ಉಕ್ರೇನ್‌ಗೆ ಸದ್ದಿಲ್ಲದೆ ರಾಕೆಟ್‌ ಪೂರೈಸುತ್ತಿದೆ ಪಾಕಿಸ್ಥಾನ!

ಹೊಸದಿಲ್ಲಿ: ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಪಾಕಿಸ್ಥಾನವು ಈಗ ಯುದ್ಧಪೀಡಿತ ಉಕ್ರೇನ್‌ಗೆ ಸೇನಾ ಸಲಕರಣೆಗಳನ್ನು ಸರಬರಾಜು ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ!

ಒಂದು ಕಡೆ ರಿಯಾಯಿತಿ ಬೆಲೆಯಲ್ಲಿ ತೈಲವನ್ನು ನೀಡುವಂತೆ ರಷ್ಯಾವನ್ನು ಕೇಳಿಕೊಳ್ಳುತ್ತಿರುವ ಪಾಕಿಸ್ಥಾನ, ಮತ್ತೂಂದು ಕಡೆ ಗುಟ್ಟಾಗಿ ಉಕ್ರೇನ್‌ಗೆ ಸೇನಾ ಸಾಮಗ್ರಿ ಪೂರೈಸುತ್ತಿದೆ ಎನ್ನಲಾಗಿದೆ.

ಏಕಕಾಲಕ್ಕೆ ಜರ್ಮನಿಯ ಬಂದರು ಮತ್ತು ಪೋಲೆಂಡ್‌ ಮಾರ್ಗದ ಮೂಲಕ ಪಾಕಿಸ್ಥಾನವು ಮಲ್ಟಿಬ್ಯಾರೆಲ್‌ ರಾಕೆಟ್‌ ಲಾಂಚರ್‌ಗಳಲ್ಲಿ ಬಳಕೆಯಾಗುವಂಥ ರಾಕೆಟ್‌ಗಳನ್ನು ಉಕ್ರೇನ್‌ಗೆ ಕಳುಹಿಸಿಕೊಡುತ್ತಿದೆ.

ಪ್ರಸಕ್ತ ತಿಂಗಳ ಆರಂಭದಲ್ಲೇ ಕರಾಚಿ ಬಂದರಿನಿಂದ 10 ಸಾವಿರಕ್ಕೂ ಅಧಿಕ ರಾಕೆಟ್‌ಗಳನ್ನು ಶಿಪ್ಪಿಂಗ್‌ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಉಕ್ರೇನ್‌ನೊಂದಿಗೆ ಗಡಿ ಹಂಚಿಕೊಂಡಿರುವ ದೇಶಗಳ ಮೂಲಕ ಈ ಎಲ್ಲ ಸಾಮಗ್ರಿಗಳನ್ನು ಕಳುಹಿಸಲಾಗುತ್ತಿದೆ. ಕರಾಚಿ ಮೂಲದ ಶಿಪ್ಪಿಂಗ್‌ ಕಂಪೆನಿ ಪ್ರಾಜೆಕ್ಟ್ ಶಿಪ್ಪಿಂಗ್‌ ಕಳೆದ ತಿಂಗಳು ಪಾಕಿಸ್ಥಾನ್‌ ಆರ್ಡನೆನ್ಸ್‌ ಫ್ಯಾಕ್ಟರಿಯಿಂದ 146 ಕಂಟೈನರ್‌ಗಳನ್ನು ಉಕ್ರೇನ್‌ಗೆ ರವಾನಿಸಿದೆ.

ಇದಕ್ಕೆ ಪ್ರತಿಯಾಗಿ ಉಕ್ರೇನ್‌ ಕೂಡ ಪಾಕಿಸ್ಥಾನದ ಎಂಐ-17 ಹೆಲಿಕಾಪ್ಟರ್‌ಗಳನ್ನು ಮೇಲ್ದರ್ಜೆಗೇರಿಸಲು ಸಹಾಯ ಮಾಡುತ್ತಿದೆ. ಅಷ್ಟೇ ಅಲ್ಲದೆ, ವಿಮಾನದ ಎಂಜಿನ್‌ಗಳು ಮತ್ತು ಇಂಡಸ್ಟ್ರಿಯಲ್‌ ಮೆರೈನ್‌ ಗ್ಯಾಸ್‌ ಟರ್ಬೈನ್‌ಗಳನ್ನು ಉತ್ಪಾದಿಸುವಂಥ ಉಕ್ರೇನ್‌ನ ಸಂಸ್ಥೆಯೊಂದು ಪಾಕಿಸ್ಥಾನದ ಹೆಲಿಕಾಪ್ಟರ್‌ಗಳನ್ನು ಮೇಲ್ದರ್ಜೆಗೇರಿಸಲು ನೆರವಾಗುವುದಾಗಿ ವಾಗ್ಧಾನ ಮಾಡಿದೆ ಎಂದೂ ಹೇಳಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಲ್ಲರೂ ತಾಯಯ್ತಾ ಕಟ್ಟಿಕೊಂಡು ಕಾರ್ಯಕ್ರಮಕ್ಕೆ ಬನ್ನಿ

Sun Feb 12 , 2023
ಎಲ್ಲರೂ ತಾಯಯ್ತಾ ಕಟ್ಟಿಕೊಂಡು ಕಾರ್ಯಕ್ರಮಕ್ಕೆ ಬನ್ನಿ ಎಲೆಕ್ಷನ್ ಇದೆ ಯಾರ್ಯರೋ ಮಠ ಮಂತ್ರ ಮಾಡ್ತಾರೆಂತೆ ಸರ್ಕಾರಿ ಕಾರ್ಯಕ್ರಮದಲ್ಲಿ ಮೌಢ್ಯದ ಭಾಷಣ ಮಾಡಿದ ಸಚಿವ ಆನಂದ‌ ಸಿಂಗ್ ವೇದಿಕೆ ಕಾರ್ಯಕ್ರಮ ತಡವಾಗಿ ಪ್ರಾರಂಭವಾಯ್ತು ಎಲ್ಲರೂ ತಾಯಿಯ್ತಾ ಕಟ್ಟಿಸಿಕೊಂಡು ಬನ್ನಿ ಎಂದ ಸಚಿವ ಸಿಂಗ್ ನಾನಂತೂ ಮೊನ್ನೆ ತಾಯಿಯ್ತಾ ಕಟ್ಟಿಕೊಂಡೆ ಬಹಳಷ್ಟು ಜನ‌ ಮಾಠ,ಮಂತ್ರ ಮಾಡಿಸ್ತಿರಂತೆ ಹೇಳಿದ್ರು ದೇವರು ಇದಾನೆ ಅಂದ್ರೆ ದೆವ್ವನೂ ಇರ್ತವೆ ನನ್ನ ತಾಯಿಗೆ ಹೇಳಿದೆ ಯಾರಾರೋ ಮಾಠ ಮಾಡಿಸ್ತಾರಂತ […]

Advertisement

Wordpress Social Share Plugin powered by Ultimatelysocial