ಹೆಣ್ಣುಮಕ್ಕಳ ಮುಖ ನೋಡುವ ಆಸೆ ಯಾಕೆ?: ಹಿಜಾಬ್ ವಿವಾದದ ಕುರಿತು ಸಿ.ಎಂ‌.ಇಬ್ರಾಹಿಂ

ಬೆಂಗಳೂರು : ರಾಜ್ಯ ಸರ್ಕಾರ ವಿವಾದಗಳನ್ನು ಸೃಷ್ಟಿ ಮಾಡುವಲ್ಲಿ ಮುಂಚೂಣಿಯಲ್ಲಿದ್ದು, ಯಾವುದೇ ವಿವಾದದಲ್ಲಿ ಯಶಸ್ಸು ಸಿಗುತ್ತಿಲ್ಲ, ಹಾಗಾಗಿ ಈಗ ಹಿಜಾಬ್ ವಿವಾದ ಶುರು ಆಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ ಎಂ‌ ಇಬ್ರಾಹಿಂ ಹೇಳಿಕೆ ನೀಡಿದ್ದಾರೆ.ಹಿಜಾಬ್ ಬಹಳ ವರ್ಷದಿಂದ ನಡೆದುಕೊಂಡು ಬಂದಿದೆ. ಮೈಸೂರು ಮಹಾರಾಜ ಕಾಲದಿಂದಲೂ ಜಾರಿಯಲ್ಲಿದೆ.ಹೆಣ್ಣುಮಕ್ಕಳು ತೆರಳುವ ಚಕ್ಕಡಿ ಗಾಡಿಗೂ ಪರದೆ ಹಾಕಿರುವ ಇತಿಹಾಸ ಇದೆ. ಇದು ಕೋವಿಡ್ ಸಮಯದಲ್ಲಿ ಹಾಕಿಕೊಳ್ಳುವಂತೆ ಆಗಿದ್ದು, ನಾನು ಹಾಕೊಂಡಿದ್ದೇನೆ,ಸಿಎಂ ಬೊಮ್ಮಾಯಿ ಕೂಡ ಹಿಜಾಬ್ ಹಾಕಿಕೊಂಡಿದ್ದಾರೆ. ಆ ಪ್ರಿನ್ಸಿಪಲ್ ಪಾಠ ಮಾಡುವವನು, ಅವರಿಗೆ ಬುದ್ದಿ ಇದೆಯಾ ಎಂದು ಪ್ರಶ್ನಿಸಿದರು.ಈ ಹಿಂದೆ ಪೋಲಿಸರಿಗೂ ಸಮವಸ್ತ್ರ ಹಾಕಿಸಿ ಬಿಟ್ಟರು, ಎಲ್ಲಿಗೆ ತೆಗೆದುಕೊಂಡು ಹೋಗುತ್ತಾ ಇದ್ದೀರಿ, ಅಧಿಕಾರಿಗಳಿಗೆ ಹೇಳುತ್ತಾ ಇದ್ದೇನೆ,ಹುಷಾರ್,ಬಿಜೆಪಿ ಇದೇ ಕೊನೆ ಬಾರಿ ಗಾಳಿ ಬದಲಾಗುತ್ತಾ ಇದೆ. ಅವರ ಮುಖ ನೋಡೋಕೆ ನೀವೇಕೆ ಕಾಲೇಜ್ ಗೆ ಹೋಗೋದು ವಿದ್ಯೆ ಕಲಿಯೋಕೋ ಬ್ಯೂಟಿ ನೋಡೋಕೋ ಎಂದು ಪ್ರಶ್ನಿಸಿದರು.ಅನೇಕರು ಹಿಜಾಬ್ ಹಾಕೊಲ್ಲ, ಅವರಿಗೆ ನಾವು ಒತ್ತಡ ಹಾಕಿದ್ದೇವಾ? ಹೀಗಾಗಿ ನಾನು ಸರ್ಕಾರ ಶೀಘ್ರವಾಗಿ ನಿರ್ಧಾರ ಮಾಡಬೇಕು. ಇದನ್ನ ಕೂಡಲೇ ಕಮಿಷನರ್ ಹೈಕೋರ್ಟ್ ಆದೇಶ ಬರುವವರೆಗೂ ಸೂಕ್ತ ಕ್ರಮ ಕೈಗೊಳ್ಳ ಬೇಕು. ದೇಶದ ಮರ್ಯಾದೇ ಎಲ್ಲಿಗೆ ಹೋಗುತ್ತಾ ಇದೆ ಎಂದರು.ಉತ್ತರಕರ್ನಾಟಕದಲ್ಲಿ ಹೆಂಗಸರು ತಲೆ ಮೇಲೆ ಸೆರಗು ಹಾಕ್ತಾರೆ.ಮಾರ್ವಾಡಿಗಳ ಹೆಣ್ಮಕ್ಕಳು ಸೆರಗು ಹಾಕ್ತಾರೆ. ಕೋರ್ಟ್ ಕೇಸ್ ತೀರ್ಪು ಬರುವವರೆಗೆ ಯಥಾಸ್ಥಿತಿ ಕಾಪಾಡಬೇಕಿತ್ತು ಆದರೆ ಸರ್ಕಾರ ಹಾಗೆ ಮಾಡಿಲ್ಲ. ಸರ್ಕಾರ ಹಿಜಾಬ್ ವಿವಾದ ಆಗಲು ಬಿಡಬಾರದು ಎಂದರು.ಶಿಕ್ಷಣ ಸಚಿವರು ಮತ್ತು ಸಿಎಂ ಅವರಿಗೆ ಮನವಿ ಮಾಡ್ತೇನೆ.ಸಮಸ್ಯೆ ಬಗೆಹರಿಸಬೇಕು. ಕೋರ್ಟ್ ಆದೇಶ ಬರುವ ತನಕ ಯಥಾಸ್ಥಿತಿ ಕಾಪಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಲ್‌ಐಸಿ, ದೇಶದ ಅತಿದೊಡ್ಡ ವಿಮಾದಾರ ಸಂಸ್ಥೆಯಾಗಿದೆ.

Sat Feb 5 , 2022
ನವದೆಹಲಿ: ಜೀವ ವಿಮಾ ನಿಗಮ   ಹೂಡಿಕೆ ಯೋಜನೆಗಳನ್ನು ಒದಗಿಸುತ್ತದೆ, ಅಸಲು ಸುರಕ್ಷತೆಯ ಜೊತೆಗೆ ಪ್ರಭಾವಶಾಲಿ ಆದಾಯವನ್ನು ನೀಡುತ್ತದೆ.ದೇಶದ ಅತಿದೊಡ್ಡ ಜೀವ ವಿಮಾದಾರ ತನ್ನ ಎಲ್‌ಐಸಿ ಜೀವನ್ ಅಕ್ಷಯ್ ಏಳನೇ ಮತ್ತು ಎಲ್‌ಐಸಿ ಹೊಸ ಜೀವನಶಾಂತಿ ಪಾಲಿಸಿಗಳ ವರ್ಷಾಶನ ದರಗಳನ್ನು ಪರಿಷ್ಕರಿಸಿದೆ.ಎಲ್‌ಐಸಿ ಪ್ರಸ್ತುತ ಶೇಕಡಾ ೬೪.೧ ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ, ಇದು ಒಟ್ಟು ಲಿಖಿತ ಪ್ರೀಮಿಯಂ ಗೆ ಸಂಬಂಧಿಸಿದಂತೆ ಭಾರತದ ಅತಿದೊಡ್ಡ ಜೀವ ವಿಮಾದಾರನಾಗಿದೆ. ಹೊಸ ದರಗಳು ಫೆಬ್ರವರಿ 1,2022 […]

Advertisement

Wordpress Social Share Plugin powered by Ultimatelysocial