ಎಟಿಎಂ ಕಾರ್ಡ್ ನೀಡುತ್ತೆ 10 ಲಕ್ಷ ರೂ. ವರೆಗೆ ವಿಮಾ ರಕ್ಷಣೆ.

 

 

ಟಿಎಂಗಳ ಬಳಕೆಯು ನಮ್ಮ ದೈನಂದಿನ ಜೀವನದ ವ್ಯವಹಾರಗಳನ್ನು ಬಹಳ ಸುಲಭಗೊಳಿಸಿವೆ. ಎಟಿಎಂ ಕಾರ್ಡ್‌ ಇದ್ದರೆ ಬ್ಯಾಂಕ್‌ನಲ್ಲಿ ಹಣ ವಿತ್‌ಡ್ರಾ ಮಾಡುವುದಕ್ಕೆ ಕ್ಯೂನಲ್ಲಿ ನಿಲ್ಲುವ ಅಗತ್ಯವಿಲ್ಲ. ಆನ್‌ಲೈನ್‌ ಖರೀದಿಗಳನ್ನು ಕೂಡ ಎಟಿಎಂ ಕಾರ್ಡ್‌ನಿಂದ ಮಾಡಬಹುದು.

ಅಷ್ಟೇಅಲ್ಲ ಹೆಚ್ಚಿನ ಕಂಪೆನಿಗಳು ಹಾಗೂ ಶಾಪಿಂಗ್‌ ಆಪ್‌ಗಳು ಆನ್‌ಲೈನ್‌ ಮೂಲಕ ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ ಬಳಸಿ ಶಾಪಿಂಗ್‌ ಮಾಡಿದರೆ ಅನೇಕ ರೀತಿಯ ಡಿಸ್ಕೌಂಟ್‌ ಆಫರ್‌ ನೀಡುತ್ತವೆ. ಹೀಗಿರುವಾಗ, ಎಟಿಎಂ ಕಾರ್ಡ್‌ ಬಳಕೆಯಿಂದ ಹಣ ಹಿಂಪಡೆಯುವುದು ಹೊರತಾಗಿ ಬೇರೆ ಹಲವು ರೀತಿಯ ಅನುಕೂಲತೆಗಳಿವೆ ಎಂಬುದರ ಬಗ್ಗೆ ಎಲ್ಲರಿಗೂ ಚೆನ್ನಾಗಿ ಗೊತ್ತಿದೆ. ಆದರೆ, ಎಟಿಎಂ ಕಾರ್ಡ್‌ದಾರರಿಗೆ ವಿಮೆ ಕವರ್‌ ಆಗುತ್ತದೆ ಎನ್ನುವುದು ನಿಮಗೆ ತಿಳಿದಿದೆಯೇ?

ಸರ್ಕಾರಿ ಅಥವಾ ಖಾಸಗಿ ಸೇರಿದಂತೆ ಬಹುತೇಕ ಎಲ್ಲ ಬ್ಯಾಂಕ್‌ಗಳು ಖಾತೆ ಹೊಂದಿರುವ ತನ್ನ ಗ್ರಾಹಕರು ಅಪಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದರೆ ಅಥವಾ ಸಾವನ್ನಪ್ಪಿದರೆ ಅಂಥವರಿಗೆ ಈ ವಿಮಾ ಆಫರ್‌ ಅನ್ನು ಒದಗಿಸುತ್ತದೆ. ಗ್ರಾಹಕರಿಂದ ಗ್ರಾಹಕರಿಗೆ ಖಾತೆಯಲ್ಲಿನ ವ್ಯವಹಾರ ಆಧರಿಸಿ 50000ರೂ. ನಿಂದ 10ಲಕ್ಷ ರೂ.ವರೆಗಿನ ವಿಮಾ ಕವರೇಜ್‌ ನೀಡುತ್ತದೆ.

ಆದರೆ, ಬ್ಯಾಂಕ್‌ಗಳು ಎಟಿಎಂಗೆ ನೀಡುವ ವಿಮಾ ಕವರೇಜ್‌ ಬಗ್ಗೆ ತಿಳಿದುಕೊಳ್ಳುವುದಕ್ಕೆ ಹೆಚ್ಚಾಗಿ ಗ್ರಾಹಕರಿಗೆ ಆಸಕ್ತಿ ಇರುವುದಿಲ್ಲ. ಇನ್ನೊಂದೆಡೆ ಬ್ಯಾಂಕ್‌ ಕೂಡ ಗ್ರಾಹಕರಿಗೆ ನೇರವಾಗಿ ಈ ಬಗ್ಗೆ ಮಾಹಿತಿಯನ್ನು ಒದಗಿಸುವುದಿಲ್ಲ. ಆದರೂ ಈಗ ಹೆಚ್ಚಿನ ಬ್ಯಾಂಕ್‌ಗಳು ಕ್ರೆಡಿಟ್‌ ಕಾರ್ಡ್‌ ವಿಮಾ ಕವರೇಜ್‌ ಬಗ್ಗೆ ಮಾಹಿತಿ ನೀಡುತ್ತವೆ. ಒಂದು ವೇಳೆ ನಿಮ್ಮ ಬ್ಯಾಂಕ್‌ ಖಾತೆಯು ಚಾಲ್ತಿಯಲ್ಲಿ ಇಲ್ಲದಿದ್ದರೆ ಈ ವಿಮೆಯನ್ನು ಬ್ಯಾಂಕ್‌ಗಳು ಹಿಂದಕ್ಕೆ ಪಡೆದುಕೊಳ್ಳಬಹುದು.

ಮರಣ ಹೊಂದಿದ ವ್ಯಕ್ತಿಗೆ ವಿಮಾ ಕವರೇಜ್‌ ಕ್ಲೈಮ್‌ ಮಾಡುವುದು ಹೇಗೆ?

ಈ ಮಾಹಿತಿ ಬಗ್ಗೆ ಸಾಮಾನ್ಯವಾಗಿ ಜನರು ಬಹಳ ವಿರಳವಾಗಿ ತಿಳಿದಿರುವ ಕಾರಣ ವಿಮಾ ಕ್ಲೈಮುಗೆ ಅರ್ಜಿ ಸಲ್ಲಿಸಲು ಹಿಂದೇಟು ಹಾಕುತ್ತಾರೆ. ಸಂಬಂಧಪಟ್ಟ ವ್ಯಕ್ತಿಯು ಅಪಘಾತಕ್ಕೆ ಒಳಗಾಗಿದ್ದರೆ ಕೂಡಲೇ ನೀವು ವಿಮಾ ಕ್ಲೈಮ್‌ ಅನ್ನು ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಬೇಕು. ಅಪಘಾತಕ್ಕೆ ಒಳಗಾದವರಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವುದಕ್ಕೆ ಪ್ರಾಮಾಣಿಕತೆಯನ್ನು ಪ್ರದರ್ಶಿಸಬೇಕು.

ಒಂದುವೇಳೆ ಆ ವ್ಯಕ್ತಿಯು ಆಸ್ಪತ್ರೆಗೆ ದಾಖಲಾಗಿದ್ದರೆ ಎಲ್ಲ ರೀತಿಯ ವೈದ್ಯಕೀಯ ದಾಖಲೆಗಳನ್ನು ನೀವು ಕೈಯಲ್ಲಿ ಇಟ್ಟುಕೊಂಡಿರಬೇಕು. ಒಂದೊಮ್ಮೆ ಆ ವ್ಯಕ್ತಿಯು ಸಾವನ್ನಪ್ಪಿದ್ದರೆ ಆಗ ಅವರ ಸಂಬಂಧಿಕರು ಫೊಸ್ಟ್‌ಮಾರ್ಟಂ ರಿಪೋರ್ಟ್‌, ಪೊಲೀಸ್‌ ರಿಪೋರ್ಟ್‌, ವೈದ್ಯಕೀಯ ಪ್ರಮಾಣಪತ್ರ ಹಾಗೂ ಡ್ರೈವಿಂಗ್‌ ಲೈಸೆನ್ಸ್‌ನ್ನು ಪಡೆದುಕೊಂಡಿರಬೇಕು. ಅಲ್ಲದೆ, ಆ ಕಾರ್ಡ್‌ದಾರರು ಕಳೆದ 60 ದಿನಗಳಲ್ಲಿ ಮಾಡಿರುವ ಪ್ರಮುಖ ಎಟಿಎಂ ವ್ಯವಹಾರಗಳ ಬಗ್ಗೆ ಬ್ಯಾಂಕ್‌ಗೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ.

ಸೆಬಿಯಲ್ಲಿ ನೊಂದಾಯಿತ ತೆರಿಗೆ ಹಾಗೂ ಹೂಡಿಕೆ ತಜ್ಞರು ಹೇಳುವ ಪ್ರಕಾರ, ಅಪಘಾತ ಮರಣ ವಿಮೆಯು ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ಗಳು, ವ್ಯಕ್ತಿಗಳು ಹೊಂದಿರುವ ವಿವಿಧ ರೀತಿಯ ಕಾರ್ಡ್‌ಗೆ ಅನುಗುಣವಾಗಿ 30000 ರೂ.ನಿಂದ 10 ಲಕ್ಷ ರೂ. ವರೆಗೆ ಉಚಿತ ಅಪಘಾತ ಮರಣ ವಿಮಾ ಸುರಕ್ಷತೆಯನ್ನು ನೀಡುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಕರ್ಮ ನಿಮ್ಮನ್ನು ಬಿಡುವುದಿಲ್ಲ ಡಿಕೆ ರವಿ ಪತ್ನಿ ಕುಸುಮ ಟ್ವಿಟ್.

Mon Feb 20 , 2023
ಐಎಎಸ್ v/s ಐಪಿಎಸ್ ಮಹಿಳಾ ಅಧಿಕಾರಿಗಳ ಜಟಾಪಟಿ ಭಾರಿ ಸುದ್ದಿಗೆ ಗ್ರಾಸವಾಗಿದ್ದು, ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್ ಅಧಿಕಾರಿ ಡಿ ರೂಪ ಸರಣಿ ಆರೋಪಗಳನ್ನು ಮಾಡಿರುವ ಬೆನ್ನಲ್ಲೇ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ ರವಿ ಪತ್ನಿ ಕುಸುಮಾ ಹನುಮಂತರಾಯಪ್ಪ ಟ್ವೀಟ್ ಮಾಡಿರುವುದು ತೀವ್ರ ಕುತೂಹಲ ಮೂಡಿಸಿದೆ.ರೋಹಿಣಿ ಸಿಂಧೂರಿ ವಿರುದ್ಧದ ಆರೋಪದಲ್ಲಿ ರೂಪಾ ಮೌದ್ಗಿಲ್ ಅವರು ಡಿ.ಕೆ ರವಿ ಸಾವಿನ ಪ್ರಕರಣವನ್ನು ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಡಿ.ಕೆ ರವಿ ಪತ್ನಿ ಟ್ವೀಟ್ […]

Advertisement

Wordpress Social Share Plugin powered by Ultimatelysocial