ಕೂದಲು ಉದುರುವಿಕೆ ಎಲ್ಲರನ್ನೂ ಕಾಡುವ ಸಮಸ್ಯೆ.

 

ಕೂದಲು ಉದುರುವಿಕೆ ಎಲ್ಲರನ್ನೂ ಕಾಡುವ ಸಮಸ್ಯೆ. ಬೆಳಗ್ಗೆ ಎದ್ದ ತಕ್ಷಣ ತಲೆದಿಂಬಿನ ಮೇಲೆ ಉದುರಿದ ಕೂದಲು ನೋಡಿದ್ರೆ ಆತಂಕವಾಗೋದು ಸಹಜ. ಮುಂದಿನ ವರ್ಷ ಇಷ್ಟೊತ್ತಿಗೆ ಕೂದಲು ಪೂರ್ತಿ ಉದುರಿ ಬೋಳಾಗಿಬಿಡುತ್ತೇನೋ ಅಂತಾನೇ ಎಲ್ಲರೂ ಟೆನ್ಷನ್ ಮಾಡಿಕೊಳ್ತಾರೆ.

ಕೂದಲು ಉದುರುವಿಕೆಗೆ ಜೆನೆಟಿಕ್ಸ್ ಜೊತೆಗೆ ಇನ್ನೂ ಕೆಲವು ಕಾರಣಗಳಿವೆ. ನಿಮ್ಮ ಕೂದಲ ಆರೈಕೆಯ ಕೆಲವೊಂದು ಹವ್ಯಾಸಗಳೇ ಮಾರಕವಾಗಬಹುದು. ಅವು ಯಾವುದು ಅನ್ನೋದನ್ನು ನೋಡೋಣ.

ಬಿಗಿಯಾಗಿ ಹೇರ್ ಬ್ಯಾಂಡ್ ಹಾಕುವುದು : ಬೆಳಗ್ಗೆ ಎದ್ದ ತಕ್ಷಣ ಎಲ್ರೂ ಕೂದಲನ್ನು ಹೇರ್ ಬ್ಯಾಂಡ್ ನಿಂದ ಗಟ್ಟಿಯಾಗಿ ಬಿಗಿದು ಬಿಡ್ತಾರೆ. ಈ ಅಭ್ಯಾಸ ಒಳ್ಳೆಯದಲ್ಲ. ಯಾಕಂದ್ರೆ ಕೂದಲಿನ ಬುಡ ಅಷ್ಟೊಂದು ಗಟ್ಟಿಯಾಗಿರುವುದಿಲ್ಲ. ನಿಧಾನವಾಗಿ ಕೂದಲನ್ನು ಒಟ್ಟುಗೂಡಿಸಿ, ಸಡಿಲವಾದ ಹೇರ್ ಬ್ಯಾಂಡ್ ಹಾಕಿ.

ಅತಿಯಾದ ಒತ್ತಡ : ಅತಿಯಾದ ಕೂದಲು ಉದುರುವಿಕೆಗೆ ಒತ್ತಡ ಕೂಡ ಕಾರಣ. ಆದ್ರೆ ಇದು ತಾತ್ಕಾಲಿಕ. ಟೆಲೋಜಿನ್ ಎಫ್ಲುವಿಯಮ್ ಅಂತಾ ಇದನ್ನು ಕರೆಯಲಾಗುತ್ತದೆ. ಈ ರೀತಿ ಒತ್ತಡದಿಂದ ಕೂದಲು ಉದುರುವಿಕೆ ಕೆಲವು ವಾರ ಅಥವಾ ತಿಂಗಳುಗಳ ವರೆಗೆ ಇರಬಹುದು. ಚೆನ್ನಾಗಿ ರಿಲ್ಯಾಕ್ಸ್ ಮಾಡಿ, ಧ್ಯಾನ, ಪ್ರಾಣಾಯಾಮ ಮಾಡಿದ್ರೆ ಅದೇ ಇದಕ್ಕೆ ಉತ್ತಮ ಚಿಕಿತ್ಸೆ.

ಕೂದಲು ಬಾಚುವಿಕೆ : ನೂರು ಬಾರಿ ಕೂದಲನ್ನು ಬಾಚಿದಾಕ್ಷಣ ಅದು ಹೊಳೆಯಲಾರಂಭಿಸುತ್ತದೆ ಎಂಬ ಭ್ರಮೆ ಬೇಡ. ಕೂದಲನ್ನು ನಯವಾಗಿ ಬಾಚುವುದನ್ನು ಅಭ್ಯಾಸ ಮಾಡಿಕೊಳ್ಳಿ. ಒರಟು ಒರಟಾಗಿ ಎಳೆದಾಡಿ ಬಾಚಿಕೊಳ್ಳುವುದರಿಂದ ಕೂದಲ ಬುಡಕ್ಕೆ ಹಾನಿಯಾಗುತ್ತದೆ. ಇದರಿಂದ ಉದುರುವಿಕೆ ಹೆಚ್ಚಾಗಬಹುದು. ಸ್ಪ್ಲಿಟ್ ಹೇರ್ ಗೆ ಇದೂ ಒಂದು ಕಾರಣ.

ಹಾರ್ಮೋನ್ ಅಸಮತೋಲನ : ದೇಹದಲ್ಲಿನ ಹಾರ್ಮೋನ್ ಅಸಮತೋಲನದಿಂದ್ಲೂ ಕೂದಲು ಉದುರುತ್ತದೆ. ಹಾರ್ಮೋನ್ ಏರಿಳಿತಕ್ಕೆ ತಕ್ಕಂತೆ ನಿಮ್ಮ ಕೂದಲು ಮೃದು ಮತ್ತು ಒರಟಾಗುತ್ತದೆ. ರುತುಚಕ್ರ, ಗರ್ಭಾವಸ್ಥೆಯ ಸಮಯದಲ್ಲಿ ಕೂದಲು ಉದುರಬಹುದು. ಪಿಸಿಓಡಿ ಸಮಸ್ಯೆಯಿದ್ದರೂ ಕೂದಲು ಉದುರಬಹುದು. ತಕ್ಷಣ ವೈದ್ಯರನ್ನು ಭೇಟಿ ಮಾಡಿ ಪರಿಹಾರ ಪಡೆಯಿರಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಭಾರಿ ಮಳೆ:

Sun May 8 , 2022
ಬೆಂಗಳೂರು: ದಕ್ಷಿಣ ಅಂಡಮಾನ್ ಸಮುದ್ರದ ಮೇಲೆ ಉಂಟಾಗಿರುವ ವಾ ಯುಭಾರ ಕುಸಿತದ ಹಿನ್ನಲೆಯಲ್ಲಿ, ಚಂಡಮಾರುತ ಉಂಟಾಗಿದ್ದು, ಕರ್ನಾಟಕ ಸೇರಿದಂತೆ ಪೂರ್ವ ಮತ್ತು ಈಶಾನ್ಯ ಭಾರತಕ್ಕೆ ಮತ್ತು ಕೇರಳ ಮತ್ತು ತಮಿಳುನಾಡಿನ ಹಲವಾರು ಭಾಗಗಳಿಗೆ ಗುರುವಾರ ಹೇರಳವಾದ ಮಳೆಯಾಗಲಿದೆ ಎನ್ನಲಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಮುಂದಿನ ಐದು ದಿನಗಳಲ್ಲಿ ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ ರಾಜ್ಯಗಳಲ್ಲಿ ಸಾಕಷ್ಟು ವ್ಯಾಪಕವಾದ ಬೆಳಕಿನಿಂದ ಸಾಧಾರಣ […]

Advertisement

Wordpress Social Share Plugin powered by Ultimatelysocial