ಆರೋಗ್ಯವಂತ ಮಹಿಳೆಯರ ತೂಕ ಎಷ್ಟಿರಬೇಕು? ಅವರ ಜೀವನಶೈಲಿ ಹೇಗಿರಬೇಕು?

ಪ್ರತೀ ವರ್ಷ ಜನವರಿ 22 ನ್ನು ಮಹಿಳೆಯರ ಆರೋಗ್ಯಕರ ತೂಕದ ದಿನ (Women’s Healthy Weight Day) ಎಂದು ಆಚರಿಸಲಾಗುತ್ತದೆ. ಮಹಿಳೆಯರು ತಮ್ಮ ದಿನ ನಿತ್ಯದ ಅನಾರೋಗ್ಯಕರ ಅಭ್ಯಾಸಗಳಿಂದ (daily unhealthy habits) ಹೊರಬರಲು ಮತ್ತು ನಿರುತ್ಸಾಹದ ಗೀಳು (depression obsessions) ಹೊಂದಿರುವ, ಜವಾಬ್ದಾರಿಯಲ್ಲೇ ದಿನಗಳೆಯು ಮಹಿಳೆಯರನ್ನು ತಮ್ಮ ಆರೋಗ್ಯದತ್ತ ಕಾಳಜಿ ವಹಿಸುವಂತೆ ಮಾಡಲು ಹಾಗೂ ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಮತ್ತು ತೂಕ ನಿರ್ವಹಣೆಗೆ ಉತ್ತೇಜನ ನೀಡಲಾಗುತ್ತದೆ.

ಮಹಿಳೆಯರ ಆರೋಗ್ಯಕರ ತೂಕದ ದಿನದಂದು ಅವರಿಗೆ ಉತ್ತಮ ಮತ್ತು ಆರೋಗ್ಯಕರ ಜೀವನಶೈಲಿ ಫಾಲೋ ಮಾಡುವ ಅಗತ್ಯತೆಯ ಬಗ್ಗೆ ತಿಳಿಸಲಾಗುತ್ತದೆ. ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಸಾಕಷ್ಟು ಸೂಕ್ತವಾದ ಪೋಷಣೆ ಮಾಡಿಕೊಳ್ಳಬೇಕು ಎನ್ನುತ್ತಾರೆ ಬೆಂಗಳೂರಿನ  ಆಸ್ಟರ್ ಸಿಎಂಐ ಆಸ್ಪತ್ರೆಯ ಕ್ಲಿನಿಕಲ್ ನ್ಯೂಟ್ರಿಷನ್ ಡಯೆಟಿಕ್ಸ್ ಮುಖ್ಯಸ್ಥರು ಹಾಗೂ ಲೇಖಕಿಯೂ ಆಗಿರುವ ಎಡ್ವಿನಾ ರಾಜ್.

ಮಹಿಳೆಯರ ಆರೋಗ್ಯಕರ ತೂಕದ ದಿನದ ಮಹತ್ವ

ಎಲ್ಲಾ ಗಾತ್ರದ ಮಹಿಳೆಯರು ತಮ್ಮ ದೇಹದ ಪ್ರಕಾರ ಅಳವಡಿಸಿಕೊಳ್ಳಲು ಅಧಿಕಾರ ನೀಡಲಾಗಿದೆ. ಮಹಿಳೆಯರ ಆರೋಗ್ಯಕರ ತೂಕದ ದಿನವು ಮುಖ್ಯವಾಗಿ ಆರೋಗ್ಯಕರ ಆಹಾರ ಪದ್ಧತಿ, ಆರೋಗ್ಯಕರ ಜೀವನಶೈಲಿ ಮತ್ತು ಜೀವನಕ್ರಮಕ್ಕೆ ಉತ್ತೇಜಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಸೆಲೆಬ್ರಿಟಿಗಳು, ನಟ ನಟಿಯರಂತೆ ಸುಂದರ ದೇಹ ಹೊಂದುವ ಪ್ರವೃತ್ತಿಗೆ ತಮ್ಮನ್ನು ತಾವು ಒಡ್ಡಿಕೊಳ್ಳುತ್ತಿದ್ದಾರೆ. ಆದರೆ ತಮ್ಮಿಚ್ಛೆಯ ಆಹಾರ, ಅನಾರೋಗ್ಯಕರ ಆಹಾರ, ಸ್ವಯಂ-ಶೈಲಿಯ ಜೀವನಕ್ರಮ ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ ಅಂತಾರೆ ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಯ ಕ್ಲಿನಿಕಲ್ ನ್ಯೂಟ್ರಿಷನ್ ಡಯೆಟಿಕ್ಸ್ ಮುಖ್ಯಸ್ಥರು ಹಾಗೂ ಲೇಖಕಿಯೂ ಆಗಿರುವ ಎಡ್ವಿನಾ ರಾಜ್.

ತೆಳ್ಳಗಿರುವುದೇ ಗುರಿಯಾಗದಿರಲಿ

ತೆಳ್ಳಗಾಗಬೇಕು, ಸಣ್ಣ ಆಗುವುದೇ ಏಕೈಕ ಗುರಿಯಾಗರಬಾರದು. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಮಹಿಳೆಯರು ತೂಕ ನಷ್ಟ ಹಾಗೂ ತೆಳ್ಳಗಾಗಬೇಕೆಂಬುದನ್ನೇ ಫಿಟ್ನೆಸ್ ಎಂದುಕೊಂಡಿದ್ದಾರೆ. ಹಾಗಾಗಿ ಮಹಿಳೆಯರಲ್ಲಿ ‘ಬಾಡಿ ಇಮೇಜ್’ ಸಮಸ್ಯೆಗಳು ಹೆಚ್ಚಿವೆ. ಹೆಚ್ಚಿನ ದಂಪತಿಗಳಲ್ಲಿ ಬಂಜೆತನದ ಸಮಸ್ಯೆ ಹೆಚ್ಚಿದೆ.

ಇದರಿಂದಾಗಿ ಹಾಗೂ ತಮ್ಮ ದೇಹದ ಆಕಾರದಿಂದಾಗಿ ಹೆಚ್ಚಿನ ಮಹಿಳೆಯರು ಅಪಹಾಸ್ಯಕ್ಕೊಳಗಾಗುತ್ತಾರೆ. ಇದು ಅವರನ್ನು ಮಾನಸಿಕವಾಗಿ ಘಾಸಿಗೊಳಿಸುತ್ತದೆ. ದೇಹದ ತೂಕದಿಂದಾಗಿ ಖಿನ್ನತೆಗೆ ಒಳಗಾಗುತ್ತಾರೆ. ಹೀಗಾಗಿ ಹೆಚ್ಚಿನ ಮಹಿಳೆಯರು ತೂಕ ನಷ್ಟದ ತ್ವರಿತ ಫಲಿತಾಂಶಕ್ಕಾಗಿ ಸುಂದರವಾಗಿ ಕಾಣಲು ಯತ್ನಿಸುತ್ತಾರೆ. ಆದರೆ ತೂಕ ನಷ್ಟವು ಆರೋಗ್ಯಕರವಾಗಿರಲು ಸಹಾಯ ಮಾಡುವುದಿಲ್ಲ.

ಕೆಲವರು ಹೆಚ್ಚಿನ ತೂಕ ಹೊಂದಿರುತ್ತಾರೆ. ಆದರೆ ಆರೋಗ್ಯವಾಗಿರುತ್ತಾರೆ. ತೂಕವು ಕೇವಲ ಒಂದು ಸಂಖ್ಯೆಯಷ್ಟೇ. ದೇಹದ ಸಂಯೋಜನೆ ಮುಖ್ಯ. ಸ್ನಾಯು, ದೇಹದ ಕೊಬ್ಬು ಮತ್ತು ಚಯಾಪಚಯ ಕ್ರಿಯೆಯ ಪ್ರಕಾರ ಆರೋಗ್ಯವಾಗಿರಲು ಮುಖ್ಯವಾಗುತ್ತದೆ. ಹಾಗಾಗಿ ಕೇವಲ ತೂಕ ನಷ್ಟದ ಹಿಂದೆ ಬೀಳುವ ಮೊದಲು ನಿಮ್ಮ ಸ್ನಾಯು, ಕೊಬ್ಬು, ಚಯಾಪಚಯ ಕ್ರಿಯೆಯ ಬಗ್ಗೆ ತಿಳಿಯಿರಿ. ನಿಮ್ಮ ದಿನವನ್ನು ಆರೋಗ್ಯಕರ ವಿಧಾನದೊಂದಿಗೆ ಶುರು ಮಾಡಿ.

ಬೆಚ್ಚಗಿನ ಗ್ಲಾಸ್ ನೀರು ಕುಡಿಯುವ ಮುಲಕ ದಿನವನ್ನು ಆರಂಭಿಸಿ ದಿನವನ್ನು ಬೆಚ್ಚಗಿನ ಗ್ಲಾಸ್ ನೀರು ಕುಡಿಯುವ ಮುಲಕ ಆರಂಭಿಸಿ. ದಿನವಿಡೀ ಹೈಡ್ರೀಕರಿಸಿದ ಸ್ಥಿತಿಯಲ್ಲಿರಿ. ಹಣ್ಣು, ಜ್ಯೂಸ್ ಸೇವಿಸಿ. ಚಿಯಾ ಬೀಜಗಳನ್ನು ನೆನೆಸಿಟ್ಟು ಸೇವಿಸಿ. ಉತ್ತಮ ಆರೋಗ್ಯ ಪ್ರಯೋಜನ ಪಡೆಯಿರಿ.

ಬೆಳಗಿನ ಉಪಹಾರವನ್ನು ಎಂದಿಗೂ ಸ್ಕಿಪ್ ಮಾಡಬೇಡಿ ಬೆಳಗಿನ ಉಪಹಾರ ಸ್ಕಿಪ್ ಮಾಡಿದರೆ ತೂಕ ಹೆಚ್ಚಾಗುತ್ತದೆ. ಸ್ಥೂಲಕಾಯ ಹೆಚ್ಚುತ್ತದೆ. ಹೃದ್ರೋಗ ಮತ್ತು ಸಾವಿನ ಅಪಾಯ ಹೆಚ್ಚಿಸುತ್ತದೆ. ಆರೋಗ್ಯಕರ ಉಪಹಾರವು ಇಡೀ ದಿನ ನಿಮ್ಮನ್ನು ಶಕ್ತಿಯುತವಾಗಿರಿಸುತ್ತದೆ. ಮತ್ತು ನಿಮ್ಮ ದೈನಂದಿನ ಪೋಷಕಾಂಶಗಳ ಅಗತ್ಯತೆ ಪೂರೈಸುತ್ತದೆ. ಬೆಳಗಿನ ಉಪಾಹಾರವು ದಿನದ ಪ್ರಮುಖ ಊಟ

ಹಾಗಾಗಿ ಬೆಳಗಿನ ತಿಂಡಿಯಲ್ಲಿ ಮೂಳೆಯ ಆರೋಗ್ಯ ಕಾಪಾಡಿಕೊಳ್ಳಲು ಕ್ಯಾಲ್ಸಿಯಂನ ಸಾಕಷ್ಟು ಸೇವನೆ ಮಾಡು. ವಯಸ್ಸಾದಂತೆ ಈಸ್ಟ್ರೊಜೆನ್ ಮಟ್ಟ ಇಳಿಯುತ್ತದೆ. ಮೂಳೆಯ ಆರೋಗ್ಯ ಕಾಪಾಡಲು ಇದು ಬೇಕು. ಬಲವಾದ ಮೂಳೆಗಳಿಗಾಗಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಪಡೆಯಿರಿ. ಮೊಸರು, ಬಾದಾಮಿ ಹಾಲು, ಸೋಯಾ ಮತ್ತು ಅದರ ಉತ್ಪನ್ನಗಳು, ಡೈರಿ, ಹಸಿರು ಸೊಪ್ಪು, ತರಕಾರಿಗಳು, ಮೀನು, ಏಪ್ರಿಕಾಟ್ಗಳು, ಎಳ್ಳು ಬೀಜ ಸೇವಿಸಿ.

ಮಹಿಳೆಯರು ತಮ್ಮ ಸಂತಾನೋತ್ಪತ್ತಿಗೆ ಈ ಪೋಷಕಾಂಶ ಬೇಕು ಕಬ್ಬಿಣ, ಮೆಗ್ನೀಸಿಯಮ್, ಫೋಲಿಕ್ ಆಮ್ಲ ಮತ್ತು ವಿಟಮಿನ್ ಬಿ 12 ಪೋಷಕಾಂಶ ಸೇವಿಸಿ. ಸಮತೋಲಿತ ಊಟ ಮಾಡಿ. ದೇಹವನ್ನು ಪ್ರೋಟೀನ್, ಫೈಬರ್, ಕಾರ್ಬೋಹೈಡ್ರೇಟ್‌ಗಳು ಮತ್ತು ಒದಗಿಸುವ ಪೋಷಕಾಂಶ-ಭರಿತ, ಸಮತೋಲಿತ ಆಹಾರ. ಕೊಬ್ಬು ಸೇವಿಸಿ. ತರಕಾರಿಗಳು, ಹಣ್ಣುಗಳು ಮತ್ತು ಧಾನ್ಯ ಸೇವಿಸಿ. ಜಂಕ್, ಸಂಸ್ಕರಿಸಿದ ಆಹಾರಗಳು ಮತ್ತು ಸಕ್ಕರೆ ಪದಾರ್ಥ ಸೇವನೆ ತಪ್ಪಿಸಿ. ಇದು ಹೃದ್ರೋಗ ಮತ್ತು ಅಪಾಯವನ್ನು ಹೆಚ್ಚಿಸುತ್ತವೆ.

ಧೂಮಪಾನವನ್ನು ತಪ್ಪಿಸಿ ಮತ್ತು ನಿಮ್ಮ ಆಲ್ಕೋಹಾಲ್ ಸೇವನೆ ಕಡಿಮೆ ಮಾಡಿ ಧೂಮಪಾನ ಮತ್ತು ಆಲ್ಕೋಹಾಲ್ ಸೇವನೆಯು ಹಾರ್ಮೋನುಗಳನ್ನು ಅಡ್ಡಿ ಪಡಿಸಬಹುದು. ಆರೋಗ್ಯ ಮತ್ತು ದೇಹದ ಸಂಯೋಜನೆ ನಿರ್ವಹಿಸಲು ಕಷ್ಟವಾಗುತ್ತದೆ.

ವರ್ಕ್ ಔಟ್ ಮಾಡಿ ಒಟ್ಟಾರೆ ಆರೋಗ್ಯಕ್ಕಾಗಿ ವ್ಯಾಯಾಮ ಮಾಡಿ. ವಾಕಿಂಗ್, ಜಾಗಿಂಗ್, ಓಟ, ಜಿಮ್‌ ವಾರದಲ್ಲಿ ಐದು ದಿನಗಳವರೆಗೆ ದಿನಕ್ಕೆ 30 ನಿಮಿಷ ಯೋಗ ಮಾಡಿ. ದೈಹಿಕ ವ್ಯಾಯಾಮ ಮಾಡಿ. ತೂಕ ಕಳೆದುಕೊಳ್ಳಲು ದೈಹಿಕ ಮತ್ತು ಮಾನಸಿಕ ಯೋಗಕ್ಷೇಮ ಹೆಚ್ಚಿಸಿ.

ನಿಯಮಿತ ಆರೋಗ್ಯ ತಪಾಸಣೆಗೆ ಒಳಗಾಗಿ  ಹೆರಿಗೆ, ಋತುಬಂಧದಲ್ಲಿ ಮಹಿಳೆಯ ದೇಹವು ಅನೇಕ ಹಾರ್ಮೋನ್ ಬದಲಾವಣೆಗಳಿಗೆ ಒಳಗಾಗುತ್ತದೆ. 35 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಆರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚಲು ನಿಯಮಿತ ಸ್ಕ್ರೀನಿಂಗ್ ಪರೀಕ್ಷೆಗಳಿಗೆ ಒಳಗಾಗಬೇಕು. ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಆರೋಗ್ಯಕರ ತೂಕ, ಆರೋಗ್ಯಕರ ಜೀವನಶೈಲಿ ಫಾಲೋ ಮಾಡಿ, ಆರೋಗ್ಯವಾಗಿರಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕುಂಭ ರಾಶಿ ಭವಿಷ್ಯ.

Mon Feb 27 , 2023
    ನಿಮ್ಮ ವೈಯಕ್ತಿಕ ಸಮಸ್ಯೆಗಳು ಮಾನಸಿಕ ಸಂತೋಷವನ್ನು ಹಾಳು ಮಾಡಬಹುದು. ಆದರೆ ಒತ್ತಡವನ್ನು ನಿಭಾಯಿಸಲು ಆಸಕ್ತಿದಾಯಕವಾದದ್ದನ್ನೇನಾದರೂ ಓದುವ ಮೂಲಕ ಸ್ವಲ್ಪ ಮಾನಸಿಕ ವ್ಯಾಯಾಮ ಮಾಡಿಕೊಳ್ಳಿ. ದೀರ್ಘ ಕಾಲ ಬಾಕಿಯಿದ್ದ ಬಾಕಿಗಳು ಕೊನೆಗೂ ದೊರಕುತ್ತವೆ. ಕೆಲಸದ ಒತ್ತಡ ನಿಮ್ಮ ಮನಸ್ಸನ್ನು ಆವರಿಸುತ್ತದೆ ಹಾಗೂ ಇದು ಕುಟುಂಬ ಮತ್ತು ಸ್ನೇಹಿತರಿಗೆ ಯಾವುದೇ ಸಮಯವಿಲ್ಲದಂತೆ ಮಾಡುತ್ತದೆ. ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವ ಮೂಲಕ ಮಾತ್ರ ನೀವು ನಿಮ್ಮ ಪತ್ನಿಗೆ ಭಾವನಾತ್ಮಕ ಬೆಂಬಲ ನೀಡಬಹುದು. ನಿಮ್ಮ ಕೆಲಸದ […]

Advertisement

Wordpress Social Share Plugin powered by Ultimatelysocial