ಇಂದು 2022ರ ಮೊದಲ “ಮನ್​ ಕೀ ಬಾತ್”​, ದೇಶದ ಜನರನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ರೇಡಿಯೋ ಕಾರ್ಯಕ್ರಮ ಮನ್​ ಕೀ ಬಾತ್​ (Mann Ki Baat) ಮೂಲಕ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. 2022ರ ಮೊದಲ ಆವೃತ್ತಿಯ ಮನ್​ ಕೀ ಬಾತ್​ ಇದಾಗಿದ್ದು, ಬೆಳಗ್ಗೆ 11.30ರಿಂದ ಪ್ರಧಾನಿ ಮೋದಿ (PM Narendra Modi) ಮಾತನಾಡಲಿದ್ದಾರೆ.ಒಟ್ಟಾರೆ ಇಂದು ಪ್ರಸಾರವಾಗುವುದು 85ನೇ ಎಪಿಸೋಡ್​​ನ ಮನ್​ ಕೀ ಬಾತ್​.ಪ್ರತಿತಿಂಗಳ ಕೊನೇ ಭಾನುವಾರ ನರೇಂದ್ರ ಮೋದಿಯವರ ಮನ್​ ಕೀ ಬಾತ್ ರೇಡಿಯೋ ಕಾರ್ಯಕ್ರಮ ನಡೆಯಲಿದ್ದು, ಅದರಲ್ಲಿ ರಾಜಕೀಯ ಹೊರತಾಗಿ ಅನೇಕ ಮಹತ್ವದ ವಿಚಾರಗಳ ಕುರಿತು ಮಾತನಾಡುವರು. ಇದು ಆಲ್​ ಇಂಡಿಯಾ ರೇಡಿಯೋ ಮತ್ತು ದೂರದರ್ಶನದ ಎಲ್ಲ ನೆಟ್​ವರ್ಕ್​​ಗಳಲ್ಲಿ, ಎಐಆರ್​ ನ್ಯೂಸ್​ ಮತ್ತು ಮೊಬೈಲ್​ ಆಯಪ್​ನಲ್ಲಿ ಪ್ರಸಾರವಾಗಲಿದೆ.ಈ ಬಗ್ಗೆ ಕಳೆದ ವಾರ ಟ್ವೀಟ್ ಮಾಡಿದ್ದ ಪ್ರಧಾನಿ ಕಾರ್ಯಾಲಯ, ಜನವರಿ 30ರಂದು ಮಹಾತ್ಮ ಗಾಂಧೀಜಿ ಪುಣ್ಯತಿಥಿ ಇದೆ. ಅವರ ಸ್ಮರಣೆಯ ನಂತರ ಬೆಳಗ್ಗೆ 11.30ಕ್ಕೆ ಪ್ರಧಾನಿ ಮೋದಿ ಮನ್​ ಕೀ ಬಾತ್​ ಉದ್ದೇಶಿಸಿ ಮಾತನಾಡುವರು ಎಂದು ಮಾಹಿತಿ ನೀಡಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಂಕೋಲಾ : ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ವಿವಾಹಿತ!

Sun Jan 30 , 2022
ಅಂಕೋಲಾ : ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ವಿವಾಹಿತನೋರ್ವ ಅತ್ಯಾಚಾರ ಎಸಗಿದ ಘಟನೆ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಅಗಸೂರಿನಲ್ಲಿ ನಡೆದಿದೆ.ಸಂತೃಸ್ಥ ಬಾಲಕಿಯ ತಾಯಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ದೂರು ನೀಡಿದ್ದಾಳೆ. ಸದ್ಯ ಅಜಿತ್ ತಲೆ ಮರೆಸಿಕೊಂಡಿದ್ದಾನೆ. ಪೊಲೀಸರು ಈತನ ಹುಡುಕಾಟ ನಡೆಸಿದ್ದಾರೆ.ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and […]

Advertisement

Wordpress Social Share Plugin powered by Ultimatelysocial