ಮೇ. 1 ರ ನಾಳೆಯಿಂದ ಅನೇಕ ದೊಡ್ಡ ಬದಲಾವಣೆಗಳು ಸಂಭವಿಸಲಿವೆ.

ನವದೆಹಲಿ : ಮೇ. 1 ರ ನಾಳೆಯಿಂದ ಅನೇಕ ದೊಡ್ಡ ಬದಲಾವಣೆಗಳು ಸಂಭವಿಸಲಿವೆ. ಇದು ಸಾಮಾನ್ಯ ಜನರ ಜೇಬಿನ ಮೇಲೆ ನೇರ ಪರಿಣಾಮ ಬೀರಲಿದೆ. ಮೇ. 1 ರಿಂದ ಸಿಲಿಂಡ್ ಬೆಲೆಗಳಿಂದ ಹಿಡಿದು, ಸಾಬೂನು, ಶಾಂಪೂ, ಔಷಧಿಗಳ ಬೆಲೆಗಳಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

ಮೇ. 1 ರಿಂದ ಬದಲಾಗಲಿರುವ ನಿಯಮಗಳು

ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಾಗಬಹುದು

ಪ್ರತಿ ತಿಂಗಳಂತೆ ಮೇ ತಿಂಗಳ ಮೊದಲ ದಿನದಂದು ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ ಆಗಬಹುದು. ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಬೆಲೆಗಳು ಹೆಚ್ಚಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಮೇ ತಿಂಗಳಲ್ಲಿ ಮತ್ತೊಮ್ಮೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ.

ಔಷಧಿ ಬೆಲೆಗಳು ಹೆಚ್ಚಾಗಬಹುದು

ಮಾಧ್ಯಮ ವರದಿಗಳ ಪ್ರಕಾರ, ಮೇ 1 ರಿಂದ ಹಲವು ಔಷಧಿಗಳ ಬೆಲೆಯಲ್ಲಿ ಶೇ. 10 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಜ್ವರ, ಚರ್ಮ ರೋಗಗಳು ಮತ್ತು ರಕ್ತಹೀನತೆಯ ಚಿಕಿತ್ಸೆಯಲ್ಲಿ ಬಳಸುವ ಔಷಧಿಗಳು ದುಬಾರಿಯಾಗಬಹುದು ಎನ್ನಲಾಗಿದೆ

ಸಾಬೂನು, ಶಾಂಪೂ, ಬಿಸ್ಕತ್ ಉತ್ಪನ್ನಗಳ ಬೆಲೆ ಏರಿಕೆ ಸಾಧ್ಯತೆ

ತಾಳೆ ಎಣ್ಣೆ ರಫ್ತಿನ ಮೇಲೆ ಇಂಡೋನೇಷ್ಯಾ ನಿಷೇಧ ಹೇರಿದ ಪರಿಣಾಮ ಭಾರತದಲ್ಲಿ ಖಾದ್ಯ ತೈಲ ಮತ್ತು ಪ್ಯಾಕೇಜ್ ಮಾಡಿದ ಸರಕುಗಳ ಬೆಲೆಯಲ್ಲಿ ಏರಿಕೆಯಾಗುವ ನಿರೀಕ್ಷೆಯಿದೆ. ಸಾಬೂನುಗಳು, ಶಾಂಪೂಗಳು, ನೂಡಲ್ಸ್ ಮತ್ತು ಬಿಸ್ಕತ್ತುಗಳಿಂದ ಹಿಡಿದು ಚಾಕೊಲೇಟ್‌ ಉತ್ಪನ್ನಗಳನ್ನು ತಯಾರಿಸಲು ತಾಳೆ ಎಣ್ಣೆಯನ್ನು ವಿವಿಧ ಕೈಗಾರಿಕೆಗಳಿಗೆ ಕಚ್ಚಾ ವಸ್ತುವಾಗಿ ಬಳಸಲಾಗುತ್ತದೆ. ಹೀಗಾಗಿ ಸಾಬೂನು, ಶಾಂಪೂ, ಬಿಸ್ಕತ್ ಉತ್ಪನ್ನಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

IPO ನಲ್ಲಿ UPI ಪಾವತಿ ಮಿತಿ ಹೆಚ್ಚಿಳ

ಮೇ 1 ರಿಂದ ಚಿಲ್ಲರೆ ಹೂಡಿಕೆದಾರರಿಗೆ UPI ಪಾವತಿಯ ಮಿತಿಯನ್ನು ಹೆಚ್ಚಿಸಲಾಗುವುದು. SEBI ಯ ಹೊಸ ನಿಯಮಗಳ ಪ್ರಕಾರ, ಮೇ 1 ರ ನಂತರ ಕಂಪನಿಯ IPO ನಲ್ಲಿ ಹೂಡಿಕೆ ಮಾಡಲು, UPI ಮೂಲಕ ಪಾವತಿ ಮಾಡುವಾಗ ನೀವು 5 ಲಕ್ಷದವರೆಗೆ ಬಿಡ್ ಸಲ್ಲಿಸಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಹಿಂದಿನೆರಡು ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ಗೆ 2012ರ ಐಪಿಎಲ್‌ ದುರದೃಷ್ಟಕರವಾಗಿ ಕಾಡಿತು.

Sat Apr 30 , 2022
  ಅದು ಕೂಟದ ಉದ್ಘಾಟನಾ ಪಂದ್ಯದಲ್ಲಿ ಮುಂಬೈಗೆ ಸೋತರೆ, ಫೈನಲ್‌ ಹಣಾಹಣಿಯಲ್ಲಿ ಕೋಲ್ಕತಾ ನೈಟ್‌ರೈಡರ್ ಗೆ ಶರಣಾಯಿತು. ಕೂಟದ ಆರಂಭಿಕ ಪಂದ್ಯದ ತಾಣ ಚೆನ್ನೈನ “ಎಂ.ಎ. ಚಿದಂಬರಂ ಸ್ಟೇಡಿಯಂ’. ಆತಿಥೇಯ ಚೆನ್ನೈ ಇಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಎದುರಿಸಿತು. ಶೋಚನೀಯ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿ 8 ವಿಕೆಟ್‌ಗಳ ಸೋಲಿಗೆ ತುತ್ತಾಯಿತು. ಮೊದಲು ಬ್ಯಾಟಿಂಗ್‌ ನಡೆಸಿದ ಚೆನ್ನೈ 19.5 ಓವರ್‌ಗಳಲ್ಲಿ ಬರೀ 112ಕ್ಕೆ ಕುಸಿಯಿತು. ಇದರಲ್ಲಿ 12 ಎಕ್ಸ್‌ಟ್ರಾ ರನ್‌ ಆಗಿತ್ತು. […]

Advertisement

Wordpress Social Share Plugin powered by Ultimatelysocial