ಗುಡ್ಡಕ್ಕೆ ಬೆಂಕಿ ಹೊತ್ತಿಕೊಂಡು, ಗುಡ್ಡದಲ್ಲಿನ ಗಿಡಮರಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.

ಲಕ್ಷ್ಮೇಶ್ವರ ತಾಲೂಕಿನ ಅಕ್ಕಿಗುಂದ ಗ್ರಾಮದ ಗುಡ್ಡಕ್ಕೆ ಸೋಮುವಾರ ರಾತ್ರಿ ಬೆಂಕಿ ಹೊತ್ತಿಕೊಂಡಿದ್ದು , ಗುಡ್ಡದಲ್ಲಿನ ಗಿಡಮರಗಳು ಸುಟ್ಟು ಕರಕಲಾಗಿವೆ. ನೂರಾರೂ ಎಕರೆಯಲ್ಲಿರುವ ಗುಡ್ಡವು ಕುರುಚಲು ಕಾಡಿನಿಂದ ಕೂಡಿದೆ.ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಗುಡ್ಡಕ್ಕೆ ಅಗ್ನಿಶಾಮಕ ವಾಹನದೊಂದಿಗೆ ಬಂದು ಬೆಂಕಿ ನಂದಿಸಲು ಹರಸಹಾಸ ಪಟ್ಟರು. ಆದರೆ, ಗಾಳಿಯ ವೇಗಕ್ಕೆ ಬೆಂಕಿ ವಿಸ್ತಾರಗೊಳ್ಳುತ್ತಲೇ ಇತ್ತು, ಅಧಿಕಾರಿಗಳೊಂದಿಗೆ ಅಕ್ಕಿಗುಂದ ಹಾಗೂ ಅಕ್ಕಿಗುಂದ ತಾಂಡಾದ ನಿವಾಸಿಗಳು ಸಹಕಾರದಿಂದ ಅಂತಿಮವಾಗಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.ಹಾವು, ಹಲ್ಲಿ, ಮೊಲ, ಜಿಂಕೆ, ನರಿ, ಕತ್ತಿಕಿರುಬ, ಹೆಬ್ಬಾವು, ವಿವಿಧ ಜಾತಿಯ ಪ್ರಾಣಿ – ಪಕ್ಷಿಗಳು ಇಲ್ಲಿ ವಾಸಿಸುತ್ತಿವೆ. ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿರುದರಿಂದ ಅವುಗಳ ಪ್ರಾಣಕ್ಕೆ ಆಪತ್ತು ಬಂದಿದೆ. ಸತತ ಮಳೆಯಿಂದಾಗಿ ಗುಡ್ಡದಲ್ಲಿ ಸೊಗಸಾಗಿ ಬೆಳೆದಿದ್ದ ಹುಲ್ಲು ಜಾನುವಾರುಗಳಿಗೆ ಬಹಳಷ್ಟು ಅನುಕೂಲವಾಗಿತ್ತು. ಬೆಂಕಿಯಿಂದಾಗಿ ಹುಲ್ಲು ಸುಟ್ಟು ಬೂದಿಯಾಗಿರುವುದು ಸುತ್ತಮುತ್ತಲಿನ ರೈತರನ್ನು ಚಿಂತಗೀಡ ಮಾಡಿದ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾರ್ಗ ಬದಲಾವಣೆ: ಹುಬ್ಬಳ್ಳಿ ರೈಲು ರದ್ದು,

Tue Feb 1 , 2022
ಹುಬ್ಬಳ್ಳಿ: ಇಲ್ಲಿನ ಸಂಶಿ- ಯಲವಿಗಿ ಮಾರ್ಗದಲ್ಲಿ ಕಾಮಗಾರಿ ನಡೆದಿರುವುದರಿಂದ ಕೆಳಗಿನ ರೈಲ್ವೆ ಸೇವೆಗಳಲ್ಲಿ ಬದಲಾವಣೆ ಮಾಡಲಾಗಿದೆ.ಫೆ.4 ರಿಂದ 12ರವರೆಗೆ ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮೀಜಿ ನಿಲ್ದಾಣದಿಂದ ಹೊರಡುವ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ-ಚಿತ್ರದುರ್ಗ ಎಕ್ಸ್ ಪ್ರೆಸ್‌ (ರೈಲು ಸಂಖ್ಯೆ 07347) ಹಾಗೂ ಚಿತ್ರದುರ್ಗ- ಹುಬ್ಬಳ್ಳಿ ಎಕ್ಸ್ ಪ್ರೆಸ್‌ (07348) ರೈಲಿನ ಸೇವೆ ರದ್ದುಗೊಳಿಸಲಾಗಿದೆ.ಫೆ.4 ರಿಂದ ಫೆ.11ರವರೆಗೆ ಅರಸೀಕೆರೆ-ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿತ್ಯ ವಿಶೇಷ ಪ್ಯಾಸೆಂಜರ್‌ (07367) ಹುಬ್ಬಳ್ಳಿ-ಅರಸೀಕೆರೆ (07638) ರೈಲಿನ ಸೇವೆ ರದ್ದಾಗಿದೆ.ಫೆ.4 […]

Advertisement

Wordpress Social Share Plugin powered by Ultimatelysocial