ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್ ರಾಜ್ಯಪಾಲರಾಗಿ ಕಾಣಿಸಿಕೊಂಡಿದ್ದಾರೆ.

‘ಧ್ರುವ 369’ ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್ ರಾಜ್ಯಪಾಲರಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಕ್ಲೈಮಾಕ್ಸ್ ಚಿತ್ರೀಕರಣವು ನಂದಿಬೆಟ್ಟ ಬಳಿಯ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಿತು.

ನಿರ್ದೇಶಕ ಶಂಕರ್‌ನಾಗ್ ಪ್ರಕಾರ, ‘ರಾಘವೇಂದ್ರ ರಾಜ್‌ಕುಮಾರ್‌ ಅವರು ಕಥೆಯ ಪ್ರಾರಂಭ, ಮಧ್ಯಂತರ ಹಾಗೂ ಕ್ಲೈಮ್ಯಾಕ್ಸ್‌ನಲ್ಲಿ ಇರುತ್ತಾರೆ.

ಪುರಾಣ ಕಾಲದ ಧ್ರುವ ನಕ್ಷತ್ರ ಕಥೆಗೂ ಈಗಿನ ಖಗೋಳಶಾಸ್ತ್ರಕ್ಕೂ ಸಂಬಂಧವಿರುವ ಕಥೆಯಿದೆ. ಅಲ್ಲದೆ ಕುತೂಹಲಕಾರಿ ಅಂಶ ಅಡಗಿದೆ. ಮುಖ್ಯ ಪಾತ್ರದಲ್ಲಿ ರಮೇಶ್‌ ಭಟ್, ಅತೀಶ್‌ ಶೆಟ್ಟಿ, ಚಂದನಾ, ನಮಿತಾ, ಸಂದೀಪ್‌ ಮಲಾನಿ, ಅರುಣ್‌ ಸಾಗರ್, ಮೇಘಾ ಗೌಡ, ಭಾಸ್ಕರ್‌ ಮಣಿಪಾಲ ಹಾಗೂ ಮಂಗಳೂರಿನ ರಂಗಭೂಮಿ ಕಲಾವಿದರಿಗೆ ಅವಕಾಶ ಮಾಡಿಕೊಡಲಾಗಿದೆ. ನಾನು ಸಹ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದೇನೆ’ ಎಂದು ಮಾಹಿತಿ ನೀಡಿದರು.

ಶ್ರೀಕೃಷ್ಣ ಕಾಂತಿಲ ಅವರು ಅಚಿಂತ್ಯ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಸತೀಶ್‌ಬಾಬು ಸಂಗೀತ ನಿರ್ದೇಶನ, ಮಹಾಬಲ ಛಾಯಾಗ್ರಹಣ, ಸುಬ್ರಹ್ಮಣ್ಯ ಐರೋಡಿ ಸಂಕಲನ ಚಿತ್ರಕ್ಕಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಧಾರವಾಡ ಜಿಲ್ಲೆಯಲ್ಲಿ ಜೋರಾದ ಬಣಗಳ ಮತ್ತು ಜಾತಿ ರಾಜಕಾರಣ.

Fri Jan 20 , 2023
ನವಲಗುಂದ ಕ್ಷೇತ್ರದಲ್ಲಿ ಮೂಲ ಕಾಂಗ್ರೆಸ್ಸಿಗರಿಗೆ ಟಿಕೆಟ್ ನೀಡಿ. ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ, ಟ್ರ್ಯಾಕ್ಟರ್ ಮೂಲಕ ಆಕಾಂಕ್ಷಿಗಳ ಒಗ್ಗಟ್ಟಿನ ಪ್ರಚಾರ ನಡೆಸಿದ ಮೂಲ ಕಾಂಗ್ರೆಸಿಗರು. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ರಂಗು ಪಡೆಯುತ್ತಿದೆ. ಅದರಂತೆ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್‌ ಆಕಾಂಕ್ಷಿಗಳ ಕಸರತ್ತು ಜೋರಾಗಿದೆ. ಈ ಮಧ್ಯೆ ನವಲಗುಂದದಲ್ಲಿ ಮೂಲ ಕಾಂಗ್ರೆಸ್ ಹಾಗೂ ಹೊರಗಿನಿಂದ ಬಂದವರು, ಈಗ ಬಂದವರು ಎಂಬ ಬಣ ರಾಜಕೀಯ ಹುಟ್ಟಿಕೊಂಡಿದೆ. ಇತ್ತೀಚೆಗೆ ಎಪಿಎಂಸಿ ಮಾಜಿ ಸದಸ್ಯ ರಾಜಶೇಖರ್ […]

Advertisement

Wordpress Social Share Plugin powered by Ultimatelysocial