ಐಪಿಎಲ್‌ನಲ್ಲಿ ತಿರಸ್ಕರಿಸಲ್ಪಟ್ಟು ಭಾರತದ ವಿರುದ್ಧ ಅದ್ಭುತ ಪ್ರದರ್ಶನ .

 

 

ವಿಶ್ವದ ನಂಬರ್ 1 ಕ್ರಿಕೆಟ್ ಲೀಗ್ ಐಪಿಎಲ್‌ನಲ್ಲಿ ಆಡಲು ದೇಶ, ವಿದೇಶಗಳ ಹಲವು ಆಟಗಾರರು ತುದಿಗಾಲಲ್ಲಿ ನಿಂತಿರುತ್ತಾರೆ. ಆಟಗಾರರಿಗೆ ಹಣದ ಹೊಳೆಯನ್ನು ಹರಿಸುವ ಜೊತೆಗೆ ವಿಶ್ವದ ಅತ್ಯುತ್ತಮ ಆಟಗಾರರ ಜೊತೆ ಆಡುವ ಅವಕಾಶವೂ ಲಭ್ಯವಾಗುತ್ತದೆ.

ದೇಶೀಯ ಲೀಗ್‌ಗಳಲ್ಲಿ, ವಿವಿಧ ದೇಶಗಳ ತಂಡಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಅದೃಷ್ಟ ಖುಲಾಯಿಸಿದರೆ, ರಾತ್ರೋ ರಾತ್ರಿ ಕೋಟ್ಯಧಿಪತಿಗಳಾಗಿರುವ ಉದಾಹರಣೆಗಳು ಸಾಕಷ್ಟಿವೆ.

2023ರ ಐಪಿಎಲ್ ಮಿನಿ ಹರಾಜಿನಲ್ಲಿ ಹಲವು ಆಟಗಾರರು 10 ಕೋಟಿ ರುಪಾಯಿಗಿಂತ ಅಧಿಕ ಹಣ ಪಡೆದದ್ದನ್ನು ನೋಡಿದ್ದೇವೆ.

IND Vs NZ 2nd ODI: ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯಕ್ಕೆ ಹಸಿರು ಪಿಚ್ ಸಿದ್ಧಪಡಿಸಿದ ರಾಯ್ಪುರ ಕ್ರೀಡಾಂಗಣ

ಆದರೆ, ಪ್ರತಿಭೆ ಇದ್ದರೂ ಕೆಲವು ಆಟಗಾರರಿಗೆ ಐಪಿಎಲ್‌ನಲ್ಲಿ ಆಡುವ ಅದೃಷ್ಟ ಸಿಗಲ್ಲ. ಹಲವು ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಈ ಬಾರಿಯ ಮಿನಿ ಹರಾಜಿನಲ್ಲಿ ಹರಾಜಾಗದೇ ಉಳಿದರು.

ಈ ಐವರು ಆಟಗಾರರು ಐಪಿಎಲ್‌ನಲ್ಲಿ ಹರಾಜಾಗದಿದ್ದರೂ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಗಮನ ಸೆಳೆದರು. ಈ ಆಟಗಾರರ ಪ್ರದರ್ಶನವನ್ನು ನೋಡಿದ ನಂತರ ಅವರು ಐಪಿಎಲ್‌ನಲ್ಲಿ ಆಡಬೇಕಿತ್ತು ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. ಅಂತಹ ಐವರು ಆಟಗಾರರ ವಿವರ ಇಲ್ಲಿದೆ.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಚೇತೇಶ್ವರ ಪೂಜಾರ

ಶತಕ ಸಿಡಿಸಿ ಮಿಂಚಿದ ಮೈಕೆಲ್ ಬ್ರೇಸ್‌ವೆಲ್ಭಾರತ ಮತ್ತು ನ್ಯೂಜಿಲೆಂಡ್‌ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಮೈಕೆಲ್ ಬ್ರೇಸ್‌ವೆಲ್‌ ಸ್ಫೋಟಕ ಶತಕ ಸಿಡಿಸಿದ್ದರು. 140 ರನ್‌ ಗಳಿಸಿದ ಅವರು ಬಹುತೇಕ ಭಾರತದಿಂದ ಪಂದ್ಯವನ್ನು ಕಸಿಕೊಂಡಿದ್ದರು. ಆದರೆ, ಕೊನೆಯ ಓವರ್ ನಲ್ಲಿ ವಿಕೆಟ್ ಕಳೆದುಕೊಂಡು ನಿರಾಸೆ ಅನುಭವಿಸಿದ್ದರು.

7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಆಲ್‌ರೌಂಡರ್ ಮೈಕೆಲ್ ಬ್ರೇಸ್‌ವೆಲ್ ಐಪಿಎಲ್‌ ಮಿನಿಹರಾಜಿನಲ್ಲಿ ಯಾವುದೇ ತಂಡಕ್ಕೆ ಸೇರಲಿಲ್ಲ. 1 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದರೂ ಅವರನ್ನು ಖರೀದಿಸಲು ಯಾವುದೇ ತಂಡ ಆಸಕ್ತಿ ತೋರಲಿಲ್ಲ.

ದಸುನ್ ಶನಕ ಭರ್ಜರಿ ಬ್ಯಾಟಿಂಗ್

ಶ್ರೀಲಂಕಾ ತಂಡದ ನಾಯಕ ದಸುನ್ ಶನಕ ಟಿ20 ಮಾದರಿಯಲ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಹಲವು ಪಂದ್ಯಗಳಲ್ಲಿ ಶ್ರೀಲಂಕಾವನ್ನು ಏಕಾಂಗಿಯಾಗಿ ಗೆಲ್ಲಿಸಿದ್ದಾರೆ.

18 ಎಸೆತಗಳಲ್ಲಿ 33 ರನ್ ಸಿಡಿಸಿ ಏಷ್ಯಾಕಪ್‌ನಲ್ಲಿ ಭಾರತದ ಸೋಲಿಗೆ ಕಾರಣವಾಗಿದ್ದರು. ಅಲ್ಲದೆ ಇತ್ತೀಚೆಗೆ ನಡೆದ ಭಾರತದ ವಿರುದ್ಧದ ಸರಣಿಯಲ್ಲಿ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಇಷ್ಟೆಲ್ಲಾ ಉತ್ತಮ ಪ್ರದರ್ಶನ ನೀಡಿದರೂ, ಶನಕ ಅವರನ್ನು ಯಾವುದೇ ತಂಡ ಮಿನಿ ಹರಾಜಿನಲ್ಲಿ ಖರೀದಿಸಲಿಲ್ಲ.

ಆಲ್‌ರೌಂಡರ್ ಮೆಹಿದಿ ಹಸನ್

ಬಾಂಗ್ಲಾದೇಶದ ಆಲ್‌ರೌಂಡರ್ ಮೆಹಿದಿ ಹಸನ್ ಮಿರಾಜ್ 2022ರ ನವೆಂಬರ್ -ಡಿಸೆಂಬರ್ ತಿಂಗಳಿನಲ್ಲಿ ನಡೆದ ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ ಮಿಂಚಿದ್ದರು. ಬಾಂಗ್ಲಾದೇಶ 2-1 ಅಂತರದಲ್ಲಿ ಸರಣಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಮಿರಾಜ್ ಶತಕ ಗಳಿಸಿದ್ದರು. ಮೊದಲನೇ ಪಂದ್ಯದಲ್ಲಿ ಕೂಡ 39 ಎಸೆತಗಳಲ್ಲಿ ಅಜೇಯ 38 ರನ್ ಗಳಿಸಿ ತಂಡದ ಗೆಲುವಿಗೆ ಕಾರಣವಾಗಿದ್ದರು.

ಬಾಂಗ್ಲಾದೇಶದ ಪರವಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಬ್ಯಾಟಿಂಗ್ ಮಾತ್ರವಲ್ಲ ಬೌಲಿಂಗ್‌ನಲ್ಲಿ ಕೂಡ ಉತ್ತಮ ಪ್ರದರ್ಶನ ನೀಡಿದರೂ, ಅವರನ್ನು ಕೊಳ್ಳಲು ಐಪಿಎಲ್‌ನ ಯಾವೊಂದು ಫ್ರಾಂಚೈಸಿ ಕೂಡ ಆಸಕ್ತಿ ತೋರಿಸಲಿಲ್ಲ.

ಐಪಿಎಲ್‌ನಲ್ಲಿ ಹರಾಜಾಗದ ಟಾಮ್ ಲಾಥಮ್

ನ್ಯೂಜಿಲೆಂಡ್‌ನ ವಿಕೆಟ್ ಕೀಪರ್ ಬ್ಯಾಟರ್ ಟಾಮ್ ಲಾಥಮ್ ಭಾರತದ ವಿರುದ್ಧ ಉತ್ತಮ ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. 2022ರ ನವೆಂಬರ್ ನಲ್ಲಿ ಭಾರತ ನ್ಯೂಜಿಲೆಂಡ್ ಪ್ರವಾಸದ ವೇಳೆ ಲಾಥಮ್ ಉತ್ತಮ ಪ್ರದರ್ಶನ ನೀಡಿದ್ದರು.

ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ 104 ಎಸೆತಗಳಲ್ಲಿ 145 ರನ್ ಗಳಿಸಿ ನ್ಯೂಜಿಲೆಂಡ್‌ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಸದ್ಯ ನ್ಯೂಜಿಲೆಂಡ್ ಭಾರತದ ಪ್ರವಾಸದಲ್ಲಿದ್ದು, ಟಾಮ್ ಲಾಥಮ್ ನ್ಯೂಜಿಲೆಂಡ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಉತ್ತಮ ರನ್ ಗಳಿಸಿದ ಹೊರತಾಗಿಯೂ ಟಾಮ್ ಲಾಥಮ್‌ರನ್ನು ಯಾವೊಂದು ಫ್ರಾಂಚೈಸಿ ಕೂಡ ಖರೀದಿ ಮಾಡಲಿಲ್ಲ.

ವೇಗದ ಬೌಲರ್ ವೇಯ್ನ್ ಪಾರ್ನೆಲ್

ದಕ್ಷಿಣ ಆಫ್ರಿಕಾದ ವೇಗಿ ವೇಯ್ನ್ ಪಾರ್ನೆಲ್ 2015ರ ಐಪಿಎಲ್ ಆವೃತ್ತಿಯಿಂದ ಯಾವುದೇ ತಂಡಕ್ಕೆ ಸೇರಲು ಸಾಧ್ಯವಾಗಿಲ್ಲ. ವಿಶ್ವದ ಇತರೆ ಲೀಗ್‌ಗಳಲ್ಲಿ ಅವರು ನಿಯಮಿತವಾಗಿ ಅವಕಾಶ ಪಡೆಯುತ್ತಿದ್ದಾರೆ. ದಕ್ಷಿಣ ಆಫ್ರಿಕಾ ತಂಡದಲ್ಲಿ ಕೂಡ ಸತತವಾಗಿ ಆಡುತ್ತಿದ್ದು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

2022ರ ಟಿ20 ವಿಶ್ವಕಪ್‌ನಲ್ಲಿ ಪಾರ್ನೆಲ್ ಭಾರತದ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. 4 ಓವರ್ ಬೌಲಿಂಗ್ ಮಾಡಿದ್ದ ಅವರು 1 ಮೇಡನ್ ಓವರ್ ಸಹಿತ 15 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದಿದ್ದರು. ಅವರು ಸೂರ್ಯಕುಮಾರ್ ಯಾದವ್, ದಿನೇಶ್ ಕಾರ್ತಿಕ್ ಮತ್ತು ರವಿಚಂದ್ರನ್ ಅಶ್ವಿನ್ ವಿಕೆಟ್ ಪಡೆದು ಮಿಂಚಿದ್ದರು. ಅತ್ಯುತ್ತಮ ಪ್ರದರ್ಶನ ನೀಡಿದರೂ ಕೂಡ ಅವರು ಐಪಿಎಲ್‌ ಮಿನಿ ಹರಾಜಿನಲ್ಲಿ ಹರಾಜಾಗದೆ ಉಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannad

Please follow and like us:

Leave a Reply

Your email address will not be published. Required fields are marked *

Next Post

ಮರಕ್ಕೆ ಕಾರು ಡಿಕ್ಕಿ.

Sat Jan 21 , 2023
ಚಿಕ್ಕಮಗಳೂರು: ಅಜ್ಜಂಪುರದ ಮಾಕನಹಳ್ಳಿಯಲ್ಲಿ ಚಾಲಕನ ನಿಯಂತ್ರಣತಪ್ಪಿ ಮರಕ್ಕೆ ಕಾರು ಡಿಕ್ಕಿಯಾಗಿದ್ದು, ಮೆಸ್ಕಾಂನ ಜೆಇ ಸೇರಿ ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದ ಕಿರಣ್(32) ಹಾಗೂ ಅಜ್ಜಂಪುರ ತಾಲೂಕಿನ ಶಿವನಿ ಮೂಲದ ನಾಗರಾಜ್ (40) ಮೃತ ದುರ್ದೈವಿಗಳು. ಕಿರಣ್​ ಶಿವನಿ ಮೆಸ್ಕಾಂನಲ್ಲಿ ಜೆಇ ಆಗಿ ಕೆಲಸ ಮಾಡುತ್ತಿದ್ದರು. ಫೆ.8ರಂದು ಕಿರಣ್​ಗೆ ಮದುವೆ ನಿಗದಿಯಾಗಿತ್ತು. ಎಲ್ಲವೂ ಚೆನ್ನಾಗಿದ್ದರೆ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟುತ್ತಿದ್ದು. ಆದರೆ ಇವರ ಬಾಳಲ್ಲಿ ವಿಧಿ ಆಟವಾಡಿಬಿಟ್ಟಿದೆ. ಮದುವೆ ಸಂಭ್ರಮದಲ್ಲಿ […]

Advertisement

Wordpress Social Share Plugin powered by Ultimatelysocial