ಎನ್.ಐ.ಎ.ನಿಂದ ದೇಶಾದ್ಯಂತ 72 ಗೂಂಡಾಗಳ ನೆಲೆಗಳ ಮೇಲೆ ದಾಳಿ !

ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಿದ ಪ್ರಕರಣ

ವ ದೆಹಲಿ  ಭಯೋತ್ಪಾದಕರಿಂದ ಹಣ ತೆಗೆದುಕೊಂಡ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳದಿಂದ (ಎನ್.ಐ.ಎ.

ದಿಂದ) ೭ ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಿಂದ ಬವಾನಾ ಅನ್ ಲಾರೆನ್ಸ್ ಬಿಶ್ನೋಯಿ ಈ ಗುಂಪಿನ ೭೨ ಸ್ಥಳಗಳ ಮೇಲೆ ದಾಳಿ ನಡೆದಿದೆ. ಪಂಜಾಬ್, ಹರಿಯಾಣಾ, ದೆಹಲಿ, ಉತ್ತರಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ ಈ ರಾಜ್ಯಗಳು ಮತ್ತು ಚಂಡಿಗಡ ಈ ಕೇಂದ್ರಾಡಳಿತ ಪ್ರದೇಶದಲ್ಲಿ ದಾಳಿ ನಡೆಸಿದ್ದಾರೆ. ರಾಜಸ್ಥಾನದಲ್ಲಿ ನಡೆಸಿದ ದಾಳಿಯಲ್ಲಿ ಈ ಗುಂಪಿನಲ್ಲಿನ ಗೂಂಡಾಗಳು ಪಾಕಿಸ್ತಾನದ ಜನರ ಜೊತೆ ಸಂಪರ್ಕದಲ್ಲಿರುವುದು ಬಹಿರಂಗವಾಗಿದೆ.

. ಎನ್.ಐ.ಎ ಯಿಂದ ಲಾರೆನ್ಸ್ ಬಿಶ್ನೋಯಿ ಮತ್ತು ಬವಾನಾ ಗುಂಪುಗಳ ಜನರು ಪಾಕಿಸ್ತಾನದ ಮತ್ತು ಐ.ಎಸ್.ಐ. ಜೊತೆಗೆ ಸಂಬಂಧ ಇರುವುದು ಕಂಡು ಬಂದಿದೆ. ಇದರ ಅಡಿಯಲ್ಲಿ ಇಲ್ಲಿಯವರೆಗೆ ಯಾವ ಗೂಂಡಾಗಳನ್ನು ಬಂಧಿಸಿದ್ದಾರೆ, ಅವರ ವಿಚಾರಣೆಯ ಆಧಾರದಲ್ಲಿ ಈ ಎಲ್ಲಾ ಮಾಹಿತಿ ದೊರೆತಿದೆ. ಬಂಧಿಸಿರುವ ರೌಡಿಗಳು, ಬಿಶ್ನೋಯಿ ಮತ್ತು ಬವಾನಾ ಗುಂಪುಗಳಿಗೆ ಪಾಕಿಸ್ತಾನದಿಂದ ನಿಧಿ ದೊರೆಯುತ್ತದೆ, ಅದರ ಉಪಯೋಗ ದೇಶ ವಿರೋಧಿ ಕಾರ್ಯ ಚಟುವಟಿಕೆಗಾಗಿ ಮಾಡುತ್ತಾರೆ.

. ಪ್ರಸಿದ್ಧ ಗಾಯಕ ಸಿದ್ದು ಮುಸೇವಾಲಾ ಇವರ ಹತ್ಯೆಯ ಪ್ರಕರಣದಲ್ಲಿ ಬಂಧಿಸಿರುವ ಗೂಂಡ ಲಾರೆನ್ಸ್ ಮತ್ತು ನೀರಜ್ ಬವಾನಾ ಇವರ ವಿಚಾರಣೆಯಲ್ಲಿ ಶಸ್ತ್ರಾಸ್ತ್ರ ಪೂರೈಕೆಯ ಗುಂಪು ಮತ್ತು ಭಯೋತ್ಪಾದಕರಿಂದ ಧನ ಸಹಾಯ ಆಗುತ್ತಿರುವುದರ ಬಗ್ಗೆ ಒಪ್ಪಿಕೊಂಡರು. ಎನ್.ಐ.ಎ. ನ ದಾಳಿಯ ವೇಳೆ ಕೆಲವು ಸ್ಥಳದಲ್ಲಿ ಶಸ್ತ್ರಾಸ್ತ್ರಗಳು ದೊರೆತಿರುವ ಬಗ್ಗೆ ಹೇಳಿದ್ದಾರೆ.

೩. ಎನ್.ಐ.ಎ. ಯಿಂದ ನಡೆದಿರುವ ದಾಳಿಯಲ್ಲಿ ಕೆನಡಾದಲ್ಲಿ ಕುಳಿತು ಪಂಜಾಬದಲ್ಲಿ ಭಯದ ವಾತಾವರಣ ಸೃಷ್ಟಿಸುವ ಲಖಬೀರ ಲಂಡಾ ಮತ್ತು ಗೂಂಡಾ ಲಾರೆನ್ಸ್ ಮತ್ತು ಗೋಲ್ಡಿ ಬರಾರ್ ಇವರ ಹತ್ತಿರದ ಸಹಚರರ ಸ್ಥಳಗಳ ಸಮಾವೇಶವಿದೆ. ಕೆಲವು ದಿನಗಳ ಹಿಂದೆ ಲಖಬೀರ ಲಂಡಾನನ್ನು ಎನ್. ಐ .ಎ. ಯಿಂದ ಭಯೋತ್ಪಾದಕನೆಂದು ಘೋಷಿಸಿದ್ದು ಅವನ ಹತ್ತಿರದ ಸಂಬಂಧಿಕರ ಮೇಲೆ ಸತತ ಗಮನ ಇಡಲಾಗಿದೆ. ಎನ್.ಐ.ಎ. ಅವರ ಸ್ಥಳಗಳ ಮೇಲೆ ದಾಳಿ ನಡೆಸಿದೆ.

ಪಾಕಿಸ್ತಾನದಿಂದ ಹಣ ಪಡೆದು ಭಾರತದಲ್ಲಿ ಅಪರಾಧಿ ಕೃತ್ಯಗಳ ನಡೆಸುವ ಇಂತಹ ಗೂಂಡಾಗಳ ಮೇಲೆ ತ್ವರಿತ ಗತಿಯಲ್ಲಿ ಮೊಕದ್ದಮೆ ನಡೆಸಿ ಅವರಿಗೆ ಗಲ್ಲು ಶಿಕ್ಷೆ ಆಗಲು ಪ್ರಯತ್ನ ಮಾಡುವುದು ಅವಶ್ಯಕ !

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಿಯುಸಿ ಪರೀಕ್ಷೆ ವೇಳೆ ತಲೆಯ ಸ್ಕಾರ್ಫ್ನೊಂದಿಗೆ ಬರೆಯಲು ಅವಕಾಶ ಕೋರಿ ಅರ್ಜಿ: ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

Wed Feb 22 , 2023
ನವದೆಹಲಿ: ಕರ್ನಾಟಕದ ಪದವಿಪೂರ್ವ ಕಾಲೇಜುಗಳಲ್ಲಿ ವಾರ್ಷಿಕ ಪರೀಕ್ಷೆಗಳನ್ನು ತಲೆಯ ಸ್ಕಾರ್ಫ್ನೊಂದಿಗೆ ಬರೆಯಲು ಅನುಮತಿ ಕೋರಿ ವಿದ್ಯಾರ್ಥಿಗಳ ಗುಂಪು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್  ಇಂದು ಒಪ್ಪಿಕೊಂಡಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್.ನರಸಿಂಹ  ಅವರ ಪೀಠವು ಪಟ್ಟಿಗಾಗಿ ಮನವಿಯನ್ನು ಪರಿಶೀಲಿಸಲಾಗುವುದು ಎಂದು ಹೇಳಿದೆ. ವಿದ್ಯಾರ್ಥಿಗಳ ಪರವಾಗಿ ವಕೀಲ ಶಾದನ್ ಫರಾಸತ್ ಅವರು ಮಾರ್ಚ್ 9 ರಿಂದ ಸರ್ಕಾರಿ ಕಾಲೇಜುಗಳಲ್ಲಿ ಪ್ರಾರಂಭವಾಗುವ ವಾರ್ಷಿಕ ಪರೀಕ್ಷೆಗಳಿಗೆ ಹಾಜರಾಗಬೇಕಾಗಿತ್ತು ಎಂದು […]

Advertisement

Wordpress Social Share Plugin powered by Ultimatelysocial