ಅವಧಿ ಮುನ್ನವೇ ಮಾನ್ಸೂನ್​ ಪ್ರವೇಶ, ಈ ದಿನಾಂಕದಿಂದ ಭಾರೀ ಮಳೆಯಾಗಲಿದೆ:

 

ನವದೆಹಲಿ: ಈ ವರ್ಷ ಮಾನ್ಸೂನ್​ ಅವಧಿಗೂ ಮುನ್ನವೇ ಪ್ರವೇಶಿಸಲಿದ್ದು, ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಏಪ್ರಿಲ್​ ತಿಂಗಳಲ್ಲಿ ದಾಖಲೆಯ ತಾಪಮಾನದ ನಡುವೆ ಇದೀಗ ಮಾನ್ಸೂನ್​ ಮಳೆಯಿಂದಾಗಿ ತಾಪಮಾನ ಇಳಿಕೆಯಾಗಲಿದ್ದು, ದೇಶದ ಎಲ್ಲಾ ಭಾಗಗಳಲ್ಲೂ ಈ ಬಾರಿ ಮಾನ್ಸೂನ್​ ಮಳೆ ಬೇಗವೇ ಬರಲಿದೆ.

ಕೆಲವೆಡೆ ಅಕಾಲಿಕ ಮಳೆ ಸುರಿಯತ್ತಿದ್ದು, ಇದರಿಂದ ವಾತಾವರಣವನ್ನು ತಂಪು ಮಾಡಿದೆಯಾದರೂ, ಮೇ ತಿಂಗಳಾರ್ಧದಲ್ಲಿ ಸುರಿಯುವ ಮಳೆ ಭಾರೀ ಅನುಕೂಲಕರವಾಗಲಿದೆ. ಅಸನಿ ಚಂಡಮಾರುತದಿಂದಾಗಿ ಪೂರ್ವ ಕರಾವಳಿಯಲ್ಲಿ ಈಗಾಗಲೇ ಮಳೆಯಾಗುತ್ತಿದ್ದು, ಈ ನಡುವೆ ಮಾನ್ಸೂನ್​ ಪ್ರವೇಶದಿಂದ ವಾರಗಳವರೆಗೆ ನಿರಂತರ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಂಡಮಾನ್​ ಮತ್ತು ನಿಕೋಬಾರ್​ ದ್ವೀಪಗಳ ಮೂಲಕ ಈ ಬಾರಿ ಮಾನ್ಸೂನ್​ ಮಳೆ ಬೇಗ ಬರಲಿದ್ದು, ಮೇ 15 ರಂದು ಮೊದಲ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.

ಮಾನ್ಸೂನ್​ ಮಳೆಯಿಂದಾಗಿ ದೇಶಾದ್ಯಂತ ತಾಪಮಾನ ಕಡಿಮೆಯಾಗಲಿದ್ದು, ದೇಶದ ವಿವಿಧ ಭಾಗಗಳಲ್ಲಿ ಮೇ 14 ರಿಂದ 16 ರಂದು ಭಾರೀ ಮಳೆಯಾಗಲಿದೆ. ಇನ್ನು ಈ ವರ್ಷ ಮಾನ್ಸೂನ್​ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಾಬ್ರಿ ಕೈತಪ್ಪಿತು, ಮತ್ತೊಂದು ಮಸೀದಿ ಕಳೆದುಕೊಳ್ಳಲ್ಲ:

Fri May 13 , 2022
  ಲಕ್ನೋ, ಮೇ 13: ವಾರಣಾಸಿಯ ಕಾಶಿ ವಿಶ್ವನಾಥ ಮಂದಿರ ಪಕ್ಕದ ಜ್ಞಾನವಾಪಿ ಮಸೀದಿಯಲ್ಲಿ ಸರ್ವೇಕ್ಷಣೆ ನಡೆಸಲು ನ್ಯಾಯಾಲಯ ನೀಡಿದ ಅದೇಶದ ಬಗ್ಗೆ ಮುಸ್ಲಿಮ್ ಮುಖಂಡ ಅಸಾದುದ್ದೀನ್ ಒವೈಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಾರಣಾಸಿಯ ಸ್ಥಳೀಯ ಕೋರ್ಟ್ ನೀಡಿದ ಆದೇಶ 1991ರ ಪೂಜಾ ಮಂದಿರ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಹಾಗೆಯೇ, ಬಾಬ್ರಿ ಮಸೀದಿ ವಿವಾದದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಆಶಯಕ್ಕೆ ವಿರುದ್ಧವಾಗಿದೆ ಎಂದು ಎಐಎಂಐಎಂ ಪಕ್ಷದ ಸಂಸದರೂ ಆಗಿರುವ ಒವೈಸಿ […]

Advertisement

Wordpress Social Share Plugin powered by Ultimatelysocial