂದನಾ ನಡುವೆ ನಡುವೆ ಸಾಂಸಾರಿಕ ಕಾರಣಗಳಿಗೆ ಮನಸ್ತಾಪ ಉಂಟಾಗಿತ್ತು. ಈ ಬಗ್ಗೆ ಎರಡೂ ಕುಟುಂಬಗಳ ನಡುವೆ ಹಲವು ಬಾರಿ ನ್ಯಾಯ ಪಂಚಾಯಿತಿ ನಡೆದಿತ್ತು. ಈ ನಡುವೆ ಸ್ಪಂದನಾಗೆ ಬೇರೆಯವರ ಜತೆಗೆ ಸಂಬಂಧ ಇದುದ್ದರಿಂದ ಜತೆಗೆ ಆಕೆ ಮೊಬೈಲ್​ಫೋನ್​ ಮೂಲಕ ನಡೆಸಿದ್ದ ಅಶ್ಲೀಲ ಚಾಟ್‌ಗಳು ಸಿಕ್ಕಿದ್ದರಿಂದ ಆಕೆಯನ್ನು ತಿರಸ್ಕರಿಸಿ ದೂರವಾಗಿದ್ದೆ ಎಂದು ದೂರಿನಲ್ಲಿ ನವೀನ್ ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಆರೋಪಿಗಳು ಒಳಸಂಚು ರೂಪಿಸಿ 2022ರ ಡಿ.19ರಂದು ಮನೆಗೆ ಬಂದು, ಬಲವಂತವಾಗಿ ನನ್ನ ಕೈ ಕಾಲು ಕಟ್ಟಿ ಹಾಕಿ ಆಯಂಬುಲೆನ್ಸ್‌ನಲ್ಲಿ ಜೆ.ಪಿ.ನಗರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಬಳಿಕ ಆ ಆಸ್ಪತ್ರೆ ವೈದ್ಯರ ಜತೆಗೆ ಒಳ ಒಪ್ಪಂದದ ಮಾತುಕತೆ ನಡೆಸಿ ನನ್ನನ್ನು ಮಾನಸಿಕ ಅಸ್ವಸ್ಥ ಎಂಬುದಾಗಿ ಬಿಂಬಿಸಿ ಅಕ್ರಮ ಬಂಧನದಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದರು. ಇದಕ್ಕೆ ಒಪ್ಪದಿದ್ದಾಗ ಆರೋಪಿಗಳು ಆಸ್ಪತ್ರೆಯಲ್ಲಿಯೇ ಕೈಗಳಿಂದ ಮುಖ ಹಾಗೂ ದೇಹದ ಇತರೆ ಕಡೆ ಹಲ್ಲೆ ಮಾಡಿ ಚಿಕಿತ್ಸೆಗೆ ಸಮ್ಮತಿ ನೀಡಿರುವುದಾಗಿ ಬಿಂಬಿಸಿದ್ದರು.

ಬಳಿಕ ಕೆಲವು ಕಾಗದ ಪತ್ರಗಳಿಗೆ ಬಲವಂತವಾಗಿ ಸಹಿ ಹಾಕುವಂತೆ ಒತ್ತಾಯ ಮಾಡುತ್ತಿದ್ದರು. ಯಾವುದೇ ಕಾಗದ ಪತ್ರಗಳಿಗೆ ಸಹಿ ಮಾಡದಿರುವ ಕಾರಣ ಆರೋಪಿಗಳೇ ಕೆಲ ಕಾಗದ ಪತ್ರಗಳನ್ನು ಸೃಷ್ಟಿ ಮಾಡಿ, ಆ ಪತ್ರಗಳಿಗೆ ನನ್ನ ನಕಲಿ ಸಹಿ ದಸ್ತಾವೇಜು ಸೃಷ್ಟಿಸಿಕೊಂಡಿರುತ್ತಾರೆ. ಅಪಹರಣದ ಸಂಬಂಧ ದಾಖಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ಕುರಿತು ಹೈಕೋರ್ಟ್ ನೀಡಿದ ನಿರ್ದೇಶನದ ಹಿನ್ನೆಲೆಯಲ್ಲಿ 2022ರ ಡಿ.22ರಂದು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದೇನೆ. ಹೀಗಾಗಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ನವೀನ್ ಉಲ್ಲೇಖಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಂತಿಮ 2 ಟೆಸ್ಟ್‌ಗಳಿಗೆ ಪ್ರಕಟಿಸಿದ ತಂಡದಲ್ಲಿ ಕೆಎಲ್ ರಾಹುಲ್‌ಗೆ ಶಾಕ್: ಕೆಎಲ್ ರಾಹುಲ್ ಹೆಸರಿನ ಮುಂದೆ ಉಪನಾಯಕ ಎಂದು ಉಲ್ಲೇಖಿಸಿಲ್ಲ.

Mon Feb 20 , 2023
  ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಎರಡು ತಂಡಗಳಿಗೆ ಹಾಗೂ ಏಕದಿನ ಸರಣಿಗೆ ಟೀಮ್ ಇಂಡಿಯಾದ ಬಳಗವನ್ನು ಬಿಸಿಸಿಐ ಇಂದು ಪ್ರಕಟಿಸಿದೆ. ಬಿಸಿಸಿಐನ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಈ ತಂಡಗಳನ್ನು ಘೋಷಣೆ ಮಾಡಲಾಗಿದೆ. ಆದರೆ ಈ ತಂಡದಲ್ಲಿ ಭಾರತದ ಅನುಭವಿ ಆಟಗಾರ ಕೆಎಲ್ ರಾಹುಲ್‌ಗೆ ಸದ್ದಿಲ್ಲದೆ ಆಘಾತವೊಂದನ್ನು ನೀಡಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಪ್ರಕಟಿಸಿದ್ದ ತಂಡದಲ್ಲಿ ಕೆಎಲ್ ರಾಹುಲ್ […]

Advertisement

Wordpress Social Share Plugin powered by Ultimatelysocial