ಇಗ್ನೋ ಕೋರ್ಸ್‌ಗಳ: ಪ್ರವೇಶ ಪ್ರಾರಂಭ

ಬೆಳಗಾವಿ: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಯ(ಇಗ್ನೋ)ದಲ್ಲಿ 2020ನೇ ಸಾಲಿನಲ್ಲಿ ದೂರ ಶಿಕ್ಷಣದ ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಪ್ರಾರಂಭವಾಗಿದೆ.’ನಗರದ ಆರ್.ಪಿ.ಡಿ. ಕಾಲೇಜಿನಲ್ಲಿ ಅಧ್ಯಯನ ಕೇಂದ್ರವಿದೆ.ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಹಾಗೂ ಡಿಪ್ಲೊಮಾ ಜೊತೆಗೆ ಎಂ.ಕಾಂ., ಎಂಬಿಎ, ಎಂಸಿಎ, ಬಿ.ಸಿ.ಎ., ಎಂ.ಎ. ಸೇರಿದಂತೆ 58 ವಿವಿದ ಸ್ನಾತಕ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಹಾಗೂ ಸರ್ಟಿಫಿಕೆಟ್‌ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದಾಗಿದೆ. ಈ ಎಲ್ಲ ಕೋರ್ಸ್‌ಗಳ ಶುಲ್ಕದಲ್ಲಿ ರಿಯಾಯತಿ ದೊರೆಯಲಿದೆ. ಅನೇಕ ಕೋರ್ಸ್‌ಗಳು ಪರಿಶಿಷ್ಠ ಜಾತಿ ಹಾಗೂ ಪಂಗಡದ ಅಭ್ಯರ್ಥಿಗಳಿಗೆ ಉಚಿತವಾಗಿವೆ. ಹೆಚ್ಚಿನ ಮಾಹಿತಿಗೆ ದೂ.ಸಂಖ್ಯೆ: 0831- 2485997, ಮೊ.ಸಂಖ್ಯೆ: 9880392021 ಸಂಪರ್ಕಿಸಬಹುದು’ ಎಂದು ಕೇಂದ್ರದ ಸಂಯೋಜಕ ಪ್ರಸನ್ನ ಜೋಶಿ ತಿಳಿಸಿದ್ದಾರೆ.’ಇಗ್ನೋ ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ಅಧೀನದಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯವಾಗಿದೆ. ಈಚೆಗೆ ಬೆಂಗಳೂರಿನ ನ್ಯಾಕ್‌ ಸಂಸ್ಥೆಯಿಂದ ಎ++ ಗ್ರೇಡ್ ಪಡೆದಿದೆ’ ಎಂದು ಮಾಹಿತಿ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಲಕ್ನೋ-ಕಾನ್ಪುರ ಎಕ್ಸ್ಪ್ರೆಸ್ವೇ ಅಂತಿಮ ಅನುಮೋದನೆ; 2022 ರ ಕೇಂದ್ರ ಬಜೆಟ್ನಲ್ಲಿ ₹1,935 ಕೋಟಿಗಳನ್ನು ನಿಗದಿಪಡಿಸಿದೆ;

Fri Feb 4 , 2022
ಉತ್ತರ ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿಯೊಂದಿಗೆ ಮುಂದುವರಿಯುತ್ತಿರುವ ಲಕ್ನೋ ಶೀಘ್ರದಲ್ಲೇ ಕಾನ್ಪುರದೊಂದಿಗೆ ಎಕ್ಸ್‌ಪ್ರೆಸ್‌ವೇ ಮೂಲಕ ಸಂಪರ್ಕಿಸಲು ಸಿದ್ಧವಾಗಿದೆ. 2022 ರ ಕೇಂದ್ರ ಬಜೆಟ್‌ನಲ್ಲಿ ₹1,935 ಕೋಟಿಗಳನ್ನು ಶೆಲ್ ಮಾಡುವ ಮೂಲಕ ಲಕ್ನೋ-ಕಾನ್ಪುರ್ ಎಕ್ಸ್‌ಪ್ರೆಸ್‌ವೇಗೆ ಭಾರತ ಸರ್ಕಾರವು ತನ್ನ ಅಂತಿಮ ಅನುಮೋದನೆಯನ್ನು ನೀಡಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಓದುವುದನ್ನು ಮುಂದುವರಿಸಿ NE-6 ಎಂದು ವರದಿಯಾಗಿದೆ. ಲಕ್ನೋ ಮತ್ತು ಕಾನ್ಪುರ ನಡುವೆ ಸಂಪರ್ಕವನ್ನು ಹೆಚ್ಚಿಸುವುದು ಎರಡು ನಗರಗಳ ನಡುವಿನ ಸಂಪರ್ಕವನ್ನು […]

Advertisement

Wordpress Social Share Plugin powered by Ultimatelysocial