ಐಪಿಎಸ್ ರೂಪಾ.ಡಿ-ಸಾಮಾಜಿಕ ಕಾರ್ಯಕರ್ತನ ಗಂಗರಾಜು ನಡುವಿನ ಸಂಭಾಷಣೆ ಆಡಿಯೋ ವೈರಲ್: ಈ ಬಗ್ಗೆ ಅವರು ಹೇಳಿದ್ದೇನು ಗೊತ್ತಾ?

ಬೆಂಗಳೂರು: ಐಪಿಎಸ್ ಅಧಿಕಾರಿ ರೂಪಾ.ಡಿ ಹಾಗೂ ಸಾಮಾಜಿಕ ಕಾರ್ಯಕರ್ತ ಗಂಗರಾಜು ನಡುವಿನ ಆಡಿಯೋ ಸಂಭಾಷಣೆ ವೈರಲ್ ಆಗಿದೆ. ಈ ಆಡಿಯೋ ವೈರಲ್ ಬೆನ್ನಲ್ಲೇ ಗಂಗರಾಜು ಸುದ್ದಿಗಾರರೊಂದಿಗೆ ಮಾತನಾಡಿದ್ದು, ಏನು ಹೇಳಿದ್ರು ಅಂತ ಮುಂದೆ ಓದಿ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಸಾಮಾಜಿಕ ಕಾರ್ಯಕರ್ತ ಗಂಗರಾಜು ಅವರು, ಕಳೆದ ತಿಂಗಳು 30ರಂದು ರೂಪಾ ನನಗೆ ಪೋನ್ ಮಾಡಿದ್ದರು. ನನ್ನ ಜೊತೆ 25 ನಿಮಿಷ ಮಾತನಾಡಿದ್ದಾರೆ. ರೂಪಾ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ದೂರು ನೀಡುತ್ತೇನೆ ಎಂದರು.

ರೋಹಿಣಿ ಸಿಂಧೂರಿ ಅಕ್ರಮಗಳ ಬಗ್ಗೆ ನನ್ನ ಬಳಿ ಸಾಕಷ್ಟು ದಾಖಲೆ ಇವೆ. ಅವರ ವಿರುದ್ಧ ದೂರು ನೀಡುವಂತೆ ನನಗೆ ರೂಪಾ ಹೇಳಿದ್ದರು. ನಾನು ಅದಕ್ಕೆ ನಿರಾಕರಿಸಿದೆ. ಇದರಿಂದ ಕೋಪಗೊಂಡ ಅವರು ನನ್ನನ್ನು ನಿಂದಿಸಿದ್ದಾರೆ ಎಂದು ಹೇಳಿದರು.

ನಾನು ಅನ್ಯಾಯ ಮಾಡಿದವರ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಆ ಹೋರಾಟ ನಿರಂತರವಾಗಿ ಇರಲಿದೆ. ಹಾಗಂತ ಈಕೆ ಹೇಳಿದ್ದಾರೆಂದು ನಾನು ರೋಹಿಣಿ ಸಿಂಧೂರಿ ವಿರುದ್ಧ ದೂರು ಕೊಡೋದಕ್ಕೆ ಆಗುತ್ತಾ ಎಂಬುದಾಗಿ ಐಪಿಎಸ್ ಅಧಿಕಾರಿ ರೂಪಾ.ಡಿ ವಿರುದ್ಧ ವಾಗ್ಧಾಳಿ ನಡೆಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇನ್ಮುಂದೆ ಪೊಲೀಸರು ತಮ್ಮ ವಾಟ್ಸಾಪ್ ಡಿಪಿಗೆ ಪೋಟೊ ಹಾಕುವಂತಿಲ್ಲ.

Wed Feb 22 , 2023
  ಇನ್ಮುಂದೆ ಪೊಲೀಸರು ತಮ್ಮ ವಾಟ್ಸಾಪ್ ಡಿಪಿಗೆ ಪೋಟೊ ಹಾಕುವಂತಿಲ್ಲ. ಮೊಬೈಲ್ ಗೆ ಕಾಲ್ ಬಂದು ರಿಸೀವ್ ಮಾಡಿಲ್ಲ ಅಂದ್ರೂ ಉಂಟಾಗಲಿದೆ ಸಂಕಷ್ಟ. ಬೆಂಗಳೂರು ಆಗ್ನೇಯ ವಿಭಾಗದಲ್ಲಿ ವಿನೂತನ ಪ್ರಯತ್ನ. ಹಾಗಿದ್ರೆ ಈ ವ್ಯಾಟ್ಸಾಪ್ ಡಿಪಿಗೂ, ಫೋನ್ ರಿಸೀವ್ ಮಾಡದೆ ಇರೋದಿಕ್ಕೂ ಏನ್ ಸಂಬಂಧ. ಬೆಂಗಳೂರು ಆಗ್ನೇಯ ಪೊಲೀಸರಿಗೆ ಹೀಗೊಂದು ಖಡಕ್ ಸೂಚನೆ. ವಾಟ್ಸಪ್ ಡಿಪಿಗೆ ಪೋಟೊ ಸೇರಿದಂತೆ ಯಾವುದೇ ಪಿಕ್ಚರ್ ಹಾಕುವಂತಿಲ್ಲ. ಸಿಲಿಕಾನ್ ಸಿಟಿ ಪೊಲೀಸರಿಗೆ ನಾಳೆಯಿಂದ ಹೊಸ […]

Advertisement

Wordpress Social Share Plugin powered by Ultimatelysocial