ರೂಟ್ಟಿ ಮೃದುವಾಗಿ ಬರಲು ಹೀಗೆ ಮಾಡಿ ನೋಡಿ.

ಕೆಲವೊಮ್ಮೆ ಪ್ರಯಾಣಕ್ಕೆ ಚಪಾತಿ ಮಾಡಿಕೊಳ್ಳುವಾಗ ಅದೆಷ್ಟೇ ಎಣ್ಣೆ ಹಾಕಿ ಮಾಡಿ ಕೊಂಡರು ಗಟ್ಟಿಯಾಗುವುದು ಸಾಮಾನ್ಯ. ಪ್ರಯಾಣದಲ್ಲಿ ಅತೀ ಹೆಚ್ಚು ಎಣ್ಣೆ ಪದಾರ್ಥಗಳು ಕೂಡ ಬೇಡ ಎನ್ನುವವರು ಇರುತ್ತಾರೆ. ಆದರೆ ಚಪಾತಿ ಮೃಧುವಾಗಿ ಎರಡು ದಿನ ಆದರೂ ಮೆತ್ತಗೆ ಇರುವ ಪ್ರಯತ್ನ ಹಲವಾರು ಈ ರೀತಿ ಕೂಡ ಮಾಡಬಹುದು ಗೋಧಿಹಿಟ್ಟಿಗೆ 2.3 ಸ್ಪೂನ್ ಕಡಲೆಹಿಟ್ಟನ್ನು ಹಾಕಿ ಚೆನ್ನಾಗಿ ಎಣ್ಣೆ ಹಾಕಿ ಕಲಸಿ ಚಪಾತಿ ಲಟ್ಟಿಸಿದರೆ ಮಾಡಿದ ಚಪಾತಿ ಎರಡು ದಿನವಾದರೂ ಗಟ್ಟಿಯಾಗದೆ ಮೃದುವಾಗಿ, ಪದರಪದರವಾಗಿ,ರುಚಿಯಾಗಿರುತ್ತದೆ..ಗೋಧಿಯನ್ನು ಮಿಲ್ ಮಾಡಿಸುವಾಗ,, 2ಕೆಜಿ ಗೋದಿಗೆ 50 ಗ್ರಾಂ ಸಬ್ಬಕ್ಕಿಯನ್ನು,ಹಾಕಿ ಸ್ವಲ್ಪ ಕಲ್ಲುಪ್ಪನ್ನು ಹಾಕಿ ಹಿಟ್ಟು ಮಾಡಿಸಿದರೆ ಚಪಾತಿ ಅತಿ ಮೃದುವಾಗಿಯೂ ಬರುತ್ತದೆ.ಕೆಲವು ಮಕ್ಕಳಿಗೆ ಚಪಾತಿ ತಿಂದರೆ ಉಷ್ಣ ವಾಗುತ್ತದೆ ಎಂಬುದು.ಅವರಿಗೂ ಕೂಡ ಈ ರೀತಿ ಮಾಡಿ ಕೊಟ್ಟರೆ ತಂಪಾಗಿರುತ್ತದೆ ಮತ್ತು ಬೇಗ ಜೀರ್ಣವಾಗುತ್ತದೆ..ಮಸಾಲೆ ಚಪಾತಿಯನ್ನು ಕೂಡ ಮಾಡಿಕೊಳ್ಳಬಹುದು.ಗೋಧಿಹಿಟ್ಟಿಗೆ ಸ್ವಲ್ಪ ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ, ಜೀರಿಗೆ ಪುಡಿ 1 ಸ್ಪೂನ್, ಚಿಲ್ಲಿ ಪೌಡರ್ ಒಂದೆರಡು ಸ್ಪೂನ್ ಸ್ವಲ್ಪ ಹರಿಶಿಣ, ಕೊತ್ತಂಬರಿ ಸೊಪ್ಪು, ಮೆಂತ್ಯಸೊಪ್ಪು,,,ಸ್ವಲ್ಪ ಗರಂ ಮಸಾಲೆ ಎಲ್ಲವನ್ನು ಹಾಕಿ ಕಲಿಸಿಟ್ಟು ಚಪಾತಿ ಮಾಡಿದರೆ..ಪ್ರಯಾಣದಲ್ಲಿ ಚಪಾತಿಗೆ ನಂಚಿಕೊಳ್ಳಲು ಬೇರೆ ಏನು ಬೇಕಾಗುವುದಿಲ್ಲ.
ರುಚಿಯಾದ ಮತ್ತು ಮೃದುವಾದ ಚಪಾತಿಯು ಕೂಡ ಸಿದ್ಧವಾಗುತ್ತದೆ.. ಮಾಡಿನೋಡಿ. ✍️✍️✍️ಯಶುಪ್ರಸಾದ್✍️✍️

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗುಡ್ಡಕ್ಕೆ ಬೆಂಕಿ ಹೊತ್ತಿಕೊಂಡು, ಗುಡ್ಡದಲ್ಲಿನ ಗಿಡಮರಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.

Tue Feb 1 , 2022
ಲಕ್ಷ್ಮೇಶ್ವರ ತಾಲೂಕಿನ ಅಕ್ಕಿಗುಂದ ಗ್ರಾಮದ ಗುಡ್ಡಕ್ಕೆ ಸೋಮುವಾರ ರಾತ್ರಿ ಬೆಂಕಿ ಹೊತ್ತಿಕೊಂಡಿದ್ದು , ಗುಡ್ಡದಲ್ಲಿನ ಗಿಡಮರಗಳು ಸುಟ್ಟು ಕರಕಲಾಗಿವೆ. ನೂರಾರೂ ಎಕರೆಯಲ್ಲಿರುವ ಗುಡ್ಡವು ಕುರುಚಲು ಕಾಡಿನಿಂದ ಕೂಡಿದೆ.ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಗುಡ್ಡಕ್ಕೆ ಅಗ್ನಿಶಾಮಕ ವಾಹನದೊಂದಿಗೆ ಬಂದು ಬೆಂಕಿ ನಂದಿಸಲು ಹರಸಹಾಸ ಪಟ್ಟರು. ಆದರೆ, ಗಾಳಿಯ ವೇಗಕ್ಕೆ ಬೆಂಕಿ ವಿಸ್ತಾರಗೊಳ್ಳುತ್ತಲೇ ಇತ್ತು, ಅಧಿಕಾರಿಗಳೊಂದಿಗೆ ಅಕ್ಕಿಗುಂದ ಹಾಗೂ ಅಕ್ಕಿಗುಂದ ತಾಂಡಾದ ನಿವಾಸಿಗಳು ಸಹಕಾರದಿಂದ ಅಂತಿಮವಾಗಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.ಹಾವು, ಹಲ್ಲಿ, […]

Advertisement

Wordpress Social Share Plugin powered by Ultimatelysocial