ಕಾಂಗ್ರೆಸ್ ಸಂಸದ ರಾಹುಲ್‍ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಜಾಲಿಮೂಡ್‍ನಲ್ಲಿ

 

ವದೆಹಲಿ,ಫೆ.20- ಭಾರತ್ ಜೋಡೋ ಯಾತ್ರೆ ಯಶಸ್ವಿ ಗುಂಗಿನಲ್ಲಿರುವ ಕಾಂಗ್ರೆಸ್ ಸಂಸದ ರಾಹುಲ್‍ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ಜಾಲಿ ಮೂಡ್‍ನಲ್ಲಿದ್ದಾರೆ.

ಸಹೋದರಿ ಪ್ರಿಯಾಂಕಾ ಅವರೊಂದಿಗೆ ಜಮ್ಮು-ಕಾಶ್ಮೀರದ ಗುಲ್ಮಾರ್ಗ್‍ನಲ್ಲಿರುವ ರಾಹುಲ್‍ಗಾಂಧಿ ಅವರು ಹಿಮ ವಾಹನದಲ್ಲಿ ಸವಾರಿ ಮಾಡುತ್ತಿರುವ ವಿಡಿಯೋ ತುಣುಕಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ರಾಹುಲ್‍ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ಗುಲ್ಮಾರ್ಗ್ ಪ್ರವಾಸಿ ತಾಣಗಳಲ್ಲಿ ಸವಾರಿ ಮಾಡುತ್ತಿರುವ ವಿಡಿಯೋ ತುಣುಕುಗಳನ್ನು ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರು ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದಾರೆ.

ಈ ವೀಡಿಯೊದಲ್ಲಿ ರಾಹುಲ್ ಗಾಂಧಿ, ಸ್ಕೀ ಕನ್ನಡಕಗಳಲ್ಲಿ ಮತ್ತು ಪ್ರಿಯಾಂಕಾ ಗಾಂಧಿ ಬಿಳಿಯ ಭೂದೃಶ್ಯದ ಮೂಲಕ ಹಿಮವಾಹನವನ್ನು ಸರದಿಯಲ್ಲಿ ಸವಾರಿ ಮಾಡುತ್ತಿದ್ದರೆ, ಇನ್ನೊಬ್ಬರು ಪಿಲಿಯನ್ ಸವಾರ ಇರುವುದು ಕಂಡು ಬರುತ್ತಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದ ಭೂಕುಸಿತಕ್ಕೆ 13 ಮನೆಗಳು ನೆಲಸಮವಾಗಿದೆ

Mon Feb 20 , 2023
  ಶ್ರೀನಗರ,ಫೆ.20- ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದ ಭೂಕುಸಿತಕ್ಕೆ 13 ಮನೆಗಳು ನೆಲಸಮವಾಗಿದೆ. ಸಂತ್ರಸ್ಥ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ರಾಂಬನ್ ಜಿಲ್ಲೆಯ ಸಂಗಲ್ದನ್‍ಗೂಲ್ ರಸ್ತೆ ಸಮೀಪದ ಗೂಲ್ ತಹಸಿಲ್‍ನ ಸಂಗಲ್ದಾನ್ ದುಕ್ಸರ್ ದಲ್ವಾದ ಸುಮಾರು ಒಂದು ಚದುರ ಕಿ.ಮೀ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕುಸಿತದಿಂದ 13 ಮನೆಗಳು ನೆಲಸಮವಾಗಿದ್ದು, ಎಲ್ಲಾ ಸಂತ್ರಸ್ತ ಕುಟುಂಬಗಳನ್ನು ಟೆಂಟ್‍ಗಳಿಗೆ ಸ್ಥಳಾಂತರಿಸಲಾಗಿದೆ ಮತ್ತು ಕಂಬಳಿಗಳು ಮತ್ತು ಪಾತ್ರೆಗಳನ್ನು ಸಹ ಒದಗಿಸಲಾಗಿದೆ. ಸೇನೆಯು […]

Advertisement

Wordpress Social Share Plugin powered by Ultimatelysocial