‘ಆರೋಗ್ಯ ಇಲಾಖೆ’ಯ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

 

ಳ್ಳಾರಿ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸರ್ವೇಕ್ಷಣಾ ಘಟಕದಿಂದ ಸಿ.ಪಿ.ಹೆಚ್.ಸಿ-ಯು.ಹೆಚ್.ಸಿ ಮತ್ತು ಎನ್.ಪಿ.ಪಿ.ಸಿ ಕಾರ್ಯಕ್ರಮದಡಿ ಬಳ್ಳಾರಿ ಜಿಲ್ಲೆಯಲ್ಲ್ಲಿ ಕಾರ್ಯನಿರ್ವಹಿಸಲು ವಿವಿಧ ಹುದ್ದೆಗಳಿಗೆ ಗುತ್ತಿಗೆ ಅಧಾರದ ಮೇಲೆ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅಹ್ವಾನಿಸಲಾಗಿದೆ.

ಹುದ್ದೆಗಳ ವಿವರ; ಜಿಲ್ಲಾ ಹೆಲ್ತ್ ಅಂಡ್ ವೆಲ್ನೆಸ್ ಸೆಂಟರ್ ಕೋ-ಆರ್ಡಿನೇಟರ್ ಹುದ್ದೆ 1, ಫೀಜಿಷಿಯನ್-2, ಸ್ಟಾಫ್ ನರ್ಸ್-8 ಇದ್ದು, ಹುದ್ದೆಗಳಿಗನುಗುಣವಾಗಿ ಅನುಭವ ಹೊಂದಿರಬೇಕು.ಈ ಹುದ್ದೆಯು ಒಂದು ವರ್ಷ ಅವಧಿಗೆ ಅಥವಾ ಈ ಕಚೇರಿಯ ಮುಂದಿನ ಆದೇಶದವರಿಗೆ ಸೀಮಿತವಿರುತ್ತವೆ. ಹಾಗೂ ಸದರಿ ಹುದ್ದೆಯು ಯಾವುದೇ ಕಾರಣಕ್ಕೂ ಸರ್ಕಾರಿ ಸೇವೆಯಲ್ಲಿ ಸಕ್ರಮಗೊಳಿಸಲಾಗುವುದಿಲ್ಲ ಮತ್ತು ಅಭ್ಯರ್ಥಿಗಳ ಆಯ್ಕೆಯು ಮೀಸಲಾತಿ ಹಾಗೂ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಹುದ್ದೆಯ ಕುರಿತು ತಮ್ಮ ಬಯೋಡಾಟಾದಲ್ಲಿ ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರವನ್ನು ಲಗತ್ತಿಸಿ ಅಗತ್ಯ ವಿದ್ಯಾರ್ಹತೆ, ಅನುಭವ, ಜಾತಿ ಪ್ರಮಾಣ ಪತ್ರ, ಮತ್ತು ಇತರೆ ದೃಢಿಕೃತ ನಕಲು ದಾಖಲಾತಿಗಳಪ್ರತಿಗಳ ಒಂದು ಸೆಟ್ ಹಾಗೂ ತಾವು ಸಲ್ಲಿಸುವ ದಾಖಲಾತಿಗಳ ಮೂಲ ದಾಖಲಾತಿಗಳನ್ನು ಸಲ್ಲಿಸಬೇಕು.ನೇರ ಸಂದರ್ಶನವು ಮಾರ್ಚ್ 3 ರಂದು ನಗರದ ಅನಂತಪುರ ರಸ್ತೆಯ ಜಿಲ್ಲಾ ಆಸ್ಪತ್ರೆ ಆವರಣದ ಜಿಲ್ಲಾ ಸರ್ವೇಕ್ಷಣಾ ಘಟಕದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೇಲ್ dsubellary@gmail.com ಅಥವಾ ದೂ.08392- 274031ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಸರ್ವೇಕ್ಷಣಾ ಘಟಕದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ ಅವರು ತಿಳಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜೆಡಿಎಸ್‌ ಉತ್ಸಾಹಕ್ಕೆ ಭಂಗ ತಂದ ಅಂತಃಕಲಹ: ಟಿಕೆಟ್‌ ಗೊಂದಲ, ಭವಾನಿ ರೇವಣ್ಣ v/s ಕುಮಾರಸ್ವಾಮಿ ಜಟಾಪಟಿ.

Mon Feb 27 , 2023
  ‘ಪಂಚರತ್ನ’ ಕನಸುಗಳನ್ನು ಬಿತ್ತಿ ಪ್ರಾದೇಶಿಕ ಅಸ್ಮಿತೆ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಸಡ್ಡು ಹೊಡೆಯುವ ಉತ್ಸಾಹದಲ್ಲಿದ್ದ ಜೆಡಿಎಸ್‌ಗೆ ಅಂತಃಕಲಹದ ತಲೆನೋವು ತೀವ್ರಗೊಂಡಿದೆ. ಹಾಸನ ಕ್ಷೇತ್ರದ ಟಿಕೆಟ್‌ ವಿಚಾರದಲ್ಲಿ ದೇವೇಗೌಡರ ಕುಟುಂಬದೊಳಗಿನ ಮುಸುಕಿನ ಗುದ್ದಾಟಕ್ಕೆ ಮದ್ದು ಸಿಗದಿರುವುದು ಪಕ್ಷದ ಕಾರ್ಯಕರ್ತರ ಉತ್ಸಾಹಕ್ಕೆ ಭಂಗ ತಂದಿದೆ.ಹಾಸನ ಕ್ಷೇತ್ರವನ್ನು ‘ಕಮಲ’ದ ಹಿಡಿತದಿಂದ ಮರಳಿ ಪಡೆಯುವ ಉತ್ಸಾಹದೊಂದಿಗೆ ಅಖಾಡ ಪ್ರವೇಶಿಸಿರುವ ಭವಾನಿ ರೇವಣ್ಣ ಅವರು ಹಿಂದೆ ಸರಿಯುವ ಸೂಚನೆ ಗೋಚರಿಸುತ್ತಿಲ್ಲ. ಕ್ಷೇತ್ರದ ಹಿರಿಯ ಮುಖಂಡರು ಮತ್ತು […]

Advertisement

Wordpress Social Share Plugin powered by Ultimatelysocial