ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗಬೇಕಿದ್ದ ಸಿನಿಮಾ

ಎಲ್ಲಾ ಅಂದುಕೊoಡoತೆ ಆಗಿದ್ದರೆ ಏಪ್ರಿಲ್ ತಿಂಗಳಲ್ಲಿ ‘ತಲಾಖ್ ತಲಾಖ್ ತಲಾಖ್’ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಲಾಕ್‌ಡೌನ್‌ನಿಂದ ಚಿತ್ರಮಂದಿರಗಳೆಲ್ಲ ಬಂದ್ ಆಗಿರುವುದರಿಂದ, ಚಿತ್ರದ ಬಿಡುಗಡೆ ತಡವಾಗಿದೆ. ಈ ಮಧ್ಯೆ, ಚಿತ್ರವು ದಿ ಲಿಫ್ಟ್ ಆಪ್ ಸೆಷೆನ್ಸ್ ಹಾಲಿವುಡ್ ೨೦೨೦ ಹಾಗೂ ದಿ ಲಿಸ್ಟ್ ಆಫ್ ಯುಕೆ ೨೦೨೦ ಸಿನಿಮೋತ್ಸವಗಳಲ್ಲಿ ಪ್ರವೇಶ ಪಡೆದಿದೆ. ಇದಲ್ಲದೆ, ಕಾಸ್ಮೋ ಫಿಲಂ ಫೆಸ್ಟಿವಲ್ ಮೇ ೨೦೨೦ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದರೆ, ಇಂಡೋ ಗ್ಲೋಬಲ್ ಚಿತ್ರೋತ್ಸವದಲ್ಲಿ ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಉತ್ತರ ಭಾರತದ ಖ್ಯಾತ ಲೇಖಕಿ ನೂರ್ ಜಹೀರ್ ಅವರ ‘ಡಿನೈಡ್ ಬೈ ಅಲ್ಲಾಹ್’ ಎಂಬ ಸಂಶೋಧನಾ ಕೃತಿಯನ್ನಾಧರಿಸಿ, ಕನ್ನಡಕ್ಕೆ ಪೊ.ಎಂ. ಅಬ್ದುಲ್ ರೆಹಮಾನ್ ಪಾಷ ಅವರು ‘ಅಲ್ಲಾಹುನಿಂದ ನಿರಾಕೃತರು’ ಎಂಬ ಶೀರ್ಷಿಕೆಯಲ್ಲಿ ಅನುವಾದಿಸಿದ್ದಾರೆ. ವೈದ್ಯನಾಥ್ ಅವರು ನಿರ್ಮಿಸಿ-ರ್ದೇಶಿಸಿರುವ ಈ ಚಿತ್ರದಲ್ಲಿ ಆರ್‌ಜೆ ನೇತ್ರಾ, ಸ್ವರೂಪ್ ವೈದ್ಯ, ಶಶಾಂಕ್ ವೈದ್ಯ, ಶ್ರೀನಿವಾಸಮೂರ್ತಿ, ವೀಣಾ ಸುಂದರ್ ಮುಂತಾದವರು ನಟಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಸಿಇಟಿ ಪರೀಕ್ಷೆ ನಡೆಸುವ ನಿರ್ಧಾರ

Tue Jul 28 , 2020
ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ನಿಗದಿಯಾಗಿರುವ ಸಿಇಟಿ ಪರೀಕ್ಷೆ ನಡೆಸುವ ಸಂಬಂಧ ನರ‍್ಧಾರವನ್ನು ಮರುಪರಿಶೀಲಿಸಿ ಎಂದು ಹೈಕರ‍್ಟ್ ರಾಜ್ಯ ರ‍್ಕಾರಕ್ಕೆ ಸೂಚಿಸಿದೆ. ಜುಲೈ ೩೦, ಆಗಸ್ಟ್ ೧ರಂದು ಸಿಇಟಿ ಪರೀಕ್ಷೆ ನಿಗದಿಯಾಗಿದ್ದು, ಕಂಟೈನ್ಮೆಂಟ್ ಜೋನ್ ಗಳಲ್ಲಿರುವವರು ಹೊರ ಹೋಗುವಂತಿಲ್ಲ. ಹಾಗಾಗಿ ಮಕ್ಕಳು ಪರೀಕ್ಷೆಯಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದಿರುವ ಹೈಕರ‍್ಟ್, ಪರೀಕ್ಷೆ ನಡೆಸುವ ನರ‍್ಧಾರವನ್ನು ಮರುಪರಿಶೀಲಿಸಿ ಎಂದು ರಾಜ್ಯ ರ‍್ಕಾರಕ್ಕೆ ಸೂಚಿಸಿದೆ. Please follow and like us:

Advertisement

Wordpress Social Share Plugin powered by Ultimatelysocial