ಕರಾವಳಿ ಬೆಡಗಿ ಶುಭಪೂಂಜ ಮದುವೆ ..!

ಕರಾವಳಿ ಬೆಡಗಿ ಶುಭಪೂಂಜ ಡಿಸೆಂಬರ್‌ನಲ್ಲಿ ಮದುವೆ ಆಗುತ್ತಿದ್ದಾರೆ. ಹೌದು ಈ ಸುದ್ದಿಯನ್ನು ಸ್ವತಃ ಶುಭಪೂಂಜ ಅವರೇ ಸ್ಪಷ್ಟಪಡಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಅನೇಕ ಚಿತ್ರಗಳ ಮೂಲಕ ಗಮನ ಸೆಳೆದ ಶುಭಪೂಂಜ ಈಗ ಮದುವೆ ಆಗುವ ಖುಷಿಯಲ್ಲಿದ್ದಾರೆ.ಅಂದಹಾಗೆ, ಶುಭಪೂಂಜ ಅವರನ್ನು ಕೈ ಹಿಡಿಯುತ್ತಿರುವ ಹುಡುಗನ ಹೆಸರು ಸುಮಂತ್ ಬಿಲ್ಲವ. ಮೂಲತಃ ಕುಂದಾಪುರದ ವರಾಗಿರುವ ಸುಮಂತ್ ಬಿಲ್ಲವ ಜಯ ಕರ್ನಾಟಕ ಸಂಘಟನೆಯಲ್ಲಿ ಸೌತ್ ವಿಂಗ್ ಅಧ್ಯಕ್ಷರಾಗಿದ್ದಾರೆ. ಜೊತೆಗೆ ಕಮರ್ಷಿಯಲ್ ಗ್ಯಾಸ್ ಏಜೆನ್ಸಿಯೊಂದನ್ನು ನಡೆಸುತ್ತಿದ್ದಾರೆ. ಇವರೊಂದಿಗೆ ಶುಭಪೂಂಜ ವಿವಾಹ ಡಿಸೆಂಬರ್‌ನಲ್ಲಿ ನೆರವೇರಲಿದೆ.ಇನ್ನೂ ದಿನಾಂಕ ನಿಗದಿಯಾಗದ ಕಾರಣ, ಇಷ್ಟರಲ್ಲೇ ದಿನಾಂಕ ಘೋಷಣೆ ಮಾಡುವುದಾಗಿ ಶುಭಪೂಂಜ ತಿಳಿಸಿದ್ದಾರೆ. ಮುಂದಿನ ತಿಂಗಳು ಮಂಗಳೂರಿನಲ್ಲಿ ನಿಶ್ಚಿತಾರ್ಥ ನಡೆಯಲಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಮದುವೆಯನ್ನು ಡಿಸೆಂಬರ್ ವೇಳೆಗೆ ನಡೆಸಲು ಮನೆಯವರು ನಿರ್ಧರಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ತೈಲ ಬೆಲೆ ಏರಿಕೆ ವಿವೇಕಶೂನ್ಯವಾದುದು, ಸೋನಿಯಾ

Tue Jun 16 , 2020
  ತೈಲ ಬೆಲೆ ಏರಿಕೆಯನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ದೇಶದಲ್ಲಿ ಕೊರೊನಾ ವೈರಸ್ ವ್ಯಾಪಿಸಿರುವ ಈ ಸಂಕಷ್ಟದ ಸಮಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುವ ಸರ್ಕಾರದ ನಿರ್ಧಾರ ವಿವೇಕಶೂನ್ಯವಾದುದು ಎಂದು ಅವರು ಆರೋಪಿಸಿದ್ದಾರೆ. ದೇಶದ ಜನರು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವಾಗ, ಸರ್ಕಾರವು ತೈಲೋತ್ಪನ್ನಗಳ ಬೆಲೆ ಏರಿಸಿ, ಲಾಭ ಮಾಡಿಕೊಳ್ಳಬಾರದು ಎಂದಿದ್ದಾರೆ. ಡೀಸೆಲ್, […]

Related posts

Advertisement

Wordpress Social Share Plugin powered by Ultimatelysocial