ಕಮಲ ಮತ್ತು ದಳಕ್ಕೆ, “ಕೈ” ನಾಯಕ ಲೇಫ್ಟ್ ರೈಟ್..!

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಕಾಂಗ್ರೆಸ್‌ನ ನಾಯಕಯ ರಾಮಲಿಂಗಾರೆಡ್ಡಿ ತಿರುಗೇಟು..!

ಕಾಂಗ್ರೆಸ್ ಪಕ್ಷದ ದಲಿತ ನಾಯಕರ ಸೋಲಿಗೆ ಅವರೇ ಕಾರಣ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯರಿಗೆ ನಮ್ಮ ಪಕ್ಷದ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಕಾಂಗ್ರೆಸ್‌ನ ನಾಯಕಯ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ… ನಾವು ಯಾವುದೇ ಒಂದು ಸಮುದಾಯವನ್ನ ಒಲೈಕೆ ಮಾಡೋದಿಲ್ಲ  ಜೆಡಿಸ್‌ ಪಕ್ಷದಂತೆ ನಾವು ಕೆಲ ಸಮುದಾಯಗಳಿಗೆ ಮಾತ್ರ ಸೀಮಿತವಾಗಿಲ್ಲ ಕಾಂಗ್ರೆಸ್‌ ಪಕ್ಷ ಸ್ವಾತಂತ್ರ್ಯ  ಬಂದಾಗಲಿಂದಲೂ ಸರ್ವ ಜನಾಂಗಗಳ ಏಳಿಗೆಗಾಗಿಯೇ ಶ್ರಮಿಸಿದೆ ಮುಂದೆಯೂ ಕೂಡ ಶ್ರಮಿಸುತ್ತಲೇ ಇರುತ್ತೆ ಎಂದು ಕಾಂಗ್ರೆಸ್‌ ನ ನಾಯಕ ರಾಮಲಿಂಗಾರೆಡ್ಡಿ ಹೆಚ್ ಡಿ ಕುಮಾರಸ್ವಾಮಿ ಗೆ ತಿರುಗೇಟನ್ನು ನೀಡಿದ್ದಾರೆ…

ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುತ್ತೆ ಈಶ್ವರಪ್ಪಗೆ “ಕೈ” ನಾಯಕ ಸವಾಲ್‌..!

ಹೌದು  ಮುಂದಿನ ವಿಧಾನಸಭೆ ಚುನಾವಣೆ ಬರುವಷ್ಟರಲ್ಲಿ ಕಾಂಗ್ರೆಸ್‌ ಎರೆಡು ಭಾಗವಾಗಿ ಇಬ್ಬಾಗವಾಗುತ್ತೆ ಎಂದು ಕೆಎಸ್‌ ಈಶ್ವರಪ್ಪ ಹೇಳಿಕೆಗೆ ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಈಶ್ವರಪ್ಪ ವಿರುದ್ಧ ಕಿಡಿ ಕಾರಿದ್ದಾರೆ.. ಕಾಂಗ್ರೆಸ್‌ ಪಕ್ಷ ಒಂದಲ್ಲ ಒಂದು  ದಿನ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೆ..ಕಾಂಗ್ರೆಸ್‌ ಪಕ್ಷ ಸಾಯೋದು ಬದುಕೋದು ಬೇರೆ ಪ್ರಶ್ನೆ ಕಾಂಗ್ರೆಸ್‌ ಪಕ್ಷವನ್ನು ಜನರು ಸಾವಿರಾರು ವರ್ಷಗಳ ಕಾಲ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ…ಕಾಂಗ್ರೆಸ್‌ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಂತಹ ಪಕ್ಷ ನಮ್ಮದು ದೇಶವನ್ನು ಬಲಿಷ್ಠವಾಗಿ ಕಟ್ಟಿದಂತಹ ಪಕ್ಷ ಕಾಂಗ್ರೆಸ್, ಆಸ್ತಿಪಾಸ್ತಿ ಪ್ರಾಣ ಕಳೆದುಕೊಂಡವರು ಕಾಂಗ್ರೆಸ್ ನವರು… ಚರಿತ್ರೆಯನ್ನು  ಓದಿದರೆ  ನಿಜವಾದ ದೇಶ ಭಕ್ತರು ಯಾರೆಂಬುದು ಗೊತ್ತಾಗುತ್ತೆ.ಎಂದು ಬಿಜೆಪಿ ಸರ್ಕಾರದ ವಿರುದ್ಧ ಕೆಂಡಾಮಂಡಲವಾದರು….

ಉತ್ತರ ಪ್ರದೇಶದಲ್ಲಿ “ಪ್ರಜಾಪ್ರಭುತ್ವ”ನೇ ಇಲ್ಲ ಕೈ ನಾಯಕ ಕಿಡಿ..!

ಉತ್ತರ ಪ್ರದೇಶದಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಬಿಜೆಪಿ ಸಚಿವನ ಪುತ್ರ ಕಾರು ಹತ್ತಿಸಿದ ವಿಷಯಕ್ಕೆ ರಾಮಲಿಂಗಾರೆಡ್ಡಿ ಅವರು ಬಿಜೆಪಿ ಸರ್ಕಾರವನ್ನು ಡಾನ್‌ ಗಲಿಗೆ ಹೋಲಿಸಿದ್ದಾರೆ..ಹೌದು ಉತ್ತರ ಪ್ರದೇಶದಲ್ಲಿ ಪ್ರಜಾಪ್ರಭುತ್ವ ಸತ್ತು ಹೋಗಿದೆ ಬಿಜೆಪಿ ಸರ್ಕಾರ ರೈತ ವಿರೋಧಿ ಸರ್ಕಾರ ರೈತ ವಿರೋಧಿ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿದೆ…ಇನ್ನು ಘಟನಾ ಸ್ಥಳಕ್ಕೆ ಕಾಂಗ್ರೆಸ್‌ ನ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಹೊದರೆ ಪೊಲೀಸರು ಅವರನ್ನು ತಡೆಯೋ ಪ್ರಯತ್ನ ಮಾಡ್ತಾರೆ… ಘಜ್ನಿ ಮೊಹಮ್ಮದ್‌ ದೇಶವನ್ನು  ಕೊಳ್ಳೆ ಹೊಡೆದರೆ ಈ ಬಿಜೆಪಿ ಸರ್ಕಾರ ದವರೂ ಕೂಡ ದೇಶದ ಸಂಪತ್ತನ್ನೇ ಮಾರ್ತಿದ್ದಾರೆ ಎಂದು ಬಿಜೆಪಿ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ…

 

Please follow and like us:

Leave a Reply

Your email address will not be published. Required fields are marked *

Next Post

ಶಿರಸಿ ಜಿಲ್ಲೆ ರಚನೆಗೆ ವೈಯಕ್ತಿಕ ಅಭ್ಯಂತರವಿಲ್ಲ: ಶಿವರಾಮ್‌ ಹೆಬ್ಬಾರ್

Tue Oct 5 , 2021
  ಉತ್ತರ ಕನ್ನಡ ಜಿಲ್ಲೆಯನ್ನು ವಿಭಜಿಸಿ ಶಿರಸಿ ಪ್ರತ್ಯೇಕ ಜಿಲ್ಲೆ ರಚಿಸಲು ವೈಯಕ್ತಿಕ ಅಭ್ಯಂತರವಿಲ್ಲ. ಆದರೆ, ಹೊಸ ಜಿಲ್ಲೆ ಇಬ್ಭಾಗಿಸುವ ಯಾವುದೇ ಪ್ರಸ್ತಾಪ ಸದ್ಯಕ್ಕೆ ಚರ್ಚೆಗೆ ಬಂದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಜಿಲ್ಲೆಯನ್ನು ಇಬ್ಭಾಗಿಸುವ ಮುನ್ನ ಪಕ್ಷಾತೀತವಾಗಿ ವಿವಿಧ ಕ್ಷೇತ್ರಗಳ ಪ್ರಮುಖರ ಜತೆ ಚರ್ಚೆ ನಡೆಸಬೇಕು. ಜನರ ಒಟ್ಟಾರೆ ಅಭಿಪ್ರಾಯ ಸಂಗ್ರಹವಾಗಬೇಕು. ಶಾಸಕರು, ಸಂಸದರು ಸೇರಿದಂತೆ ಜನಪ್ರತಿನಿಧಿಗಳ ಜತೆ ನಾನು […]

Advertisement

Wordpress Social Share Plugin powered by Ultimatelysocial